106 total views
ಶಿವಮೊಗ್ಗ:- ಸಾಮಾಜಿಕ ಜಾಲತಾಣಗಳಿಂದ ಮುದ್ರಣ ಮಾಧ್ಯಮ ಅಸ್ತಿತ್ವ ಪಡೆದುಕೊಳ್ಳುತ್ತಿದೆ. ಇದರ ಜೊತೆಗೆ ಓದುಗರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಡಿವೈಎಸ್ಪಿ ಬಾಲರಾಜ್ ಆತಂಕ ವ್ಯಕ್ತಪಡಿಸಿದರು
ಇಂದು ನಗರದ ತುಂಗಾ ತರಂಗ ದಿನಪತ್ರಿಕೆಯ 2022ರ ವಿಶೇಷಾಂಕ ತುಂಗಾ ನಿಧಿ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಪತ್ರಿಕೆಗಳನ್ನು ಓದುವುದರಿಂದ ಜ್ಞಾನಮಟ್ಟ ಹೆಚ್ಚಾಗುತ್ತದೆ. ನಿತ್ಯ ಪತ್ರಿಕೆ ಓದುವ ಹವ್ಯಾಸವನ್ನು ಚಿಕ್ಕವಯಸ್ಸಿನಿಂದಲೇ ಓಡಿಸಿಕೊಳ್ಳಿ. ಓದುವ ಹವ್ಯಾಸವೇ ನನ್ನನ್ನು ಇಂದಿನ ಮಟ್ಟಕ್ಕೆ ಬಳಸಿತು ಎಂದ ರಲ್ಲದೆ, ಪತ್ರಿಕೆಗಳನ್ನು ಓದುವುದರಿಂದ ಸಾಮಾನ್ಯ ಜ್ಞಾನ ಬೆಳೆಯುವ ಜೊತೆಗೆ ಉತ್ತಮ ಸಂಸ್ಕಾರ ಶಿಸ್ತು ತಾಳ್ಮೆ ವೃದ್ಧಿಯಾಗುತ್ತದೆ. ನಿತ್ಯ ದಿನ ಪತ್ರಿಕೆ ಓದಿದ್ದರೆ ಏನೋ ಕಳೆದುಕೊಂಡ ಹಾಗೆ ಬಾಸವಾಗುತ್ತದೆ ಎಂದರು. ಸಂಪಾದಕ ಎಸ್‌ಕೆ ಗಜೇಂದ್ರ ಸ್ವಾಮಿ ಮಾತನಾಡಿ ತುಂಗಾ ತರಂಗ ದಿನಪತ್ರಿಕೆ ಮುದ್ರಣದ ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಉತ್ತಮ ಹೆಸರು ಮಾಡುತ್ತಿದೆ. ವಿಶೇಷಾಂಕ ಕ್ಯಾಲೆಂಡರ್ ಸಹ ತರುತ್ತಿದೆಎಂದರು. ಈ ಸಂದರ್ಭದಲ್ಲಿ ಸಂಚಾರಿ ಠಾಣೆ ಎ ಎಸ್ ಐ ದಾನಂ ಶ್ರೀನಿವಾಸ್ ಹಾಗೂ ಡಿ ವೈ ಎಸ್ ಪಿ ಕಚೇರಿಯ ಏ ಎಸ್ ಐ ಮಂಜುನಾಥ್ ರವರನ್ನು ಸನ್ಮಾನಿಸಲಾಯಿತು.
ಪತ್ರಕರ್ತರಾದ ಪದ್ಮನಾಭ, ಸಿಜು, ಪಾಷಾ ಭರತೇಶ್ ಚಂದ್ರು ಹಾಗೂ ಅನಿಲ್ ಕುಂಚಿ, ವೀಣಾ ರಾಣಿ ಜೀ. ಸ್ವಾಮಿ ದರ್ಶನ್ ಜಿ, ಸ್ವಾಮಿ ರಘು, ರವಿ ಎ, ಮತ್ತು ಪತ್ರಿಕೆ ವಿನ್ಯಾಸಕ ರಾಕೇಶ್ ಇನ್ನೂ ಇತರರು ಇದ್ದರು.
ವರದಿ. ರಾಘವೇಂದ್ರ. ಸಂಪೋಡಿ