136 total views
ಮೈಸೂರು :-ಜಿಲ್ಲಾಡಳಿತ ಹಾಗೂ ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಕಲಾಮಂದಿರ ಆವರಣ ದಲ್ಲಿ ವಾಲ್ಮೀಕಿ ಜಯಂತಿ ಯನ್ನು ಆಚರಣೆ ಯನ್ನು ಮಾಡಲಾಯಿತು. ಶಾಸಕರು ಆದ ಜಿ. ಟಿ. ದೇವೇಗೌಡ ಅವರು ಕಾರ್ಯಕ್ರಮ ವನ್ನು ಉದ್ಘಾಟನೆ ಯನ್ನು ಮಾಡಿದರು ಅವರು ಜಗತ್ತಿಗೆ ರಾಮಾಯಣ ಮಹಾಕಾವ್ಯವನ್ನು ನೀಡಿ ಸಮಾಜದ ಪರಿವರ್ತನೆ ಕಾರಣವಾಗಿರುವ ವಾಲ್ಮೀಕಿ ಅವರ ಜೀವನದರ್ಶಗಳನ್ನು ಇಂದಿನ ಯುವ ಜನತೆ ಅರಿಯುವ ಅವಶ್ಯಕತೆ ಇದೆ ಎಂದು ಹೇಳಿದರು.ಹಾಗೂ ಅಧ್ಯಕ್ಷತೆ ವಹಿಸಿದ ಶಾಸಕ ನಾಗೇಂದ್ರ ಮಾತನಾಡಿ ಸಾಮಾನ್ಯ ವರ್ಗದಲ್ಲಿ ಹಲವು ಸದಸ್ಯರು ಇದ್ದರೂ ನಾಯಕ ಸಮಾಜಕ್ಕೆ ಅವಕಾಶ ಮಾಡಿಕೊಡಬೇಕೆಂದು ಶಿವಕುಮಾರ್ ಅವರನ್ನು ಮಹಾಪೌರ ಮಾಡಲಾಯಿತು. ಒಬ್ಬ ಆದಿವಾಸಿ ಸಮಾಜಕ್ಕೆ ಸೇರಿದ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿ ಯಾಗಿ ಮಾಡಲಾಗಿದೆ. ಪರಿಶಿಷ್ಟ ಜಾತಿ, ಪಂಗಡ ದವರ ಮೀಸಲಾತಿ ಹೆಚ್ಚಿಸಲು ಬಿಜೆಪಿ ಸರಕಾರ ತೀರ್ಮಾನ ತೆಗೆದುಕೊಂಡಿದೆ. ಹಾಗೂ ಬೇಡಿಕೆಗಳನ್ನು ಈಡೇರಿಸುತ್ತ ಬಂದಿದೆ ಎಂದು ಹೇಳಿದರು. ಹಾಗೂ sslc ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಚಾರುಕೀರ್ತಿ ಯನ್ನು ಸನ್ಮಾನಿಸಿ ಒಂದು ಲಕ್ಷ ಪ್ರೋತ್ಸಾಹ ದ ಚೆಕ್ ಅನ್ನು ನೀಡಲಾಯಿತು. ಈ ಕಾರ್ಯಕ್ರಮಕ್ಕೆ ಮಹಾಪೌರ ಶಿವಕುಮಾರ್, ಶಾಸಕ ತನ್ವಿರ್ ಸೆಟ್, ವಿಧಾನ ಪರಿಷತ್ ಸದಸ್ಯ ತಿಮ್ಮಯ್ಯ, ಜಿಲ್ಲಾಧಿಕಾರಿ ಗೌತಮ್ ಬುಗಾದಿ, ಹಲವಾರು ಗಣ್ಯರು ಬಾಗಿ ಯಾಗಿದ್ದರು
ವರದಿ :-ಸುಮಾ