282 total views
ಮೈಸೂರು :-ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಪ್ರಯುಕ್ತ 2022-23 ನೇ ಸಾಲಿನಲ್ಲಿ ದಸರಾ ಫಲಪುಷ್ಪ ಪ್ರದರ್ಶನ ವನ್ನು ನಿಶಾದ್ಭಾಗ್, ಕುಪ್ಪಣ್ಣ ಪಾರ್ಕ್ ನಲ್ಲಿ ನಡೆಯಲಿದೆ.ಎಂದು ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯನಿರ್ವಾಹಣಧಿಕಾರಿ ಪೂರ್ಣಿಮಾ ಬಿ. ಆರ್. ತಿಳಿಸಿದರು.ಕುಪ್ಪಣ್ಣ ಪಾರ್ಕಿ ನಲ್ಲಿ ನಡೆದ ಸುದ್ದಿಗೋಷ್ಠಿ ಯಲ್ಲಿ ಮಾಹಿತಿ ನೀಡಿದ ಅವರು 75 ನೇ ಸ್ವಾತಂತ್ರದ ಅಮೃತ ಮಹೋತ್ಸವ ಪ್ರಯುಕ್ತ ಈ ಬಾರಿ ಅದ್ದೂರಿಯಾಗಿ ರಾಷ್ಟ್ರಪತಿ ಭವನದ ಕೆಂಪು ಮತ್ತು ಬಿಳಿ ಗುಲಾಬಿ ಯಿಂದ ಕೂಡಿದ 20 ಅಡಿ ಎತ್ತರದ ಗಾಜಿನ ಮನೆಯನ್ನು ನಿರ್ಮಿಸಲಾಗುವುದು.ದಿ. ನಟ ಪುನೀತ್ ರಾಜಕುಮಾರ ಅವರ ಸ್ಮರಣೆ ಗಾಗಿ ಅವರ ಸಾಧನೆ ಕುರಿತ ಫಲಪುಷ್ಪ ಪ್ರದರ್ಶನ ಮಾಡಲಾಗುವುದು.ಹಾಗೂ 7 ಅಡಿ ಜೇನುಹುಳ,12 ಅಡಿಯ ಜಿರಾಫೆ,ಮಕ್ಕಳಿಗೆ ಸಂಬಂದಿಸಿದ ಗೊಂಬೆಗಳನ್ನು ಹೂವು ಗಳ ಮುಖಾಂತರ ಮಾಡಲಾಗುವುದು.7 ಅಡಿಯಲ್ಲಿ ದಪ್ಪ ಮೇಣಿಸಿನ ಕಾಯಿಯನ್ನು ಮಾಡಲಾಗುವುದು. ಎಂದು ತಿಳಿಸಿದ್ದರು.ಹಾಗೂ ಸಾವಯವ ಮಳಿಗೆ ಗಳು, ರೈತರಿಗೆ ಸಂಬಂದಿಸಿದ ಮಾಹಿತಿ ಕೇಂದ್ರ ಮಳಿಗೆ ಗಳನ್ನು ಸ್ಥಾಪಿಸಲಾಗುವುದು. ಎಂದು ತಿಳಿಸಿದ್ದರು. ಈ ಸುದ್ದಿಗೋಷ್ಠಿ ಯಲ್ಲಿ ಫಲಪುಷ್ಪ ಪ್ರದರ್ಶನದ ಸಮಿತಿ ಅಧ್ಯಕ್ಷರು ಎಸ್. ಆರ್. ನಂಜಪ್ಪ,ಉಪಾಧ್ಯಕ್ಷರು ಆದ ಓಂ ಶ್ರೀನಿವಾಸ್, ಸುಶೀಲ ಮತ್ತಿತರರು ಬಾಗಿಯಾಗಿದ್ದರು.