114 total views
ಅರಸೀಕೆರೆ ತಾಲ್ಲೋಕ್ ಕಣಕಟ್ಟೆ ಹೋಬಳಿ ಮಾಡಾಳು ಗ್ರಾಮದಲ್ಲಿ ದಿನಾಂಕ -11-11-2022 ರ ಶುಕ್ರವಾರದಂದು ಅಪರಿಮಿತ ಕಾನೂನು ಅರಿವು ಮೂಲಕ ನಾಗರಿಕ ಸಬಲೀಕರಣ ಆಂದೋಲನ
ಕಾರ್ಯಕ್ರಮವನ್ನು ಮಾಡಾಳು ಶ್ರೀ ಸ್ವರ್ಣಗೌರಿ ಪ್ರೌಢಶಾಲೆಯ ಆವರಣದಲ್ಲಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಅರಸೀಕೆರೆಯ ಘನ ನ್ಯಾಯಾಲಯಗಳ ಗೌರವಾನ್ವಿತ ನ್ಯಾಯಾದೀಶರುಗಳಾದ ಮಾನ್ಯ, ಶ್ರೀ ಅನಿತಾರವರು ಹಾಗೂ ಮಾನ್ಯ,ಶ್ರೀ ರಮ್ಯಾ ರವರು ಆಗಮಿಸಿ, ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ ಅಪಘಾತ, ಬಾಲ್ಯ ವಿವಾಹ, ಕಳಪೆ ಬಿತ್ತನೆಬೀಜಗಳು,, ಹೀಗೆ ವಿವಿಧ ರೀತಿಯಲ್ಲಿ ಕಾನೂನು ಮೀರಿದರೆ ಆಗುವ ಕಾನೂನು ಕ್ರಮಗಳ ಬಗ್ಗೆ ಮಕ್ಕಳಿಗೆ, ಹಾಗೂ ಗ್ರಾಮಸ್ಥರಿಗೆ ಸಾಮಾನ್ಯ ಕಾನೂನಿನ ಅರಿವು ಮೂಡಿಸಿದ್ದು ಬಹಳ ವಿಶೇಷವಾಗಿತ್ತು.ಈ ಸಂದರ್ಭದಲ್ಲಿ ನ್ಯಾಯವಾದಿಗಳಾದ ಶ್ರೀ ವಿಜಯ್ ಕುಮಾರ್,
ಶ್ರೀ ನಟರಾಜ್ ಹಾಗೂ ಇತರರು ಮತ್ತು ಗ್ರಾಮ ಪಂಚಾಯಿತಿ ಸದಸ್ಯರು, PDO, ವೈದ್ಯಾಧಿಕಾರಿಗಳಾದ ಶ್ರೀ ರಮೇಶ್ ರವರು, ಪೋಲೀಸ್ ಸಿಬ್ಬಂದಿ ವರ್ಗದವರು, ಶಿಕ್ಷಕ ವೃಂದದವರು, ಶಾಲಾ ಮಕ್ಕಳು, ಗ್ರಾಮಸ್ಥರು ಸೇರಿಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ವರದಿ : ಮಾಡಾಳ್ ರವಿ.