308 total views
ಕಲಬುರ್ಗಿ ಜಿಲ್ಲೆಯ ಎಸ ಆರ ಮೇಹತಾ ಸ್ಕೂಲ್ ನಲ್ಲಿ ನಡೆದ ದಸರಾ ಕ್ರೀಡಾಕೂಟದ ಅಂಗವಾಗಿ ಕರಾಟೆ ಸ್ಪರ್ಧೆ ಏರ್ಪಡಿಸಲಾಗಿತ್ತು ಈ ಸ್ಪರ್ಧೆಯಲ್ಲಿ ಸೇಡಂ ತಾಲೂಕಿನ ವಿದ್ಯಾರ್ಥಿಗಳು ಜಯಗಳಿಸಿದ್ದಾರೆ ಎಂದು ಕಲ್ಯಾಣ ಕರ್ನಾಟಕ ಪ್ರೆಸಿಡೆಂಟ್ ಜನ್ನ ಶಿಟೋರಿಯೋ ಕರಾಟೆ ಅಖಿಲ ಕರ್ನಾಟಕ ಕರಾಟೆ ಉಪಾಧ್ಯಕ್ಷರು ದಶರಥ ದುಮ್ಮನ್ಸೂರ್ ಅವರು ಹರ್ಷ ವ್ಯಕ್ತಪಡಿಸಿದ್ದಾರೆ ಅಲ್ಲದೇ ಕಟಾ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದವರು ಸುನಿಲ್ ಹಳಿಮನಿ
ಹಾಗೂ ಕುಮೀತೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಕಾಮಾಕ್ಷಿ ದೊಡ್ಮನಿ ಹಾಗೂ ಕಾವ್ಯ ಬಿ ಕುಮಿತೆಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ ಎಂದು ಸೇಡಂ ತಾಲೂಕಿನ ಕರಾಟೆ ಶಿಕ್ಷಕ ಸೈಬಣ್ಣ ಸಿ ಅಳ್ಳೋಳಿ ಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ ಸೇಡಂ ತಾಲೂಕಿನ ವಿದ್ಯಾರ್ಥಿಗಳು ರಾಜ್ಯಮಟ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಯಶಸ್ಸು ಸಾಧಿಸಲಿ ಎಂದು ಸೇಡಂ ತಾಲೂಕಿನ ಕರಾಟೆ ಅಧ್ಯಕ್ಷರಾದ ಹಣುಮಂತ ಭರತನೂರ್ ಶುಭ ಹಾರೈಸಿದ್ದಾರೆ ಸೆನ್ಸಾಯ ಬಸವರಾಜ್ ಕಾಳಗಿಕರ್ ಸೆನ್ಸಾಯ ಅನಿಲ್ ಡಿ ಹಳಿಮನಿ ಹಾಗೂ ಸೇಡಂ ತಾಲೂಕಿನ ಎಲ್ಲಾ ಕರಾಟೆ ಶಿಕ್ಷಕರು ಹರ್ಷ ವ್ಯಕ್ತಪಡಿಸಿದ್ದಾರೆ …
ವರದಿ ಜಟ್ಟಪ್ಪ ಎಸ್ ಪೂಜಾರಿ