104 total views
ಸೋನ್ನದ ಶ್ರೀಗಳು
ಜೋಳಿಗೆ ಹಾಕ್ಯಾರ
ಅನಾಥ ಮಕ್ಕಳು ಬೆಳಸಲು
ಅನಾಥ ಮಕ್ಕಳು ಉಳಿಸಲು||
ಸೋನ್ನದ ಶ್ರೀಗಳು
ಜೋಳಿಗೆ ತೂಗ್ಯಾರ
ಬಡಮಕ್ಕಳು ಕಲಿಸಲು
ಶಿಕ್ಷಣ ವಂಚಿತ ಮಕ್ಕಳು ಉಳಿಸಲು||
ಸೋನ್ನದ ಶ್ರೀಗಳು
ಜೋಳಿಗೆ ಹಿಡಿದ್ಯಾರ
ಅನ್ನದಾಸೋಹ ಬೆಳಸಲು
ಬಂದ ಭಕ್ತರಿಗೆ ಊಣಿಸಲು||
ಸೋನ್ನದ ಶ್ರೀಗಳು
ಜೋಳಿಗೆ ಹೋತ್ಯಾರ
ಸಮಾಜ ಸಂಪ್ರದಾಯ ಬೆಳಸಲು
ನಾಗರೀಕತೆಯ ಉಳಿಸಲು||
ಸೋನ್ನದ ಶ್ರೀಗಳು
ಜೋಳಿಗೆ ಹಾಕ್ಯಾರ
ಕನ್ನಡ ನುಡಿ ಸೇವೆ ಬೆಳಸಲು
ಕನ್ನಡ ಸಾಹಿತ್ಯ ಪರಿಷತ್ತುಉಳಿಸಲು|
ಮಹಾಂತೇಶ ಎನ್ ಪಾಟೀಲ
ಯಾತನೂರ ಯುವ ಬರಹಗಾರರ