96 total views
ಅರಸೀಕೆರೆ ತಾಲ್ಲೋಕ್, ಹಣ ಕಣಕಟ್ಟೆ ಹೋಬಳಿ, ಮಾಡಾಳು ಚಿಕ್ಕೋಂಡನಹಳ್ಳಿ ಗ್ರಾಮಗಳ ನಡುವೆ ಇರುವ ಶ್ರೀ ಅರಳಿ ಮರದಮ್ಮನವರ ಸನ್ನಿಧಾನದಲ್ಲಿ ಶುಕ್ರವಾರದಂದು ಸಂಜೆ ಕಾರ್ತಿಕ ಮಹೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಈ ಕಾರ್ತಿಕ ಮಹೋತ್ಸವದಲ್ಲಿ ಮಾಡಾಳು ಗ್ರಾಮದ ದೇವರುಗಳಾದ
ಶ್ರೀ ತಿರುಮಲೇಶ್ವರ ಸ್ವಾಮಿ, ಶ್ರೀ ಬಸವೇಶ್ವರ ಸ್ವಾಮಿಯವರ ದಿವ್ಯ ಸಾನಿಧ್ಯದಲ್ಲಿ,ಮಾಡಾಳು ಹಾಗೂ ಆಜುಬಾಜು ಗ್ರಾಮಸ್ಥರು ಸೇರಿ ದೀಪಗಳನ್ನು ಬೆಳಗಿಸುವುದರ ಮೂಲಕ ಅದ್ದೂರಿಯಾಗಿ ಕಾರ್ತಿಕ ಮಹೋತ್ಸವವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಧಾರ್ಮಿಕ ಕಾರ್ಯಕ್ರಮಕ್ಕೆ ಆಗಮಿಸಿದ್ದ
ಸದ್ಭಕ್ತರಲ್ಲರಿಗೂ ಪ್ರಸಾದದ ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ಮಾಡಲಾಗಿತ್ತು. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಗ್ರಾಮಸ್ಥರೆಲ್ಲರೂ ಸೇರಿ ಅದ್ದೂರಿಯಾಗಿ ಆಚರಿಸಿದ್ದು ಬಹಳ ವಿಶೇಷವಾಗಿತ್ತು.
ವರದಿ : ಮಾಡಾಳ್ ರವಿ.