10 total views
ಅರಸೀಕೆರೆ ತಾಲೋಕ್ ಕಣಕಟ್ಟೆ ಹೋಬಳಿ ಮಾಡಾಳು ಗ್ರಾಮದಲ್ಲಿರುವ ಶ್ರೀ ತಿರುಮಲೇಶ್ವರ ಸ್ವಾಮಿ ಸನ್ನಿಧಾನದಲ್ಲಿ ಕಡೇ ಕಾರ್ತಿಕ ಮಹೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಮಾಡಾಳು ಗ್ರಾಮದ ದೇವರಾದ ಶ್ರೀ ತಿರುಮಲೇಶ್ವರ ಸ್ವಾಮಿಯವರ ದೇಗುಲದ ಸುತ್ತ ಮುತ್ತ ದೀಪಗಳನ್ನು ಬೆಳಗಿಸುವುದರ ಮೂಲಕ ಶ್ರೀ ತಿರುಮಲೇಶ್ವರ ಸ್ವಾಮಿಯವರಿಗೆ ಸಂಪ್ರದಾಯದಂತೆ ವಿಶೇಷ ಪೂಜೆ, ಧೂಪದಾರತಿ ದೀಪದಾರತಿ, ನೈವೇದ್ಯ ಅರ್ಪಿಸಿ ಅದ್ದೂರಿಯಾಗಿ ನೆರವೇರಿಸಿದರು.ಈ ಸಂದರ್ಭದಲ್ಲಿ ಈ ಆಚರಣೆಯಲ್ಲಿ ಶ್ರೀ ತಿರುಮಲೇಶ್ವರ ಸ್ವಾಮಿಯ ದೇಗುಲದ ಗುಡಿ ಗೌಡರು, ಆರಾಧಕರು, ಭಕ್ತರು, ಗ್ರಾಮಸ್ಥರು ಸೇರಿ ಕಾರ್ತಿಕ ಮಹೋತ್ಸವವನ್ನು ಆಚರಿಸಿದ್ದು ನೋಡುಗರ ಕಣ್ಮನ ಸೆಳೆಯುವಂತ್ತಿತ್ತು.
ವರದಿ : ಮಾಡಾಳ್ ರವಿ.