130 total views
ಮಹಾಲಿಂಗಪುರ : ರನ್ನ ನಮ್ಮ ನಾಡಿನ ಹೆಮ್ಮೆಯ ಕವಿ ಒಂದು ಸಾವಿರ ವರ್ಷಗಳ ಹಿಂದೆ ಬದುಕಿದ ಮಹಾ ಕವಿ ಹಳೆಯ ಬೆಳುಗುಲಿಯಲ್ಲಿ ಜನಿಸಿದ ಜೈನ ಕುಲದಲ್ಲಿ ಹುಟ್ಟಿದ ಅವರ ತಂದೆ ತಾಯಿ ಬಳಗಾರ ವೃತಿಯನ್ನು ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಆದರೆ ರನ್ನನಿಗೆ ಓದಿನಲ್ಲಿ ಆಸಕ್ತಿ ಇದುದ್ದರಿಂದ ಬಳೆಗಾರ ವೃತ್ತಿಯನ್ನು ಬಿಟ್ಟು ಚವುಂಡರಾಯ ಆಶ್ರಯ ಪಡೆದು ಓದಿ ನಮ್ಮ ನಾಡಿನ ಹೆಮ್ಮೆಯ ಕವಿ ಚಕ್ರವರ್ತಿಯಾಗಿ ಬೆಳಗಿದ ಅವರು ಬರೆದ ಗದಾಯುದ್ಧ ಮಹಾಕಾವ್ಯವಾಗಿ ಹೊರಹೋಮ್ಮಿದ್ದು ಇತಿಹಾಸ ಇಂತಹ ಮಹಾಕಾವಿಯ ಸಾಹಿತ್ಯ ಚಿಂತನೆ ನಿರಂತರವಾಗಿ ನಡೆಯಬೇಕು ಎಂದು ಹೇಳಿದರು.
ಅವರು ನಗರದ ಬಸ್ ನಿಲ್ದಾಣದ ಹತ್ತಿರ ಇರುವ ಶ್ರೀ ಗಿರಿಮಲ್ಲೇಶ್ವರ ಆಶ್ರಮದಲ್ಲಿ ದಿ ೧೯ ರಂದು ನಡೆದ ರನ್ನ ವಿಚಾರ ವೇದಿಕೆಯ ೩೫ ನೇ ರನ್ನ ಸಾಹಿತ್ಯ ಸಮೇಳನದ ಸಾರ್ವಧ್ಯಕ್ಷತೆ ವಹಿಸಿದ ಅಥಣಿಯ ನಿವೃತ್ತ ಪ್ರೊ ದೇವೇಂದ್ರ ಬಿಸ್ವಾಗಾರ ಮಾತನಾಡಿ ಈ ವೇದಿಕೆ ಕಳೆದ ೩೫ ವರ್ಷಗಳಿಂದ ಸಾಹಿತ್ಯ ಚಟುವಟಿಕೆಗಳ ಮೂಲಕ ರನ್ನನ ವಿಚಾರಗಳನ್ನು ಬಿತ್ತರಿಸುವ ಕೆಲಸ ಮಾಡಿಕೊಂಡು ಬಂದಿದೆ. ಈ ವೇದಿಕೆಯಿಂದ ಮುಂದೆಯೂ ಸಾಹಿತ್ಯ ಚಟುವಟಿಕೆಗಳು ನಡೆಯಲಿ, ಇಂದಿನ ಯುವ ಜನಾಂಗ ಮೊಬೈಲ್ ದಾಸರಾಗಿದ್ದು. ಅತೀ ಮೊಬೈಲ್ ಬಳಕೆ ಯುವಕರನ್ನು ಮಾನಸಿಕ ಕಿನ್ನತೆಗೆ ಒಳಗಾಗುವಂತೆ ಮಾಡುತ್ತಿದ್ದು. ಈ ಒಂದು ತಾಂತ್ರಿಕ ಯುಗದಲ್ಲಿ ಯುವ ಜನತೆ ಮೊಬೈಲ್ ಬಳಕೆಯನ್ನು ಅವಶ್ಯಕತೆಗೆ ತಕ್ಕಂತೆ ಬಳಸಿ ಮಾನಸಿಕ ಸದ್ರಡತೆಯನ್ನು ಕಾಪಿಡಿಕೊಳ್ಳುವುದು, ಅವಶ್ಯಕತೆ ಇದೇ ಎಂದು ಹೇಳಿದರು.
