318 total views
ಗಂಗಾವತಿ :- ತಾಲೂಕಿನ ಬಸಾಪಟ್ಟಣ ಗ್ರಾಮದ ಯುವ ಕ್ರೀಡಾಪಟುಗಳು ದಿನಾಂಕ : 27 ರಂದು ಮೈಸೂರು ದಸರಾ ರಾಜ್ಯಮಟ್ಟದ ಕರಾಟೆ ಪಂದ್ಯಾವಳಿ ಕರ್ನಾಟಕ ಸರ್ಕಾರ ಹಾಗೂ ಶಿವಮೊಗ್ಗ ಮಹಾನಗರ ಪಾಲಿಕೆ ನೇತೃತ್ವದಲ್ಲಿ ಕರ್ನಾಟಕ ಕರಾಟೆ ಅಸೋಸಿಯೇಶನ್ ಶಿವಮೊಗ್ಗದಲ್ಲಿ ಆಯೋಜಿಸಲಾದ ರಾಜ್ಯಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಗ್ರಾಮೀಣ ಯುವ ಕ್ರೀಡಾಪಟುಗಳಾದ ಮರ್ದಾನ್ ಅಲಿ U-14 37ಕೆಜಿ ವಿಭಾಗದಲ್ಲಿ ಪ್ರಥಮ ಸ್ಥಾನ, ಸಂಜನಾ U-14 25ಕೆಜಿ ವಿಭಾಗದಲ್ಲಿ ದ್ವಿತೀಯ ಸ್ಥಾನ ಅಜಯ್ ಕುಮಾರ್ U-17 47ಕೆಜಿ ವಿಭಾಗದಲ್ಲಿ ತೃತೀಯ ಸ್ಥಾನ ಮತ್ತು ಅನುಷಾ ಮತ್ತು ಸಲೀಮ್ ಜಂಟಿ ನಾಲ್ಕನೇ ಸ್ಥಾನ ಪಡೆದು ತಾಲ್ಲೂಕು ಮತ್ತು ಜಿಲ್ಲೆಗೆ ಕೀರ್ತಿಯನ್ನು ಹೆಚ್ಚಿಸಿದ್ದಾರೆ ಎಂದು ಮುಖ್ಯ ತರಬೇತುದಾರರಾದ ಬಾಬುಸಾಬ್ ರವರು ತಿಳಿಸಿದ್ದಾರೆ ವಿಜೇತರಾಗಿ ಸಾಧನೆಗೈದ ಕ್ರೀಡಾಪಟುಗಳಿಗೆ ತರಬೇತುದಾರರ ಅಂಬಣ್ಣ ಮತ್ತು ಪಾಲಕರು ಗುರುಹಿರಿಯರು ಹಾಗೂ ಊರಿನ ಗಣ್ಯವ್ಯಕ್ತಿಗಳು ಅಭಿನಂದಿಸಿ ಹರ್ಷ ವ್ಯಕ್ತಪಡಿಸಿದ್ದಾರೆ .