106 total views
ಗಂಗಾವತಿ : ಎಸ್ ಟಿ ಮೀಸಲಾತಿ ಹೆಚ್ಚಿಸಬೇಕೆಂದು ಒತ್ತಾಯಿಸಿ ಶ್ರೀ ಪ್ರಸನ್ನಾನಂದಪುರಿ ಸ್ವಾಮಿಗಳು 235 ದಿನಗಳಿಂದ ನಡೆಸುತ್ತಿರುವ ಅಹೋ ರಾತ್ರಿ ಧರಣಿ ಸತ್ಯಾಗ್ರಹವನ್ನು ಬೆಂಬಲಿಸಿ ಮತ್ತು ಎಸ್ ಟಿ ಮೀಸಲಾತಿಯನ್ನು ಹೆಚ್ಚಳ ಮಾಡಲೇಬೇಕೆಂದು ಒತ್ತಾಯಿಸಿ. ವಾಲ್ಮೀಕಿ ಸ್ವಯಂಸೇವಕ ಸಂಘದ ಪದಾಧಿಕಾರಿಗಳು ಗಂಗಾವತಿ ತಹಸಿಲ್ದಾರ್ ಮೂಲಕ ಮಾನ್ಯ ಮುಖ್ಯಮಂತ್ರಿಗಳಾದ ಎಸ್ ಆರ್ ಬೊಮ್ಮಾಯಿ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳಾದ ಜಿ ಪಂಪಾಪತಿ ನಾಯಕ ಮಾತನಾಡಿ ನಮ್ಮ ಸಮುದಾಯ ಜನಸಂಖ್ಯೆಯ ಅನುಗುಣವಾಗಿ ಮೀಸಲಾತಿ ಹೆಚ್ಚಳ ಮಾಡಬೇಕೆಂದು ಹಲವು ದಿನಗಳಿಂದ ಮೀಸಲಾತಿ ಕೇಳುವುದು ನಮ್ಮ ಹಕ್ಕು .ಚುನಾವಣೆ ಸಮಯದಲ್ಲಿ ಹಲವು ಪಕ್ಷಗಳು ನಮಗೆ ಮೀಸಲಾತಿ ಹೆಚ್ಚಳದ ಭರವಸೆಯನ್ನು ನೀಡಿದ್ದರು .ಸಹ ಅಧಿಕಾರಕ್ಕೆ ಬಂದ ಮೇಲೆ ಆ ವಿಷಯದ ಬಗ್ಗೆ ಮಾತನಾಡದೆ ದೂರ ಉಳಿದಿದ್ದಾರೆ. ಇದು ರಾಜಕಾರಣಿಗಳ ಧ್ವಿಗುಣ ನೀತಿಯನ್ನ ತೋರಿಸುತ್ತದೆ. ಆದಷ್ಟು ಕೂಡಲೇ ಮೀಸಲಾತಿ ಹೆಚ್ಚಳ ಮಾಡಿ ಆದೇಶ ಹೊರಡಿಸಬೇಕು ಇಲ್ಲದೆ ಹೋದಲ್ಲಿ ರಾಜ್ಯಾದ್ಯಂತ ಪಾದಯಾತ್ರೆ ಮೂಲಕ ವಿಧಾನಸೌಧವನ್ನು ಮುತ್ತಿಗೆ ಹಾಕಲಾಗುವುದು ಎಂದು ಹೇಳಿದರು. ಈ ಸಂದರ್ಭದಲ್ಲಿ ಪದಾಧಿಕಾರಿಗಳಾದ ಹನುಮೇಶ ನಾಯಕ. ಮಂಜುನಾಥ ನಾಯಕ ನಾಗಲಿಂಗಪ್ಪ ನಾಯಕ. ಶರಣಪ್ಪ ನಾಯಕ .ಇನ್ನಿತರರು ಮನವಿ ಸಲ್ಲಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವರದಿ : ಶರಣಪ್ಪ ಗಂಗಾವತಿ