ನಂತರ ಮಾತನಾಡಿದ ಉಪನ್ಯಾಸಕರಾಗಿ ಆಗಮಿಸಿದ ಶಿಕ್ಷಕರಾದ ಸಿದ್ದಾರೂಢ ಮುಗಳಖೊಡ ರತ್ನತ್ರಯರಲ್ಲಿ ಒಬ್ಬರಾದ ಮಹಾಕವಿ ರನ್ನ ಆತನ ಚರಿತ್ರೆ, ಕವಿತ್ವ ಶಕ್ತಿ, ಸ್ವಾಮಿ ನಿಷ್ಠೆಯನ್ನು ಇಂದಿನ ಯುವಕರು ತಿಳಿದುಕೊಳುವುದು ಅವಶ್ಯವಾಗಿದೆ.ರನ್ನನ ಗದಾಯುದ್ಧ ಕೃತಿಯು ಕನ್ನಡ ಸಾಹಿತ್ಯದಲ್ಲಿ ಅಗ್ರಗಣ್ಯ ಕೃತಿಯಾಗಿದೆ. ಕುರುಕ್ಷೇತ್ರದಲ್ಲಿ ಕೊನೆಯ ೧೮ ನೇ ದಿನ ನಡೆದ ಭೀಮ ದುರ್ಯೋಧನರ ನಡುವೆ ನಡೆದ ಗದಾಯುದ್ಧವನ್ನು ರನ್ನ ತನ್ನ ಕಾವ್ಯದಲ್ಲಿ ಪ್ರಧಾನವಾಗಿಟ್ಟುಕೊಂಡು ಇಡೀ ಮಹಾಭಾರತದ ಕಥೆಯನ್ನು ಸಿಂಹಾವಲೋಕನ ಮಾಡಿದ್ದು ರನ್ನನ ಸಾಹಿತ್ಯದ ಹಿರಿಮೆಗೆ ಸಾಕ್ಷಿಯಾಗಿದೆ ಎಂದು ಹೇಳಿದರು.
ಉದ್ಘಾಟನೆ : ನೇಕಾರ ನಾಯಕ ಅಂಬಾದಾಸ ಕಾಮೂರ್ತಿ ಸಮೇಳನ ಉದ್ಘಾಟಿಸಿ ಮಾತನಾಡಿ ಮಹಾಕಾವಿ ರನ್ನ ರಚಿಸಿದ ಕೃತಿಗಳು ಚಿನ್ನದಂತಿವೆ, ಅದಕ್ಕಾಗಿ ಅವು ಎಷ್ಟೇ ಕಾಲ,ಯುಗಗಳು ಗತಿಸಿದರು ಅವರ ಸಾಹಿತ್ಯ ಚಿನ್ನದಂತೆ ಹೊಳೆಯುತ್ತಿದೆ. ಭೂಮಿ ಇರುವವರೆಗೂ ರನ್ನನ ಸಾಹಿತ್ಯ ಅಳಿಯದೆ ಉಳಿಯುತ್ತದೆ ಎಂದರು.
ಕವಿ ಗೋಷ್ಠಿ : ಸಮೇಳನದಲ್ಲಿ ನಡೆದ ಕವಿ ಗೋಷ್ಠಿಯಲ್ಲಿ ಅಧ್ಯಕ್ಷತೆಯನ್ನು ಗೊಲೇಶ ಅಮ್ಮನಗಿ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಬಾಗಲಕೋಟ ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷರಾದ ವೀಣಾ ಕಾಶಪ್ಪನವರ,ಸಿದ್ದುಗೌಡ ಪಾಟೀಲ,ಗೀತಾ ಅಂಬಾದಾಸ ಕಾಮೂರ್ತಿ,ಆರು ಜನ ಕವಿಗಳು ಭಾಗವಹಿಸಿ ತಾವು ರಚಿಸಿದ ಕವಿತೆಗಳ ವಾಚನ ಮಾಡಿದರು.
