296 total views
ಮೈಸೂರು :-ದಸರಾ ಕವಿಗೋಷ್ಠಿ ಐದು ವಿಭಾಗ ಗಳಲ್ಲಿ ಸೆ.28 ರಿಂದ ಅ.3ರ ವರೆಗೆ ನಡೆಯಲ್ಲಿದು ಈ ಸಂಬಂಧವಾಗಿ ಮೈಸೂರು ಮಹಾನಗರ ಪಾಲಿಕೆ ಸಭಾಂಗಣ ದಲ್ಲಿ ಪೋಸ್ಟರ್ ಅನಾವರಣಗೊಳಿಸಲಾಯಿತು.ಈ ವೇಳೆ ಮಾತನಾಡಿದ ದಸರಾ ಕವಿಗೋಷ್ಠಿಯ ವಿಶೇಷಧಿಕಾರಿ ಡಾ. ಎಂ. ದಾಸೆಗೌಡ ಮಾತನಾಡಿ ನಾಡಿನ ವಿವಿಧ ಭಾಗಗಳ ಕವಿಗಳು ಭಾಗವಹಿಸಲಿದ್ದು.ಹಾಸ್ಯ ಕವಿಗೋಷ್ಠಿ, ಉರ್ದು ಕವಿಗೋಷ್ಠಿ,ಯುವ ಕವಿಗೋಷ್ಠಿ,ಪ್ರಾದೇಶಿಕ ಕವಿಗೋಷ್ಠಿ, ಚಿಗುರು ಕವಿಗೋಷ್ಠಿ, ಪ್ರಧಾನ ಕವಿಗೋಷ್ಠಿ ಗಳುನಡೆಯಲಿವೆ.ಸೆ.28 ರಂದು ಕಲಮಂದಿರ ದಲ್ಲಿ ಉದ್ಘಾಟನೆ ಸಮಾರಂಭ ನಡೆಯಲಿದೆ.
ಸೆ.29 ರಂದು ಕ್ಲಾಸಿಕ್ ಕಾನ್ವೆಂನ್ಷನ್ ಹಾಲ್ ನಲ್ಲಿ ಉರ್ದು ಕವಿಗೋಷ್ಠಿ ನಡೆಯಲಿದೆ.
ಅ.1 ರಂದು ರಾಣಿ ಬಹದ್ದೂರ್ ಸಭಾಂಗಣ ದಲ್ಲಿ ಪ್ರಾದೇಶಿಕ ಕವಿಗೋಷ್ಠಿ ನಡೆಯಲಿದೆ.
ಅ.3 ರಂದು ಸೇನೆಟ್ ಭವನ ದಲ್ಲಿ ಪ್ರಧಾನ ಕವಿಗೋಷ್ಠಿ ನಡೆಯಲಿದ್ದು. ಈ ಕಾರ್ಯಕ್ರಮಕ್ಕೆ ಜ್ಞಾನ ಪೀಠ ಪ್ರಶಸ್ತಿ ವಿಜೇತ ಡಾ. ಚಂದ್ರಶೇಖರ ಕಂಬಾರ ಅವರು ಉದ್ಘಾಟನೆ ಮಾಡಲಿದ್ದಾರೆ. ಎಂದು ತಿಳಿಸಿದರು.