92 total views
ಗಂಗಾವತಿ : ನಗರದ ಶೃಂಗೇರಿ ಶಂಕರ ಮಠದಲ್ಲಿ ಐದನೇ ವರ್ಷದ ಶ್ರೀ ಶಾರದಾದೇವಿ ಶರನ್ನ ನವರಾತ್ರಿ ಉತ್ಸವ ಸೋಮವಾರದಂದು ಆರಂಭಗೊಂಡಿತು ಉತ್ಸವದ ಅಂಗವಾಗಿ ಬೆಳಿಗ್ಗೆಯಿಂದ ವೈವಿಧ್ಯಮಯ ಪೂಜಾ ಕಾರ್ಯಕ್ರಮಗಳು ಸಂಜೆ ಶಾರದಾ ಭಜನಾ ಮಂಡಳಿ ಸೌಂದರ್ಯ ಲಹರಿ ಭಗಿನಿಯರ ಸಂಘ ವಿಜಯ ಧ್ವಜ ಭಜನಾ ಮಂಡಳಿ ಸೇರಿದಂತೆ ಅಪಾರ ಸಂಖ್ಯೆಯ ಮಹಿಳೆಯರು ಶ್ರೀ ಲಲಿತಾ ಸಹಸ್ರನಾಮ ಪಾರಾಯಣ ಕುಂಕುಮ ಅರ್ಚನೆ ವೇದಮೂರ್ತಿ ಮಹೇಶ್ ಭಟ್ ಜೋಶಿಯವರ ನೇತೃತ್ವದಲ್ಲಿಶ್ರದ್ಧೆ ಭಕ್ತಿಯಿಂದ ಜರುಗಿದವು ಈ ಸಂದರ್ಭದಲ್ಲಿ ಧರ್ಮದರ್ಶಿ ನಾರಾಯಣರಾವ್ ವೈದ್ಯ ಮಾತನಾಡಿ ಸರ್ವರ ಸಹಕಾರದಿಂದ ಶರನ್ನ ನವರಾತ್ರಿಯ ಪ್ರಥಮ ದಿನದಂದು 170ಕ್ಕೂ ಅಧಿಕ ಮಹಿಳೆಯರು ಭಾಗವಹಿಸುವುದರ ಮೂಲಕ ಒಂದು ಲಕ್ಷ ನಲವತ್ತು ಸಾವಿರ ಲಲಿತ ಸಹಸ್ರ ನಾಮಾವಳಿ ಒಂದೇ ದಿನದಲ್ಲಿ ಜರುಗಿದ್ದು. ಮುಂಬರುವ ದಿನಗಳಲ್ಲಿ ಒಟ್ಟು ಒಂಬತ್ತು ದಿನಗಳ ಕಾಲ 12 ಲಕ್ಷ ಅಧಿಕ ಪಾರಾಯಣ ಮಾಡುವ ಮೂಲಕ ವಿಶೇಷ ಸಾಧನೆ ಯಾಗಲಿದೆ ಎಂದು ತಿಳಿಸಿದರು. ಸಕಲ ಭಕ್ತಾದಿಗಳು ಮತ್ತಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶಾರದಾಂಬೆಯ ಕೃಪೆಗೆ ಪಾತ್ರರಾಗುವಂತೆ ಹೇಳಿದರು .ಈ ಸಂದರ್ಭದಲ್ಲಿ ರಾಘವೇಂದ್ರ ಅಳವಂಡಿ ಕರ್. ಶ್ರೀಪಾದ ಮುಧೋಳಕರ್. ಜಗನ್ನಾಥ್ ಅಳವಂಡಿ. ದತ್ತಾತ್ರೇಯ. ಶಂಕರ ಹೊಸಳ್ಳಿ. ಅನಿಲ್ ಅಳವಂಡಿ ಸೇರಿದಂತೆ ದೇವಸ್ಥಾನ ಸಮಿತಿಯ ಸದಸ್ಯರುಗಳು ಭಜನಾ ಮಂಡಳಿಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು ಬಳಿಕ ಜರುಗಿದ ಅಷ್ಟ ವಾದನ ಸೇವೆ ಆರತಿ ಮಂಗಳಾರತಿಯನ್ನು ದೇವಸ್ಥಾನದ ಪ್ರಧಾನ ಅರ್ಚಕ ಕುಮಾರ್ ಭಟ್ ನೆರವೇರಿಸಿದರು.
ವರದಿ : ಶರಣಪ್ಪ ಗಂಗಾವತಿ