142 total views
ಅರಸೀಕೆರೆ ತಾಲ್ಲೋಕ್, ಕಣಕಟ್ಟೆ ಹೋಬಳಿ, ಮಾಡಾಳು ವ್ಯಾಪ್ತಿಯ, ಸೀತಾಪುರಕ್ಕೆ ಹೊಂದಿಕೊಂಡಿರುವ ಸರ್ಕಾರಿ ಕೆರೆಯಾದ ದಳವಾಯ್ ಕೆರೆಯು ನಿರಂತರ ಮಳೆಯಿಂದಾಗಿ ತುಂಬಿ ಕೊಡಿ ಬಿದ್ದಿದ್ದು, ಇದರ ಪ್ರಯುಕ್ತ ಮಾಡಾಳು, ಸೀತಾಪುರ, ಕೊಪ್ಪಲು ಹಾಗೂ ಆಜುಬಾಜು ಗ್ರಾಮಸ್ಥರು ಸೇರಿ,ಅರಸೀಕೆರೆ ಕ್ಷೇತ್ರದ BJP ಅಭ್ಯರ್ಥಿ ಎಂದೇ ಬಿಂಬಿತವಾಗಿ, ಕ್ಷೇತ್ರದ ಜನರ ಸಮಸ್ಯೆಗಳನ್ನು ಆಲಿಸಿ ಪರಿಹಾರವನ್ನು ಒದಗಿಸುವ ನಿಟ್ಟಿನಲ್ಲಿ ಕ್ಷೇತ್ರ ಪರ್ಯಟನೆ ಮಾಡುತ್ತಿರುವ ಸನ್ಮಾನ್ಯ ಶ್ರೀ NR ಸಂತೋಷ್ ರವರನ್ನು ದಳವಾಯ್ ಕೆರೆಗೆ ಸಂಪ್ರದಾಯದ ಪ್ರಕಾರ ಬಾಗೀನ ಅರ್ಪಣೆಯ ಧಾರ್ಮಿಕ ಕಾರ್ಯಕ್ರಮಕ್ಕೆ ಆಹ್ವಾನದ ಮೇರೆಗೆ ದಿನಾಂಕ -29-09-2022 ರ ಗುರುವಾರದಂದು ದಂಪತಿಗಳ ಸಮೇತ ಸನ್ಮಾನ್ಯ ಶ್ರೀ NR ಸಂತೋಷ್ ರವರು ಆಗಮಿಸಿದ್ದರು, ಈ ಸಂದರ್ಭದಲ್ಲಿ ಗ್ರಾಮಸ್ಥರು ಹಾಗೂ ಮಹಿಳೆಯರು ಪೂರ್ಣ ಕುಂಬದ ಮೂಲಕ ಸ್ವಾಗತವನ್ನು ಕೋರುವುದರೊಂದಿಗೆ,ಕೆರೆ ಕೋಡಿಯವರೆಗೆ ಮೆರವಣಿಗೆ ಮೂಲಕ ಆಹ್ವಾನಿಸಲಾಯಿತು. ನಂತರ ಕೆರೆ ಕೋಡಿಯಲ್ಲಿ ಬಾಳೆ ದಿಂಡನ್ನು ನೆಟ್ಟು, ಹೂವಿನಲಂಕಾರವನ್ನು ಗ್ರಾಮಸ್ಥರು ಮಾಡಿದ್ದರು. ನಂತರ,ಸನ್ಮಾನ್ಯ ಶ್ರೀ NR ಸಂತೋಷ್ ರವರು ದಂಪತಿಗಳ ಸಮೇತರಾಗಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ, ಪೂಜೆ ಸಲ್ಲಿಸಿ,ತಮಟ, ಬಾಳೆಹಣ್ಣು, ಪಲ್ಲಾರ ನೈವೇದ್ಯ ನಂತರ ಹಾಲು ತುಪ್ಪ ಸಮರ್ಪಸಿದರು ಈ ಕಾರ್ಯಕ್ರಮದಲ್ಲಿ ಗ್ರಾಮಸ್ಥರು, ಮಹಿಳೆಯರು ಕೈ ಜೋಡಿಸಿದ್ದು ಬಹಳ ವಿಶೇಷವಾಗಿತ್ತು, ನಂತರ ಸನ್ಮಾನ್ಯ ಶ್ರೀ NR ಸಂತೋಷ್ ರವರು ದಂಪತಿಗಳ ಸಮೇತರಾಗಿ ಈ ಕಾರ್ಯಕ್ರಮಕ್ಕೆ ಆಗಮಿಸಿದ್ದ ಎಲ್ಲ ವರ್ಗದ ಮಹಿಳೆಯರಿಗೆ ಗೌರವಯುತವಾಗಿ ಶುಭವನ್ನು ಆರೈಸಿ, ಬಳೆ, ಕುಂಕುಮ, ಅರಿಶಿನ, ಹೂವು, ಸೀರೆಯನ್ನು