284 total views
ಯಳಂದೂರು ತಾಲ್ಲೂಕಿನ ವಡಗೆರೆ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ತಾಲ್ಲೂಕು ಮಟ್ಟದ ಶಿಕ್ಷಕರ ದಿನಾಚರಣೆಯನ್ನು ಆಚರಣೆ ಮಾಡಲಾಯಿತು. ಕಾರ್ಯಕ್ರಮವನ್ನು ಶಾಸಕ ಎನ್. ಮಹೇಶ್ ರವರು ಉದ್ಘಾಟನೆ ಮಾಡಿ ಸಾವಿತ್ರಿ ಪುಲೆ ಹಾಗೂ ಸರ್ವಪಲ್ಲಿ ರಾಧಾಕೃಷ್ಣನ್ ರವರ ಫೋಟೋಗೆ ಪುಷ್ಪಾರ್ಚನೆ ನೆರವೇರಿಸಿದರು.ಶಾಸಕ ಎನ್ ಮಹೇಶ್ ರವರು ಶಿಕ್ಷಕರನ್ನು ಕುರಿತು ಮಾತನಾಡಿ ಶಿಕ್ಷಣ ಎನ್ನುವುದು ಕೇವಲ ಪದವಲ್ಲ, ಅದು ಜಗತ್ತನ್ನೇ ಬೆಳಗುವ ಶಕ್ತಿ. ಒಬ್ಬ ಶಿಕ್ಷಕ ಏನೂ ಬೇಕಾದರೂ ಆಗಬಹುದು ಎನ್ನುವುದಕ್ಕೆ ಮಾತೇ ಸಾವಿತ್ರಿ ಬಾ ಪುಲೆ ಹಾಗೂ ಸರ್ವಪಲ್ಲಿ ಡಾ. ಎಸ್. ರಾಧಾಕೃಷ್ಣನ್ ಅವರೇ ಸಾಕ್ಷಿ.ಶಿಕ್ಷಣ ಬದುಕಿನ ತೆರೆದ ಪುಸ್ತಕವಾಗಬೇಕು. ಒಬ್ಬ ವ್ಯಕ್ತಿಯ ಸಾಧನೆಯ ಮೂಲಪ್ರೇರಣೆ ಶಿಕ್ಷಕರೇ ಆಗಿದ್ದಾರೆ. ಮಕ್ಕಳಿಗೆ ಉತ್ತಮ ಜೀವನ ರೂಪಿಸುವುದರ ಜೊತೆಗೆ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕೆಲಸ ಶಿಕ್ಷಕರಿಂದ ಆಗಬೇಕಾಗಿದೆ, ಶಿಕ್ಷಕರಿಲ್ಲದೇ ಯಾವುದೇ ಕ್ಷೇತ್ರ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ಮಕ್ಕಳ ಸರ್ವಾಂಗೀಣ ಬೆಳವಣಿಗೆಗಾಗಿ ಶಿಕ್ಷಕರು ಪಠ್ಯ ವಿಷಯದ ಜೊತೆಗೆ ಪಠ್ಯೇತರ ವಿಷಯಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು.ತಾಲ್ಲೂಕಿನ ಮಕ್ಕಳನ್ನು ದೇಶಕ್ಕೆ ಕೀರ್ತಿ ತರುವ ನಿಟ್ಟಿನಲ್ಲಿ ತಯಾರು ಮಾಡಬೇಕು ಎಂದು ಸಲಹೆ ನೀಡಿದರು.ವಿಧಾನ ಪರಿಷತ್ ಶಾಸಕ ಮಂಜೇಗೌಡ ರವರು ಮಾತನಾಡಿ ಪ್ರತಿಯೊಬ್ಬ ಶಿಕ್ಷಕರು ಗುರುವಿನ ಜವಾಬ್ದಾರಿ ಅರಿತು ಕೆಲಸ ಮಾಡದಿದ್ದರೆ ದೇಶದಲ್ಲಿ ಅರಾಜಕತೆ ಸೃಷ್ಟಿಯಾಗುತ್ತಿತ್ತು.ಶಿಕ್ಷಕರು ಎಂತಹ ಕ್ಲಿಷ್ಟಕರ ಪರಿಸ್ಥಿತಿಯಲ್ಲಿಯೂ ಮಕ್ಕಳಿಗೆ ವಿದ್ಯಾದಾನ ಮಾಡುವುದು ವೈಯಕ್ತಿಕವಾಗಿ ಎಲ್ಲರಿಗೂ ಗೌರವ ತರುವ ಕೆಲಸ,ದೇಶ ಅಭಿವೃದ್ಧಿಯತ್ತ ಸಾಗುತ್ತಿದೆ ಎಂದರೆ ಅದಕ್ಕೆ ಶಿಕ್ಷಣವೇ ಮಾನದಂಡವಾಗಿದೆ. ಶಿಕ್ಷಣದಿಂದ ದೇಶದ ಅಭಿವೃದ್ಧಿ ಎನ್ನುವುದು ಲೋಕರೂಢಿಯಾಗಿದೆ,ಉತ್ತಮ ಶಿಕ್ಷಕರು ನಿರಂತರ ಕಲಿಕೆಯಲ್ಲಿ ತೊಡಗಿರಬೇಕು. ಉತ್ತಮ ವಿದ್ಯಾರ್ಥಿಗಳಿಂದ ಶಿಕ್ಷಕ ಪರಿಪೂರ್ಣನಾಗುತ್ತಾನೆ. ವಿದ್ಯಾರ್ಥಿಗಳ ಯಶಸ್ಸಿನ ಉತ್ತುಂಗವನ್ನು ನಿರಾಪೇಕ್ಷೆಯಿಂದ ಆನಂದಿಸುವುದು ಶಿಕ್ಷಕರು ಮಾತ್ರ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ನೌಕರರ ಸಂಘ,ಎಲ್ಲಾ ಶಿಕ್ಷಕರ ಸಂಘಗಳು,ನೌಕರರ ಸಂಘ,ಭೋದಕ,ಬೋಧಕೇತರ ಸಿಬ್ಬಂದಿಗಳು,ಶಿಕ್ಷಕರು ಹಾಗೂ ಜನಪ್ರತಿನಿದಿನಗಳು ಹಾಜರಿದ್ದರು.