120 total views
ಕಲಬುರಗಿ:- ರಾಜಕೀಯ ಎಂಬುದು ಜನಸೇವೆಯೆ ಒಂದು ಮಹತ್ತರ. ಸಾಧನ ಎಂದು ಅನಂತಕುಮಾರ ಪ್ರತಿಷ್ಠಾನದ ಅಧ್ಯಕ್ಷ ಪ್ರೋ.ಪಿ.ಸಿ ,ಕೃಷ್ಣಭಟ್ ಅಭಿಪ್ರಾಯಪಟ್ಟರು. ನಗರದ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ , ಕೃಷಿ ಮತ್ತು ಸಾಂಸ್ಕೃತಿಕ ಸಂಘದ ಕಚೇರಿಯಲ್ಲಿ ಬೆಂಗಳೂರಿನ ಅನಂತಕುಮಾರ ಪ್ರತಿಷ್ಠಾನ ಮಂಗಳವಾರ ಆಯೋಜಿಸಿದ್ದ ಅನಂತಪಥ ಮಾಸಿಕ ಸಂಚಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿ. ಸಾಮಾನ್ಯ ಕುಟುಂಬದಿಂದ ಬಂದು ಅತ್ಯಂತ ಉನ್ನತ ಮಟ್ಟಕ್ಕೆ ಬೆಳೆದವರು, ದಿ.ಅನಂತಕುಮಾರ . ರಾಜಕೀಯ ಕ್ಷೇತ್ರದಲ್ಲಿದ್ದರೊ ಸಾಮಾಜಿಕ ಕಳಕಳಿಯೊಂದಿಗೆ ರಾಷ್ಟ್ರ ಪ್ರೇಮಿಯೂ ಆಗಿದ್ದರು. ಅವರ ವ್ಯಕ್ತಿತ್ವ ಮುಂದಿನ ಪೀಳಿಗೆಗೆ ಮಾದರಿ ಎಂದರು.ಇಂದು ರಾಜಕೀಯ ಅಪಮೌಲ್ಯವಾಗುತ್ತಿದೆ. ಆದರೆ ರಾಜಕೀಯವೂ ಪವಿತ್ರ ಕ್ಷೇತ್ರ. ಈ ಮೂಲಕ ಸಾಕಷ್ಟು ಕೆಲಸ ಮಾಡಬಹುದು ಎಂಬುದು ಅನಂತ್ ಕುಮಾರ ತೋರಿಸಿಕೊಟ್ಟಿದ್ದಾರೆ. ಪಕ್ಷ ಕಟ್ಟುವುದನ್ನು ಕಲಿಸಿ. ಮಾರ್ಗದರ್ಶಕರೂ ಆಗಿದ್ದರು. ಸೇವಾಪರತೆ ಹೊಂದಿದ್ದ ಅವರು ಅದಮ್ಯ ಚೇತನರಾಗಿದ್ದರು. ಎಂದು ಶ್ಲಾಘಿಸಿದರು. ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿದ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಸಂಘದ ಅಧ್ಯಕ್ಷ ಡಾ ಬಸವರಾಜ ಪಾಟೀಲ್ ಸೇಡಂ. ನವ ಬೆಂಗಳೂರು ನಿರ್ಮಾಣದಲ್ಲಿ ಅನಂತಕುಮಾರ ಕೊಡುಗೆ ಅಪಾರ ಎಂದು ಕೊಂಡಾಡಿದರು, ಅದಮ್ಯ ಚೇತನ ಸಂಸ್ಥೆಯ ಅಧ್ಯಕ್ಷೆ ತೇಜಸ್ವಿನಿ ಅನಂತಕುಮಾರ ಪ್ರಸ್ತಾವಿಕ ಮಾತನಾಡಿದರು, ಶಾಸಕರಾದ ರಾಜಕುಮಾರ ಪಾಟೀಲ ತೇಲ್ಕೂರ, ಡಾ ಬಿ.ಜಿ ಪಾಟೀಲ್ , ಶಶೀಲ್ ಜಿ ನಮೋಶಿ, ಜೇವರ್ಗಿಯ ಮಾಜಿ ಶಾಸಕರಾದ ದೊಡ್ಡಪ್ಪ ಗೌಡ ಪಾಟೀಲ್ ನರಿಬೋಳ , ಅಮರನಾಥ ಪಾಟೀಲ್ ಮಾತನಾಡಿದ್ದರು, ಕುಡಾ ಅಧ್ಯಕ್ಷ ಅವಿನಾಶ ಕುಲಕರ್ಣಿ, ಕರ್ನಾಟಕ ದ್ವೀದಳದಾನ್ಯ ಅಭಿವೃದ್ದಿ ನಿಗಮದ ಅಧ್ಯಕ್ಷ ವಿದ್ಯಾಸಾಗರ ಶಾಬಾದಿ, ಕುಡಾ ಮಾಜಿ ಅಧ್ಯಕ್ಷ ದಯಾಘನ್ ಧಾರವಾಡಕರ್ ,ಪಾಲಿಕೆ ಸದಸ್ಯ ಡಾ ಶಂಭುಲಿಂಗ ಬಳಬಟ್ಟಿ, ಇತರರಿದ್ದರು, ಪ್ರದೀಪ ಸ್ವಾಗತಿಸಿದ್ದರು,
ವರದಿಗಾರರು:- ಮಲ್ಲಿಕಾರ್ಜುನ. ಬಿ ಹಡಪದ ಸುಗೂರ ಎನ್