108 total views
ನಮ್ಮ ದೇಶವನ್ನುಆಳಿದ ಎಲ್ಲಾ ಸರ್ಕಾರಗಳು ಸಂವಿಧಾನದ ಎಲ್ಲಾ ಆಶಯಗಳನ್ನು ನಿರ್ಲಕ್ಷ್ಯಸಿದ್ದಾರೆ ಹಾಗೂ ಸಂವಿದಾನವನ್ನೇ ಬದಲಾಯಿಸಲು ಹೊರಟಿದ್ದಾರೆ ಇದರ ಪರಿಣಾಮವಾಗಿ ಬಹುಸಂಖ್ಯಾತ ಭಾರತೀಯರು ಜಾತಿಯತೇ ಮತ್ತು ಕೋಮುವಾದದ ಬಲಿ ಪಶುಗಳಾಗಿದ್ದಾರೆ ಎಂದು ನೆಲಮಂಗಲ ತಾಲ್ಲೂಕು ಬಿ ಎಸ್ ಪಿ ಅಧ್ಯಕ್ಷರಾದ ಎಂ ಮೂರ್ತಿ ಜೈಭೀಮ್ ಜಾಥ ಹಾಗೂ ಬೈಕ್ ರ್ಯಾಲಿ ಗೇ ಚಾಲನೆ ನೀಡಿ ಮಾತನಾಡಿದರು.ಮೂಲಭೂತ ಹಕ್ಕಾಗಿರುವ ಎಸ್ ಸಿ ಮತ್ತು ಎಸ್ ಟಿ ಮತ್ತು ಓ ಬಿ ಸಿ ಜಾತಿ ಗಳ ಮೀಸಲಾತಿಯನ್ನು ಸಂರಕ್ಷಿಸಲು ಇಲ್ಲಿಯ ತನಕ ಒಂದು ಕಾಯ್ದೆಯನ್ನು ಜಾರಿಗೊಳಿಸಿಲ್ಲ. ಇದರ ಪರಿಣಾಮವಾಗಿ ಮೀಸಲಾತಿಯು ಸಂಪೂರ್ಣವಾಗಿ ಭರ್ತಿಯಾಗಿಲ್ಲಹಾಗೂ ನಕಲಿ ಜಾತಿ ಸರ್ಟಿಫಿಕೇಟ್ ಗಳ ದಂಧೆಯನ್ನು ನಿಯಂತ್ರಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆಎಂದರು ಸರ್ಕಾರದ ಎಲ್ಲಾ ಇಲಾಖೆಯಲ್ಲೂ ಹೊರಗುತ್ತಿಗೆಯ ಮೂಲಕ ನೇಮಕ ಮಾಡುತ್ತಾ ರಾಜ್ಯದಲ್ಲಿರುವ ಸಾವಿರಾರು ಯುವಕ ಯುವತಿಯರನ್ನು ಶಾಶ್ವತವಾಗಿ ನಿರುದ್ಯೋಗಿಗಳನ್ನಾಗಿಸಿದೆ. ಕರ್ನಾಟಕ ರಾಜ್ಯದಲ್ಲಿ ಮುವ್ವತ್ತು ಮೂರು ಸಾವಿರ ಹಳ್ಳಿಗಳ ಪೈಕಿ ಹನ್ನೊಂದು ಸಾವಿರಕ್ಕಿಂತ ಕಿಂತ ಹೆಚ್ಚಿನ ಹಳ್ಳಿಗಳಲ್ಲಿ ಎಸ್ ಸಿ ಎಸ್ ಟಿ ಸಮುದಾಯಗಳಿಗೆ ಗಳಿಗೆ ಪ್ರತ್ತೇಕ ಸ್ಮಶಾನ ಭೂಮಿಯು ಇಲ್ಲವಾಗಿದೆ ಈ ಸಾಮಾಜಿಕ ದುರಂತಕ್ಕೆ ಮೂಲ ಕಾರಣವೂ ಸರ್ಕಾರಗಳು ಜಾರಿಗೆ ತಂದಿರುವ ಸಂವಿಧಾನ ವಿರೋಧಿ ಆರ್ಥಿಕ ನೀತಿ ನಿಯಮಗಳೇ ಆಗಿವೆ ಎಂದು ತಿಳಿಸಿದರು. ಜಾತೀಯತೆ ಕೋಮುವಾದದ ಕರಾ ಳ ತೇ ಯಿಂದ ಬಿಡುಗಡೆ ಪಡೆಯಲು ಮತ್ತು ಬಡತನದ ಬೇಗೆಯಿಂದ ವಿಮೋಚನೆಯಾಗಲು ಸಂವಿಧಾನವು ನೀಡಿರುವ ನಮ್ಮ ಮೂಲ ಬೂತ ಹಕ್ಕು ಗಳಿಗಾಗಿ ಈ ನಿಟ್ಟಿನಲ್ಲಿ ಇಡೀ ಕರ್ನಾಟಕ ರಾಜ್ಯದಾದಂತ ನಡೆಯುತ್ತಿರುವ ಜೈ ಭೀಮ್ ಜನಜಾಗೃತಿಜಾಥಾ ಕಾರ್ಯಕ್ರಮವನ್ನು ನೆಲಮಂಗಲದ ಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿಯಾದ ನಂದಿಗುಂದ ಪಿ ವೆಂಕಟೇಶ್, ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಂಯೋಜಕರಾದ ನರಸಿಂಹಯ್ಯ ಜಿಲ್ಲಾ ಅಧ್ಯಕ್ಷರಾದ ಮಹದೇವ ಪಿ ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾದ ಮುನಿರಾಜ್ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ನರಸಿಂಹಮೂರ್ತಿ ಜಿಲ್ಲಾ ಕಾರ್ಯದರ್ಶಿ ಹೇಮಾ ಚಕ್ರಪಾಣಿ, ಚಿಕ್ಕ ರಂಗಣ್ಣ ದೊಡ್ಡಬಳ್ಳಾಪುರ ತಾಲೂಕು ಅಧ್ಯಕ್ಷ ನಂಜೇಶ್, ದೇವನಹಳ್ಳಿ ತಾಲೂಕು ಅಧ್ಯಕ್ಷ ಬಂಗಾರಪ್ಪ ನೆಲಮಂಗಲ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ರುದ್ರೇಶ್ ಬಿ.ಜಿ. ವೆಂಕಟೇಶ್ ಕೆಜಿ, ಮಾರೇಗೌಡ, ರವಿಪ್ರಸಾದ್, ಗಣೇಶ್,ಯೋಗಿಶ್, ಶ್ರೀನಿವಾಸ್ ಮೂರ್ತಿ ಟಿ, ಸೂರ್ಯಕುಮಾರಿ, ಹಾಗೂ ಪದಾಧಿಕಾರಿಗಳು ಕಾರ್ಯಕರ್ತರುಗಳು ಭಾಗವಹಿಸಿದರು.