100 total views
ಮೈಸೂರು : ದರಕಾಸ್ತು ಸಮಿತಿ ಸಭೆ ಪದೇ ಪದೇ ಮುಂದೂಡಿಕೆಯಾಗುತ್ತಿದ್ದು, ರೈತ ಸಾಗುವಳಿ ಸಿಗದೆ ಬೇಸರಗೊಂಡು ರೈತನೊಬ್ಬ ತಹಶೀಲ್ದಾರ್ ಎದುರಿನಲ್ಲೇ ನೇಣು ಬಿಗಿದುಕೊಂಡುಮೈಸೂರು ಜಿಲ್ಲೆ ಎಚ್.ಡಿ.ಕೋಟೆ ಪಟ್ಟಣದ ಮಿನಿ ವಿಧಾನಸೌಧದ ಮುಖ್ಯದ್ವಾರದ ಬಳಿ ರೈತ ಮಹೇಶ ಹಗ್ಗ ಬಿಗಿದು ಆತ್ಮಹತ್ಯೆಗೆ ಯತ್ನ ನಡೆಸಿದ್ಧಾನೆ. ರೈತರ ಸಮಯ ಪ್ರಜ್ಞೆಯಿಂದ ಅನಾಹುತ ತಪ್ಪಿದೆ. ಬೇಸರಗೊಂಡ ರೈತರಿಂದ ಮಿನಿವಿಧಾನಸೌಧ ಎದುರಿನಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಆತ್ಮಹತ್ಯೆಗೆ ಯತ್ನಿಸಿದ್ಧಾನೆ.ಶಾಸಕರು, ಸದಸ್ಯರು ಆಗಮಿಸದ ಹಿನ್ನೆಲೆ ಸಭೆ ಮುಂದೂಡಿಕೆ ಮಾಡಲಾಗಿದೆ. ದರಕಾಸ್ತು ಸಮಿತಿ ಅಧ್ಯಕ್ಷ ಶಾಸಕ ಅನಿಲ್, ಸದಸ್ಯರ ವಿರುದ್ದ ರೈತರ ಆಕ್ರೋಶ ಹೊರಹಾಕಿದ್ಧಾರೆ. ಶಾಸಕ ಅನಿಲ್ ರಾಜಿನಾಮೆ ನೀಡಲಿ ಎಂದು ರೈತ ವಿದ್ಯಾರ್ಥಿನಿ ಆಕ್ರೋಶ ಹೊರಹಾಕಿದ್ಧಾರೆ. ಸಭೆಯಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿದ್ದು, ಪ್ರತಿಭಟನಾಕಾರರ ಮನವೊಲಿಸಲು ತಹಸೀಲ್ದಾರ್ ರತ್ನಾಂಬಿಕ ಯತ್ನ ನಡೆಸಿದ್ಧಾರೆ.