118 total views
ಕಲಬುರಗಿ, -ನಗರದ ಗ್ರಾಹಕರ ಅನುಕೂಲಕ್ಕಾಗಿ ಹೊಸ ನೀರಿನ ಸಂಪರ್ಕ ಪಡೆಯಲು mrc.gov.in/jalanidhi ವೆಬ್ಸೈಟ್ನ್ನು ಆರಂಭಿಸಲಾಗಿದ್ದು, ಸಾರ್ವಜನಿಕರು ಸದರಿ ವೆಬ್ಸೈಟ್ದಲ್ಲಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಹೊಸ ನಳದ ಸಂಪರ್ಕ ಪಡೆಯಬೇಕೆಂದು ಕಲಬುರಗಿ ಮಹಾನಗರಪಾಲಿಕೆ ಆಯುಕ್ತರು ಹಾಗೂ ಕುಸ್ಸೆಂಪ್ ಉಪ ಯೋಜನಾ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅದೇ ರೀತಿ ಶುಲ್ಕವನ್ನು ಕೂಡ ಆನ್ಲೈನ್ ಮೂಲಕವೇ ಪಾವತಿಸಬೇಕು. ನಳದ ಸಂಪರ್ಕವನ್ನು ಕಡಿತಗೊಳಿಸಲು ಅರ್ಜಿಯನ್ನು ಲಿಖಿತ ರೂಪದಲ್ಲಿ ಕುಸ್ಸೆಂಫ್ ಕೆಯುಐಡಿಎಫ್ಸಿ ಕಚೇರಿಯಲ್ಲಿ ಸಲ್ಲಿಸಬೇಕು.
ಹೊಸ ನಳದ ಸಂಪರ್ಕ/ಕಡಿತಕ್ಕಾಗಿ ಯಾರಿಗೂ ಹಣ ಪಾವತಿಸಬೇಕಾಗಿರುವುದಿಲ್ಲ. ಒಂದು ವೇಳೆ ಯಾರಾದರೂ ಹಣ ಕೇಳುತ್ತಿದ್ದಲ್ಲಿ ನೇರವಾಗಿ ಮಹಾನಗರ ಪಾಲಿಕೆ ನೂತನ ಕಟ್ಟಡ, 2ನೇ ಮಹಡಿ, ಕೊಠಡಿ ಸಂಖ್ಯೆ-48, ಕಲಬುರಗಿ-585101 (ಕುಸ್ಸೆಂಪ್-ಕೆಯುಐಎಫ್ಸಿ) ಕಚೇರಿಗೆ ಸಂಪರ್ಕಿಸಿ ದೂರು ದಾಖಲಿಸಬಹುದಾಗಿದೆ ಎಂದು ಅವರು ತಿಳಿಸಿದಾರೆ. ವರದಿಗಾರರು- ಮಲ್ಲಿಕಾರ್ಜುನ ಬಿ ಹಡಪದ. ಸುಗೂರ ಎನ್