224 total views
ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಸ. ಪ್ರೌ. ಶಾಲೆ ಬೆಂಡೆಬೆಂಬಳಿಯ ಹೆಣ್ಣು ಮಕ್ಕಳು ಕ್ರೀಡೆಯಲ್ಲಿ ಜಿಲ್ಲಾ ಮಟ್ಟದಿಂದ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.100ಮೀ ಲಕ್ಷ್ಮಿ ತಂದೆ ನಾಗಪ್ಪ, 200ಮೀ ಶಿಲ್ಪಾ ತಂದೆ ನಿಂಗಪ್ಪ,ಹಾಗೂ 100ಮೀ ರೀಲೆಯಲ್ಲಿ ಕೂಡ ಪ್ರಥಮಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ಜಿಲ್ಲಾ ದೈಹಿಕ ಶಿಕ್ಷಕರು, ಕ್ಷೇತ್ರ ಶಿಕ್ಷಣಧಿಕಾರಿಗಳು,ಶಿಕ್ಷಣ ಸo ಯೋಜಕರು ವಿದ್ಯಾರ್ಥಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಿದರು. ಈ ಸಾಧನೆಗೆ ರೂವಾರಿಗಳಾದ ತಂಡದ ಕೋಚ್ ಮೊಹಮ್ಮದ್ ಜಾಫರ್, ಶಾಲೆಯ ದೈಹಿಕ ಶಿಕ್ಷಕರು ಪಾರ್ವತಿ ಮೇಡಂ,ಪರ್ವತರೆಡ್ಡಿ ಸರ್, ಬಸ್ಸು ಬಾವೂರ್,ತಮ್ಮಣ್ಣ ಮುಂದಲ್ಮನಿ,ಐಲಿಂಗ ಸುಣಗಾರ ಹಾಗೂ ಇನ್ನೂ ಅನೇಕ ಕ್ರೀಡಾ ಪ್ರೋತ್ಸಾಹೀಗಳು ಉಪಸ್ಥಿತರಿದ್ದರು.
ವರದಿ :ಹಸೇನಸಾಬ ರೋಟ್ನಡಗಿ