ರನ್ನ ಬೆಳಗಲಿಯ ಸಿದ್ದರಾಮ ಶಿವಯೋಗಿಗಳು ಸಾನಿಧ್ಯ ವಹಿಸಿದರು.ರನ್ನ ವಿಚಾರ ವೇದಿಕೆ ಅಧ್ಯಕ್ಷರಾದ ಅಣ್ಣಾಜಿ ಪಡತಾರೆ ಅಧ್ಯಕ್ಷತೆ ವಹಿಸಿದರು, ಎಂ ಎಸ್ ಮುಗಳಖೊಡ, ಸಂಗಪ್ಪ ಹಲ್ಲಿ, ಸಿದ್ದುಗೌಡ ಪಾಟೀಲ, ಈರಪ್ಪ ದಿನ್ನಿಮನಿ,ವೇದಿಕೆ ಮೇಲೆ ಉಪಸ್ಥಿತರಿದ್ದರು.
ಸಮೇಳನದ ನಿರ್ಣಯಗಳು : ಕವಿಚಕ್ರವರ್ತಿ ರನ್ನ ಸಾಹಿತ್ಯ ಸಮ್ಮೇಳನದಲ್ಲಿ ಆರು ನಿರ್ಣಯಗಳನ್ನು ಘೋಷಣೆ ಮಾಡಲಾಯಿತು. ಮಹಾಲಿಂಗಪುರ ನೂತನ ತಾಲೂಕು ಘೋಷಣೆ ಆಗಬೇಕು, ಕವಿರನ್ನ ಜನಿಸಿದ ರನ್ನಬೆಳಗಲಿಯಲ್ಲಿ ರನ್ನ ಸಾಹಿತ್ಯ ಸಾಂಸ್ಕೃತಿಕ ಭವನ ನಿರ್ಮಿಸಬೇಕು, ಮಹಾಲಿಂಗಪುರ ಕೆರೆಗೆ ಪಾರಿಜಾತ ಕೆರೆ ಎಂದು ಹೆಸರಿಡಬೇಕು. ಕನ್ನಡ ನಾಡಿನ ಪ್ರಥಮ ರಂಗಭೂಮಿ ನಟಿ ಕೌಜಲಗಿ ನಿಂಗಮ್ಮ ಸ್ಮರಣೆಯಲ್ಲಿ ಸರ್ಕಾರ ಶ್ರೇಷ್ಠ ಪಾರಿಜಾತ ಕಲಾವಿದರಿಗೆ ಪ್ರಶಸ್ತಿ ನೀಡಬೇಕು, ಮುಧೋಳದ ರನ್ನ ಪ್ರತಿಷ್ಠಾನ ಟ್ರಸ್ಟಿನಲ್ಲಿ ರನ್ನ ವಿಚಾರ ವೇದಿಕೆ ಪ್ರಾತಿನಿಧ್ಯ ಇರಬೇಕು.ಎಂದು ನಿರ್ಣಯಿಸಲಾಯಿತು.
ಇದೇ ಸಂಧರ್ಭದಲ್ಲಿ ಪ್ರೊ ಎಸ್ ಅಯ್ ಕುಂದಗೋಳ ಅವರಿಗೆ ಆದರ್ಶ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು, ಮುಖಂಡರಾದ ಶೇಖರ ಅಂಗಡಿ,ಜಿ ಎಸ್ ಗೊಂಬಿ, ಡಾ ಸಂಗಮೇಶ ಹಿಡಕಲ್, ಚಂದ್ರಪ್ಪ ದೋಣಿ, ಮುದಕಪ್ಪ ದೋಣಿ, ಗೊಲೇಶ ಅಮ್ಮನಗಿ, ಬಸವರಾಜ ಮೇಟಿ, ಈರಣ್ಣ ಹಲಗತ್ತಿ,ಮಹೇಶ ಇಟಕನ್ನವರ.ಭಾಗ್ಯಶ್ರೀ ಕೋಟಿ,ಲತಾ ಆರಿ,ಪ್ರಭು ಧಪಾಳಪುರ,ಪ್ರಕಾಶ ಮರೆಗುದ್ದಿ,ಚೇತನ ಹುಣಸ್ಯಾಳ, ಸೇರಿದಂತೆ ಹಲವರು ಇದ್ದರು ಕಾರ್ಯಕ್ರಮವನ್ನು ಭೀಮಶಿ ನೇಗಿನಾಳ,ನಿರೂಪಿಸಿದರು, ಲಕ್ಷ್ಮಣ ಕಿಶೋರ ಸ್ವಾಗತಿಸಿದರು.ಡಾ ಎಂ ಎಸ್ ಕದ್ದಿಮನಿ,ವಂದಿಸಿದರು.