ಉಡಿ ತುಂಬಿದ್ದು ಬಹಳ ವಿಶೇಷವಾಗಿತ್ತು. ಈ ಸಂದರ್ಭದಲ್ಲಿ ಉಡಿ ತುಂಬಿಸಿಕೊಂಡ ಎಲ್ಲ ಮಾತೆಯರು ಸನ್ಮಾನ್ಯ ಶ್ರೀ ಸಂತೋಷ್ ರವರಿಗೆ, ಅವರ ಕುಟುಂಬಕ್ಕೆ ಒಳ್ಳೆಯದಾಗಲಿ, ಮುಂದಿನ ದಿನಗಳಲ್ಲಿ ಇಂತಹವರೇ ನಮ್ಮ ಅರಸೀಕೆರೆ ಕ್ಷೇತ್ರಕ್ಕೆ ಶಾಸಕರಾಗಿ ಬರಬೇಕೆಂದು ಆಶೀರ್ವಾದ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಸನ್ಮಾನ್ಯ ಶ್ರೀ NR ಸಂತೋಷ್ ರವರು ಈ ವರ್ಷ ನಾಡಿನಾದ್ಯಂತ ಹೆಚ್ಚು ಹೆಚ್ಚು ಮಳೆಯಾಗಿದ್ದರಿಂದ ಬಹುತೇಕ ಎಲ್ಲ ಸರ್ಕಾರಿ ಕೆರೆ ಕಟ್ಟೆಗಳು ತುಂಬಿ ಅಂತರ್ಜಲ ಹೆಚ್ಚುವುದರೊಂದಿಗೆ ವಿಶೇಷವಾಗಿ ರೈತರಿಗೆ ಅನುಕೂಲವಾಗಲಿದೆ. ಬರಗಾಲವು ಮಳೆಗಾಲವಾಗಿ ಪರಿವರ್ತನೆಯಾದಂತೆ, ಈ ಕ್ಷೇತ್ರದಲ್ಲೂ ರಾಜಕೀಯವಾಗಿ ಬದಲಾವಣೆಯಾಗಬೇಕಿದೆ, ಈ ಬದಲಾವಣೆ ಮತದಾರ ಬಂದುಗಳ ಕೈಯಲ್ಲಿದ್ದು, ಅವರುಗಳು ಬದಲಾವಣೆ ಬಯಸುತ್ತಿದ್ದಾರೆ ಎಂದರು, ಅರಸೀಕೆರೆ ತಾಲ್ಲೋಕ್ ನಾಧ್ಯoತ ಕೇಳಿ ಬರುತ್ತಿರುವ ಮಾತು ಒಂದೇ, ಈ ಬಾರಿ NR ಸಂತೋಷ್, NRS NRS ಎನ್ನುವುದೆ ಆಗಿದೆ.
ಈ ಸಂದರ್ಭದಲ್ಲಿ ಗ್ರಾಮಸ್ಥರು ಮಾತನಾಡುತ್ತಾ ಆಡದಲೇ ಮಾಡುವವನು ರೂಡಿಯೊಳಗುತ್ತಮನು, ಆಡಿಯು ಮಾಡದವನು ಮಧ್ಯಮನಧಮನುಆಡಿಯು ಮಾಡದವನು ತಾನೇ ಸರ್ವಜ್ಞ ಎನ್ನುವ ಸರ್ವಜ್ಞನ ವಚನವನ್ನು ಜ್ಞಾಪಿಸಿಕೊಂಡು, ನಾವುಗಳು ಈ ಕಾರ್ಯಕ್ರಮಕ್ಕೆ ಆಹ್ವಾನಿಸಿದಾಗ ಆಗ, ಈಗ ಎನ್ನದೆ ಸಮಯಕ್ಕೆ ಸರಿಯಾಗಿ ಬಂದು ಕಾರ್ಯಕ್ರಮ ಯಶಸ್ವಿಯಾಗಿ ನಡೆಸಿಕೊಟ್ಟಿದ್ದು, ರೂಡಿಯೊಳಗುತ್ತಮರಾಧರೆಂದು ಎಲ್ಲರಲ್ಲೂ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು,ಈ ಬಾರಿ ಶಿವಲಿಂಗಗೌಡರನ್ನು ತೊಲಗಿಸಿ, BJP ಯ ಕಮಲವಾದ ಸನ್ಮಾನ್ಯ NR ಸಂತೋಷ್ ರನ್ನು ಅರಳಿಸಿ ಎಂದು ಗ್ರಾಮಸ್ಥರು,ಮಹಿಳೆಯರು ಹರ್ಷೋದ್ಗಾರದಿಂದ ಘೋಷಣೆ ಕೂಗಿದರು.
ವರದಿ : ಮಾಡಾಳ್ ರವಿ.