90 total views
ಮೈಸೂರು:-ಅರಣ್ಯ ಇಲಾಖೆ ವತಿಯಿಂದ ರಾಷ್ಟ್ರೀಯ ಹೆದ್ದಾರಿ-275 ರ ಬಂಟ್ವಾಲ-ಬೆAಗಳೂರು ಮುಖ್ಯ ರಸ್ತೆ(ಮೈಸೂರು-ಹುಣಸೂರು) ಹಿನಕಲ್‌ನಿಂದ ಸೆಂಟ್ ಜೋಸಫ್ ಶಾಲೆಯವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಅಡಚಣೆಯಾಗಿರುವ 239 ವಿವಿಧ ಜಾತಿಯ ಮರಗಳು ಮತ್ತು 02 ಸಂಖ್ಯೆ ಮರಗಳ ಕೊಂಬೆಗಳನ್ನು ತೆರವುಗೊಳಿಸಲು, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರಾಷ್ಟ್ರೀಯ ಹೆದ್ದಾರಿ ಉಪ ವಿಭಾಗ ಮೈಸೂರು, ಇವರು ಕೋರಿರುತ್ತಾರೆ.
ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿಗಳು ಮಹಜರು ಕ್ರಮ ಜರುಗಿಸಿದ್ದು, ವಿವಿಧ ಜಾತಿಯ ಒಟ್ಟು 239 ಮರಗಳನ್ನು ಅಳತೆ ಪಟ್ಟಿಯನ್ನು ತಯಾರಿಸಲಾಗಿರುತ್ತದೆ. ಕರ್ನಾಟಕ ವೃಕ್ಷ ಸಂರಕ್ಷಣಾ ಕಾಯ್ದೆ ಪ್ರಕರಣ 8 (3) ರಡಿ 50 ಕ್ಕಿಂತ ಹೆಚ್ಚು ಮರಗಳನ್ನು ಕಡಿಯಬೇಕಾದಲ್ಲಿ ಸಾರ್ವಜನಿಕ ಅಹವಾಲನ್ನು ಸ್ವೀಕರಿಸಿ ಕ್ರಮ ಕೈಗೊಳ್ಳಬೇಕಾಗಿರುವುದರಿಂದ 2022 ರ ನವೆಂಬರ್ 28 ರಂದು ಪೂರ್ವಾಹ್ನ 11 ಗಂಟೆಗೆ ಸಂತೇಮಾಳ, ಹೂಣಸೂರು ಮುಖ್ಯರಸ್ತೆ, ಹೂಟಗಳ್ಳಿ ಬಳಿ ಸಾರ್ವಜನಿಕ ಹವಾಲು ಸಭೆಯನ್ನು ಕರೆಯಲಾಗಿದೆ.
ಈ ಬಗ್ಗೆ ಸಾರ್ವಜನಿಕರಿಂದ ಆಕ್ಷೇಪಣೆಗಳಿದ್ದಲ್ಲಿ ಖುದ್ದಾಗಿ ಸಭೆಯಲ್ಲಿ ಹಾಜರಾಗಿ ಆಕ್ಷೇಪಣೆಗಳನ್ನು ಸಲ್ಲಿಸಬಹುದು ಅಥವಾ ಸದರಿ ದಿನಾಂಕದ ಒಳಗಾಗಿ ವೃಕ್ಷಾಧಿಕಾರಿ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಉ.ಅ.ಸಂ.ಗ.ಳ ತಾಂತ್ರಿಕ ಸಹಾಯಕರು ಮೈಸೂರು ವಿಭಾಗ ಅರಣ್ಯ ಭವನ, 1ನೇ ಮಹಡಿ, 6ನೇ ಕ್ರಾಸ್, ಅಶೋಕಪುರಂ, ಮೈಸೂರು-570008 ಈ ಅಂಚೆ ವಿಳಾಸಕ್ಕೆ ನಿಗಧಿತ ಸಮಯ ಹಾಗೂ ದಿನಾಂಕದೊಳಗೆ ಆಕ್ಷೇಪಣೆ ಸಲ್ಲಿಸಬಹುದು ಎಂದು ಮೈಸೂರು ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ವೃಕ್ಷಾಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.