108 total views
ಗ್ರಾಮೀಣ ಪ್ರದೇಶದಲ್ಲಿ ಅಪರೂಪದ ಕರಾಟೆ ಯುವ ಪ್ರತಿಭೆ ಮಾಸ್ಟರ್ ಮೈಲಾರಿ
ಸತತವಾಗಿ ಮೂವತ್ತು ವರ್ಷಗಳಿಂದ ಹಲವಾರು ಖಾಸಗಿ ಶಾಲಾ ಸಂಸ್ಥೆಗಳಲ್ಲಿ ಕರಾಟೆಯನ್ನು ಕಲಿಸುತ್ತಿದ್ದಾರೆ ಕೆಲವುಕಡೆ ಉಚಿತವಾಗಿ ಕರಾಟೆ ಕಲಿಸಿದ್ದಾರೆ ಅಂದರಿಗೆ ಅಂಗವಿಕಲರಿಗೆ ವಿಶೇಷವಾಗಿ ಕರಾಟೆ ಕಲಿಸಿದ್ದಾರೆ ಅಲ್ಲದೆ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಯೋಜನೆಯಲ್ಲಿ ಸರಕಾರಿ ಪ್ರೌಢ ಶಾಲೆಗಳಿಗೆ ಶಹಪುರ್ ತಾಲೂಕ ಹಾಗೂ ಜೇವರ್ಗಿ ತಾಲೂಕಿನ ಹಲವಾರು ಪ್ರೌಢಶಾಲೆಗಳಿಗೆ ತರಬೇತಿ ನೀಡಿದ್ದಾರೆ ಈಗಲೂ ಕೆಲವು ಹಳ್ಳಿಗಳಲ್ಲಿ ಕರಾಟೆ ಉಚಿತವಾಗಿ ತರಬೇತಿ ನೀಡುತ್ತಿದ್ದಾರೆ ಮೈಲಾರಪ್ಪ ನವರಿಗೆ ತರಬೇತಿ ನೀಡಿದ ಕರಾಟೆ ಶಿಕ್ಷಕರು ಜನ್ನ ಶಿಟೋರಿಯೋ ಕರಾಟೆ ಬೋಧಕರು ಜಟ್ಟಪ್ಪ ಎಸ್ ಪೂಜಾರಿ ಅವರಿಂದ ತರಬೇತಿ ಪಡೆದುಕೊಂಡಿದ್ದಾರೆ ಈ ವಿಶೇಷ ಗ್ರಾಮೀಣ ಯುವ ಪ್ರತಿಭೆಗಳಿಗೆ ತರಬೇತಿ ನೀಡುತ್ತಿರುವ ಏಕೈಕ ಕರಾಟೆ ಸಂಸ್ಥೆಯ ಕಲ್ಯಾಣ ಕರ್ನಾಟಕ ಅಧ್ಯಕ್ಷರಾದ ದಶರತ್ ದುಮ್ಮನಸುರುವವರು ಎಲೆಮರೆಯ ಕಾಯಿಯಂತೆ ಗ್ರಾಮೀಣ ಭಾಗದ ಯುವಕರಿಗೆ ಜೆನ್ನ ಶಿಟೋರಿಯೋ ಮಾರ್ಷಲ್ ಆರ್ಟ್ಸ್ ತರಬೇತಿ ನೀಡುತ್ತಿದ್ದಾರೆ ಇವರ ಕೈಯಲ್ಲಿ ಕಲಿತ ಅನೇಕ ವಿದ್ಯಾರ್ಥಿಗಳು ರಾಷ್ಟ್ರಮಟ್ಟ ಅಂತರಾಷ್ಟ್ರೀಯ ಮಟ್ಟದಲ್ಲಿ ಅನೇಕ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ ಹಾಗೂ ಸಾಧನೆ ಮಾಡುತ್ತಲ್ಲು ಇದ್ದಾರೆ ಇವರ ಕೈಯಲ್ಲಿ ಕಲಿತ ಅನೇಕ ವಿದ್ಯಾರ್ಥಿಗಳು ಪೊಲೀಸ್ ಇಲಾಖೆ ಭಾರತೀಯ ಸೇನೆಯಲ್ಲಿ ವಿಶೇಷವಾಗಿ ಸೇವೆಸಲ್ಲಿಸುತ್ತಿದ್ದಾರೆ ಇನ್ನಷ್ಟು ಯುವ ಪ್ರತಿಭೆಗಳು ಕಲ್ಯಾಣ ಕರ್ನಾಟಕ ಭಾಗದಲ್ಲಿ ಮಿನುಗುತಾರೆ ಗಳಂತೆ ಮಿನುಗಲಿ ಹಾಗು ಕರಾಟೆ ಮಹಾಗುರು ಎಂದು ಪ್ರಸಿದ್ಧರಾದ ದಶರತ್ ದುಮ್ಮನ್ಸೂರ ಅವ್ರಿಗೆ ಗೌರವ ಡಾಕ್ಟರೇಟ್ ನೀಡಬೇಕು ಎಂಬುವುದು ಕಲ್ಯಾಣ ಕರ್ನಾಟಕ ಯುವಪ್ರತಿಭೆಗಳ ಆಶಯ