206 total views
ಜೇವರ್ಗಿ ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಡಚಿಯಲ್ಲಿ ಮಕ್ಕಳಿಗೆ ವಿತರಿಸಲಾಗುವ ಆಹಾರದಲ್ಲಿ ನ್ನುಷಿ ಕಂಡುಬಂದಿದ್ದು ಅಲ್ಲದೆ ಮಕ್ಕಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಇದಕ್ಕೆ ನೇರ ಹೊಣೆಗಾರರು ಯಾರು ಎಂದು ಗ್ರಾಮಸ್ಥರು ಕನಸಿನ ಭಾರತ ಪತ್ರಿಕಾ ವರದಿಗಾರರ ಮುಂದೆ ಅಳಲು ತೋಡಿಕೊಂಡರು ಅಲ್ಲದೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇದುವರೆಗೂ ಒಂದು ಶೌಚಾಲಯ ಮಕ್ಕಳಿಗಾಗಿ ಕಟ್ಟಿಸಿ ಕೊಟ್ಟಿಲ್ಲವೆಂದು ಆರೋಪಿಸಿದ್ದಾರೆ ಇದುವರೆಗೂ ಈ ಶಾಲೆಗೆ ಇದಕ್ಕೆ ಸಂಬಂಧಪಟ್ಟ ಮೇಲಧಿಕಾರಿಗಳು ಕಣ್ಣೆತ್ತಿಯೂ ಕೂಡ ನೋಡಿಲ್ಲ ವೆಂದು ಸಾಬಣ್ಣ ಅವರು ನೇರವಾಗಿ ಆರೋಪಿಸಿದ್ದಾರೆ ಈ ಶಾಲೆಗೆ ಶಿಕ್ಷಕರ ಸಮಸ್ಯೆ ಇದ್ದು ಹಲವು ಬಾರಿ ಮನವಿ ಪತ್ರ ಕೊಟ್ಟರು ಪ್ರಯೋಜನವಾಗಿಲ್ಲವೆಂದು ಹೇಳಿದ್ದಾರೆ ಅಷ್ಟೇ ಅಲ್ಲದೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಂಗನವಾಡಿ ಕೇಂದ್ರವಿದೆ ಸರಿಯಾದ ಸಮಯದಲ್ಲಿ ಸರಿಯಾದ ರೀತಿಯಲ್ಲಿ ಮಕ್ಕಳಿಗೆ ಆಹಾರಧಾನ್ಯಗಳು ವಿತರಣೆ ಮಾಡುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ ಈ ಸಂದರ್ಭದಲ್ಲಿ ಹಲವು ಗ್ರಾಮಸ್ಥರು ಎಸ್ಡಿಎಂಸಿ ಅಧ್ಯಕ್ಷರಾದ ಶರಣಪ್ಪ ಜಂಗಳಿ ಹಾಗೂ ಸಾಯಿಬಣ್ಣ ಮತ್ತು ಶರಣಪ್ಪ ಹಾಗೂ ಬಸನಗೌಡ ಸಿದ್ದು ಅಶೋಕ್ಇನ್ನು ಮುಂತಾದ ಗ್ರಾಮಸ್ಥರು ಈ ಸಂದರ್ಭದಲ್ಲಿ ಭಾಗವಹಿಸಿದ್ದರು