154 total views
ಶಿವಮೊಗ್ಗ ತಾಲ್ಲೂಕು ಆಯನೂರು ಹೋಬಳಿ ಸಿರಿಗೆರೆ ಗ್ರಾಮಪಂಚಾಯತಿ ವ್ಯಾಪ್ತಿಯ ಮಂಜರಿಕೊಪ್ಪ ಗ್ರಾಮಕ್ಕೆ 20022/23 ನೆ ಸಾಲಿನ 15ನೇ ಹಣಕಾಸಿನಲ್ಲಿ ಮಂಜರಿಕೊಪ್ಪ ಗ್ರಾಮದ ಮುತ್ತಪ್ಪನವರ ಮನೆಯಿಂದ ಅರಬಳ್ಳಿ ಸ್ವಾಮಿ ನಾಯ್ಕ ಅವರ ಮನೆಯವರೆಗೂ ಇರುವ 350 ಮೀಟರ್ ರಸ್ತೆಗೆ ಗ್ರಾವಲ್ ಹಾಕಿ ಅಭಿವೃದ್ದಿಯ ಕಾಮಗಾರಿಗೆ 1ಲಕ್ಷ ರೂ. ಹಣ ಇಟ್ಟಿದ್ದು, ಈ ಕೆಲಸವನ್ನು ಗುತ್ತಿಗೆದಾರರ ಪರವಾನಿಗೆ ಇಲ್ಲದ ಸಿರಿಗೆರೆಯ ರಮೇಶ್ ಎಂಬ ವ್ಯಕ್ತಿಗೆ ಗುತ್ತಿಗೆ ಕೊಟ್ಟಿದ್ದು, ದಿ.17.11.2022ರ ಮಧ್ಯಾಹ್ನ 12 ಗಂಟೆಗೆ ಸದರಿ ವ್ಯಕ್ತಿ ಜೆಸಿಬಿ ಮತ್ತು ಟ್ರ್ಯಾಕ್ಟರ್ ಗಳನ್ನು ತರಿಸಿ ಕೆರೆಯ ಚವಳು ಮಣ್ಣನ್ನು ರಸ್ತೆಗೆ ಹಾಕುತ್ತಿರುವಾಗ ಗ್ರಾಮಸ್ಥರು ಮತ್ತು ಸ್ಥಳೀಯ ಪತ್ರಿಕೆ ವರದಿ ಗಾರರು ಹೋಗಿ ಕೆಲಸ ನಿಲ್ಲಿಸಿ ಕೆಲಸದ ಆದೇಶ ಪ್ರತಿ ಕೊಡಿ, ಹಾಗೂ ರಸ್ತೆಗೆ ಚವಳು ಮಣ್ಣು ಬೇಡ ಎಸ್ಟಿಮೇಟ್ ನಲ್ಲಿ ಇರುವಂತೆ ಗ್ರಾವಲ್ ಹಾಕಿ ಎಂದು ಹೇಳಿದಾಗ ಗುತ್ತಿಗೆದಾರ ಎಂದು ಬಂದಿದ್ದ ವ್ಯಕ್ತಿ ಹಾಗೂ ಆತನ ಸಹಚರರು ಅವ್ಯಾಚ್ಯ ಶಬ್ಧಗಳಿಂದ ಬೈದು ನೀವು ಯಾರು ಕೇಳೋಕೆ ಎಂದಿದ್ದು ಅಲ್ಲದೆ ಪತ್ರಿಕಾ ವರದಿಗಾರರಾದ ರಾಘವೇಂದ್ರ ಸಂಪೋಡಿ ಯವರಿಗೆ ಕೆಟ್ಟ ಶಬ್ದ ದಿಂದ ಬೈದು ಹಲ್ಲೆ ಮಾಡಲು ಮುಂದಾಗಿದ್ದಾರೆ, ಆಗ ಸ್ಥಳೀಯರು ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸಿದ್ದಾರೆ, ಅಷ್ಟಾದರೂ ಸಹ ಬಿಡದೆ ಪತ್ರಿಕಾ ವರದಿಗಾರರಿಗೆ ರಮೇಶ್ ಜೀವಬೆದರಿಕೆ ಹಾಕಿರುತ್ತಾರೆ. ಆಗ ಗ್ರಾಮಪಂಚಾಯತಿ ಸದಸ್ಯರಾದ ಕಿಡದುಂಬಿ ಜಗದೀಶ್ ಸ್ಥಳಕ್ಕೆ ಬಂದಿದ್ದು ಅವರ ಜೊತೆಗೆ ಎಸ್ಟಿಮೇಟ್ ಕಾಪಿ ತೋರಿಸಿ ಕೆಲಸ ಮಾಡಿ ಎಂದಾಗ ಅವರು ಸಹ ಅಸಭ್ಯ ವರ್ತನೆ ತೋರಿದ್ದು, ಹೀಗೆ ಹಳ್ಳಿ ಗಳಲ್ಲಿನ ಕೆಲಸ ಗಳೆಲ್ಲ ಕಳಪೆ ಹಾಗೂ ಕೆಲಸಕ್ಕೆ ಅಗತ್ಯ ವಿರುವ ಹಣಕ್ಕಿಂತ ಎರಡು ಪಟ್ಟು ಹಣ ವಿನಿಯೋಗ ಮಾಡುವುದು ಅಪರಾಧ ಅಂತ ಗೊತ್ತಿದ್ದು ಸಹ PDO, ಗ್ರಾಮಪಂಚಾಯತಿ ಸದಸ್ಯರು, ಗುತ್ತಿಗೆದಾರರು ಎಲ್ಲರು ಸೇರಿ ತಿಂದು ತೇಗುವ ಕೆಲಸ ನಡೆಯುತ್ತಿದೆ. ಸಂಬಂಧ ಪಟ್ಟ ಅಧಿಕಾರಿಗಳು ಇವರೆಲ್ಲರ ಮೇಲೆ ಅಗತ್ಯ ಕ್ರಮ ಜರುಗಿಸದೆ ಹೋದರೆ ಮುಂದೊಂದು ದಿನ ಪ್ರಶ್ನೆ ಮಾಡಿದವರ ಜೀವ ಹೋಗುವುದು ನಿಶ್ಚಿತ.
ವರದಿ. MH. ರಾಘವೇಂದ್ರ ಸಂಪೋಡಿ