104 total views
ಮೈಸೂರು :-ಶಂಕಿತ ಉಗ್ರ ಶಾರಿಖ್ ನಕಲಿ ಆಧಾರ್ ಕಾರ್ಡ್ ಅನ್ನು ಬಳಸಿಕೊಂಡು ಮೈಸೂರಿನಲ್ಲಿ ಬಾಡಿಗೆ ಮನೆ ಪಡೆದಿದ್ದ ಎಂಬ ತನಿಖಾ ಅಂಶವನ್ನು ಗಮನಿಸಿದರೆ, ರಾಜ್ಯದಲ್ಲಿ ನಕಲಿ ಆಧಾರ್ ಕಾರ್ಡ್ ಸೃಷ್ಟಿಸುವ ಜಾಲ ಸಕ್ರಿಯವಾಗಿದೆಯೇ?ಎಂಬ ಅನುಮಾನಗಳು ಹುಟ್ಟಿಕೊಂಡಿವೆ. ಇನ್ನು ನಕಲಿ ಕಾರ್ಡ್ ಸೃಷ್ಟಿಯಲ್ಲಿ ರಾಜ್ಯವೂ ಎರಡನೇ ಸ್ಥಾನದಲ್ಲಿ ಇದೆ ಎಂದು ಕೆಲವು ಪೊಲೀಸ್ ಮೂಲಗಳು ಹೇಳುತ್ತಿವೆ.
ಹಾಗಾದ್ರೆ ನಕಲಿ ಆಧಾರ್ ಕಾರ್ಡ್ ಸೃಷ್ಟಿ ಹೇಗೆ ?
ಕೆಲವು ಪ್ರಕರಣಗಳು ಪತ್ತೆ :
ನಕಲಿ ಆಧಾರ್ ಕಾರ್ಡ್ ಬಳಕೆ ಎಲ್ಲಿ ?
ನಕಲಿ ಅಂತ ಗೊತ್ತಾಗುವುದು ಹೇಗೆ?
ಸಾಮಾನ್ಯವಾಗಿ ಹೀಗೆ ಪಡೆಯಲಾಗುವ ನಕಲಿ ಆಧಾರ್ ಕಾರ್ಡ್ಗಳನ್ನು ಬಹುತೇಕ ಕಡೆಗಳಲ್ಲಿ ತಕ್ಷಣ ಯುಪಿಐ ಕೋಡ್ ಸ್ಕ್ಯಾನ್ ಮಾಡಿ ಪರಿಶೀಲಿಸುವುದಿಲ್ಲ. ಹೀಗಾಗಿ, ತಕ್ಷಣಕ್ಕೆ ನಕಲಿ ಕಾರ್ಡ್ ಅನ್ನು ಪತ್ತೆ ಮಾಡಲು ಸಾಧ್ಯವಾಗುವುದಿಲ್ಲ. ಅದನ್ನು ಸ್ಕ್ಯಾನ್ ಮಾಡಿ ಪರಿಶೀಲಿಸಿದಾಗ ತಕ್ಷಣ ನಕಲಿ ಎಂದು ಪತ್ತೆ ಮಾಡಬಹುದು.
ಮೈಸೂರಿನಲ್ಲಿ ಇದ್ದ ಎನ್ನಲಾದ ಶಂಕಿತ ಉಗ್ರ ಪ್ರೇಮ್ರಾಜ್ ಎಂಬಾತನ ಆಧಾರ್ ಕಾರ್ಡ್ ಡೇಟಾವನ್ನು ದುರ್ಬಳಕೆ ಮಾಡಿಕೊಂಡು ನಕಲಿ ಆಧಾರ್ ಕಾರ್ಡ್ ಸೃಷ್ಟಿಸಿಕೊಂಡಿದ್ದ. ಅದನ್ನು ಸ್ಕ್ಯಾನ್ ಮಾಡಿದಾಗ ನಕಲಿ ಎಂಬುದು ಗೊತ್ತಾಗಿದೆ. ಇಂತಹ ಕಾನೂನು ಬಾಹಿರ ಚಟುವಟಿಕೆಗಳೇನಾದರೂ ನಗರದಲ್ಲಿ ಇವೇಯಾ ಎಂಬ ಬಗ್ಗೆ ನಗರದ ಎಲ್ಲ ಠಾಣೆಗಳ ಪೊಲೀಸರಿಂದ ಮಾಹಿತಿ ಪಡೆಯಲಾಗುವುದು.
-ರಮೇಶ್ ಬಾನೋತ್, ನಗರ ಪೊಲೀಸ್ ಆಯುಕ್ತ, ಮೈಸೂರು.