114 total views
ಬೆಳಗಾವಿ : ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯಗಳ ಸಂಕೀರ್ಣ, ಕಣಬರ್ಗಿಯಲ್ಲಿ 20 ನವಂಬರ್ ರಂದು ಕನ್ನಡ ಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಯಿತು. ಕಲಕಂಬ ಬಸ್ ನಿಲ್ದಾಣದಿಂದ ವಸತಿ ನಿಲಯದವರೆಗೆ ತಾಯಿ ಭುವನೇಶ್ವರಿ ಮೂರ್ತಿಯ ಮೆರವಣಿಗೆ ನಡೆಯಿತು ಮೆರವಣಿಗೆ ಉದ್ಘಾಟನೆಯನ್ನು ಮುರಗೇಂದ್ರಗೌಡ ಪಾಟೀಲ್ ಹಾಗೂ ಬೈರಗೌಡ ಪಾಟೀಲ್ ಅವರು ನೆರವೇರಿಸಿದರು. ನಂತರ ಅರಸು ಸಭಾಂಗಣದಲ್ಲಿ ವೇದಿಕೆ ಕಾರ್ಯಕ್ರಮ ನೆರವೇರಿತು.
ಕಾರ್ಯಕ್ರಮ ಉದ್ಘಾಟನೆಗೊಳಿಸಿ ಅಶೋಕ ಚಂದರಗಿ ಅವರು ಮಾತನಾಡಿ ಕರ್ನಾಟಕ ನಾಮಕರಣವಾಗಲು ದೇವರಾಜ ಅರಸು ಅವರ ಕೊಡುಗೆ ಇದೆ. ಅವರ ಇತಿಹಾಸವನ್ನು ತಿಳಿದುಕೊಳ್ಳಿ,ಕನ್ನಡ ಅಸ್ಮಿತೆ ಪ್ರಶ್ನೆ ಬಂದಾಗ ನಾವೆಲ್ಲ ಎದ್ದು ನಿಲ್ಲಬೇಕಾಗುತ್ತದೆ. ಸಮಾಜದಲ್ಲಿ ಸರಳತೆಯಿಂದ ಬದುಕಿ ಅಂದಾಗ ಮಾತ್ರ ಬದುಕಿಗೆ ಬೆಲೆ ಬರುತ್ತದೆ ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿದ್ದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ರಾಘವೇಂದ್ರ ಅನ್ವೇಕರ ಅವರು ಮಾತನಾಡಿ ವಸತಿ ನಿಲಯದಲ್ಲಿ ಸರಿಯಾಗಿ ಓದಿ ಜೀವನ ರೂಪಿಸಿಕೊಳ್ಳಿ ಎಂದು ನಿಲಯರ್ಥಿಗಳಿಗೆ ಕಿವಿ ಮಾತು ಹೇಳಿದರು. ಅಧ್ಯಕ್ಷತೆ ವಹಿಸಿದ್ದರ ಕೆ. ಬಿ. ದೇವಪ್ಪಗೋಳ ಅವರು ಮಾತನಾಡಿ ವಸತಿ ನಿಲಯಗಳು ವಿದ್ಯಾರ್ಥಿಗಳಿಗೆ ಅನುಕೂಲವಾಗಿವೆ ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಬೆಳಗಾವಿ ವಸತಿ ನಿಲಯಗಳ ನಿಲಯಪಾಲಕರಾದ ಶ್ರೀಕಾಂತ ದೇವಲತ್ತಿ, ಕೆಂಪಣ್ಣ ಬಂಗಿ, ಚೇತನ ಡವಳೇಶ್ವರ, ರಾಜು ಗುರವ, ರಾಜು ಬಂಗೋಡಿ, ಅನಿತಾ ಡಾಜಿ, ರಾಜಶ್ರೀ ಲದ್ದಿಮಠ, ಪಲ್ಲವಿ ಅಸೋಡೆ ಉಪಸ್ಥಿತರಿದ್ದರು. ಆನಂದ ಬಿರಾದಾರ ಪ್ರಾರ್ಥಿಸಿದರು ವಿಠ್ಠಲ ಸ್ವಾಗತಿಸಿದರು ಬಸವರಾಜ ಹಡಪದ ನಿರೂಪಿಸಿದರು ಬರಮಪ್ಪ ವಂದಿಸಿದರು.