168 total views
ಇದೆ ತಿಂಗಳು ದಿನಾಂಕ 5,-11-2022ಹಾಗು6-11-2022ರಂದು ಬೆಂಗಳೂರಿನಲ್ಲಿ ನಡೆಯುವ 13ನೇ ರಾಜ್ಯ ಮಟ್ಟದ ಕರಾಟೆ ಚಾಂಪಿಯನ್ಶಿಪ್ ಗೆ ಕಲ್ಯಾಣ ಕರ್ನಾಟಕ ಸ್ಪೋರ್ಟ್ಸ್ ಕರಾಟೆ ಅಧ್ಯಕ್ಷರಾದ ದಶರಥ ದುಮ್ಮನಸೂರ ಅವರ ಮಾರ್ಗದರ್ಶನದಲ್ಲಿ ಸೇಡಮ್ ನಗರದ ತಾಲ್ಲೂಕು ಪಂಚಾಯತ ಆವರಣದಲ್ಲಿನ ಕರಾಟೆ ತರಬೇತಿ ಕೇಂದ್ರದ ಮಕ್ಕಳಾದ ಕು.ವಿದ್ಯಾಶ್ರೀ ನೀಲಹಳ್ಳಿ ನರ್ಮದಾದೇವಿ ಪದವಿ ಪೂರ್ವ ಕಾಲೇಜು, ಹಾಗೂ ಬಸವರಾಜ ಜಮಾದಾರ ಸ.ಪ್ರೌ.ಶಾಲೆ ನೀಲಹಳ್ಳಿ,… ಮಲ್ಲಿಕಾರ್ಜುನ ಭರತನೂರ.ವಿಶ್ವಧಾಮ ಶಾಲೆ. ಸೇಡಮ್,… ತೇಜಶ್ವಿನಿ ಬಡಿಗೇರ ಗರಗಪಳ್ಳಿ. ವಿದ್ಯಾಮಂದಿರ ಆಂಗ್ಲ ಮಾದ್ಯಮ ಶಾಲೆ ಸೇಡಮ್… , ಶ್ರೀರಾಮ್ ಭರತನೂರ್ ವಿಶ್ವಾಧಾಮ ಶಾಲೆ ಸೇಡಮ್,… ಆಯ್ಕೆಯಾಗಿದ್ದಾರೆಂದು ಝೆನ್ ಶಿಟೋರಿಯೊ ಕರಾಟೆ ತಾಲ್ಲೂಕ ಅಧ್ಯಕ್ಷರಾದ ಹಣಮಂತ ಭರತನೂರ ಮತ್ತು ಅಖಿಲ ಕರ್ನಾಟಕ ಸ್ಪೋರ್ಟ್ಸ್ ಕರಾಟೆ ತಾಲ್ಲೂಕ ಅಧ್ಯಕ್ಷ ಬಸವರಾಜ ಕಾಳಗಿ ತಿಳಿಸಿದರು. ಕರಾಟೆಯ ಶಿಕ್ಷಕರಾದ ಕಾಶಿನಾಥ ತರ್ನಳ್ಳಿ, ವಿಜಯಕುಮಾರ ಕಟ್ಟಿಮನಿ, ಬಬುಲು ಅವ್ರು ಇ ಸಂದರ್ಭದಲ್ಲಿ ಉಪಸ್ಥಿತರಿದ್ದರು