122 total views
ಮಹಾಲಿಂಗಪುರ : ಪೊಲೀಸ್ ಕಾನ್ಸ್ಟೇಬಲ್ ಗುರಪ್ಪ ಒಡೆಯರ ಸಾವಿಗೆ ಕಾರಣರಾಗಿರುವ ಮಹಾಲಿಂಗಪುರ ಪೊಲೀಸ್ ಠಾಣೆಯ ಎನ್.ಐ.ಖಾಲೇಖಾನ್ ಮತ್ತು ಎನ್.ಸಿ.ಕೂಡಗಿ ಎಂಬ ಕಾನ್ಸ್ಟೇಬಲ್ ಗಳನ್ನು ಕೂಡಲೇ ಹುದ್ದೆಯಿಂದ ವಜಾಗೊಳಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ, ಕೂಲಂಕುಶವಾಗಿ ಪರಿಶೀಲಿಸಿ ಕಠಿಣ ಶಿಕ್ಷೆ ವಿಧಿಸಸಬೇಕೆಂದು ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಆನಂದ ಇಂಗಳಗಿ, ಕಾರ್ಯದರ್ಶಿ ರವಿ ಜವಳಗಿ, ಹಿಂದೂ ಮುಖಂಡ ನಂದು ಗಾಯಕವಾಡ ಆಗ್ರಹಿಸಿ, ತಪ್ಪಿದಲ್ಲಿ ಉಗ್ರ ಹೋರಾಟದ ಎಚ್ಚರಿಕೆ ನೀಡಿದರು.
ಮಹಾಲಿಂಗಪುರ ಹಿಂದೂ ಸಂಘಟನೆಗಳ ಒಕ್ಕೂಟದ ವತಿಯಿಂದ ಬಾಗಲಕೋಟ ಎಸ್ ಪಿ ಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು. ಮಹಾಲಿಂಗಪುರ ಪೊಲೀಸ್ ಠಾಣೆ ಕ್ವಾರ್ಟರ್ಸ್ ನಲ್ಲಿ ಗುರಪ್ಪ ಒಡೆಯರ್ ತನ್ನ ಮೂವರು ಮಕ್ಕಳು ಹಾಗೂ ಹೆಂಡತಿಯೊAದಿಗೆ ವಾಸವಾಗಿದ್ದರು ಇವರ ಮನೆಯ ಪಕ್ಕದಲ್ಲಿ ಮುಸಲ್ಮಾನ ಸಮಾಜದ ಎನ್.ಐ.ಖಾಲೇಖಾನ್ ಸಿಪಿಸಿ ನಂಬರ್ ೧೧೩೭ ಹಾಗೂ ಎನ್.ಸಿ.ಕೂಡಗಿ ಸಿಪಿಸಿ ನಂಬರ್ ೬೮೨ ವಾಸವಾಗಿದ್ದ ಈ ಈರ್ವರೂ ಮಹಾಲಿಂಗಪುರದಲ್ಲಿಯೂ ಕೂಡ ಲವ್ ಜಿಹಾದ್ ಮತ್ತು ಮುಂತಾದ ದುಷ್ಕೃತ್ಯಗಳಿಗೆ ಕುಮ್ಮಕ್ಕು ಕೊಡುತ್ತಿದ್ದರು. ಅದೇ ರೀತಿ ಪೇದೆ ಗುರಪ್ಪ ಒಡೆಯರ ನಿತ್ಯ ಕರ್ತವ್ಯ ನಿಮಿತ್ತ ಮನೆಯಿಂದ ಹೊರಹೋದ ಸಂದರ್ಭಗಳಲ್ಲಿ ಮೇಲ್ಕಂಡ ಆರೋಪಿತ ಕಾನ್ಸ್ಟೇಬಲ್ ಗಳು ಒಡೆಯರ ಹೆಂಡತಿಯ ಕೂಪಕ್ಕೆ ಬೀಳಿಸಿ, ತಲೆ ಕೆಡಿಸಿ ತಮ್ಮ ವಶ ಮಾಡಿಕೊಂಡಿದ್ದರು, ಲವ್ ಜಿಹಾದ್ ಕೂಪಕ್ಕೆ ಬಿದ್ದ ಒಡೆಯರ ಹೆಂಡತಿ ಇಬ್ಬರ ಮಾತು ಕೇಳಿ ತನ್ನ ಗಂಡನ ಮಾತನ್ನು ಧಿಕ್ಕರಿಸಿ, ತನ್ನ ಹಣೆಯ ಮೇಲಿನ ಅಚ್ಚೆಬೊಟ್ಟು, ಕುಂಕುಮ ಮುಂತಾದವುಗಳನ್ನು ತೆಗೆಯಲು ಪ್ರಯತ್ನಿಸಿದಳು. ಹೀಗೆ ತನ್ನ ಹೆಂಡತಿಯು ಅವರ ಬೆನ್ನು ಹತ್ತಿದ್ದನ್ನು ಕಂಡು ಮನನೊಂದ ಒಡೆಯರ ನೇಣಿಗೆ ಶರಣಾಗಿದ್ದಾನೆ.
ಜನಸಾಮಾನ್ಯರ ರಕ್ಷಣೆ ಮಾಡುವ ಪೊಲೀಸ್ ಡಿಪಾರ್ಟ್ಮೆಂಟ್ ನಲ್ಲಿ ಇಂಥ ಕೃತ್ಯಗಳು ನಡೆಯುತ್ತಿದ್ದು ಸಾರ್ವಜನಿಕರ ಗತಿ ಏನು? ಸರ್ಕಾರಿ ಇಲಾಖೆ ಅದರಲ್ಲಿಯೂ ಪೊಲೀಸ್ ಇಲಾಖೆಯಲ್ಲಿ ಇದ್ದುಕೊಂಡು ಲವ್ ಜಿಹಾದ್ ನಂತರ ದುಷ್ಕೃತ್ಯಗಳಲ್ಲಿ ತೊಡಗಿರುವ ಆರೋಪಿಗಳನ್ನು ಕೂಡಲೇ ಹುದ್ದೆಯಿಂದ ತೆಗೆದುಹಾಕಿ, ನ್ಯಾಯಾಂಗ ಬಂಧನದಲ್ಲಿಟ್ಟು ಕೂಲಂಕುಶವಾಗಿ ಪರಿಶೀಲಿಸಿ ತಕ್ಕ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಲಾಯುತು.
ಅರ್ಜುನ್ ಪವಾರ, ವಿಜಯಕುಮಾರ ಸಬಕಾಳೆ, ಎಚ್.ವಿ.ಉಳ್ಳಾಗಡ್ಡಿ, ದತ್ತಾ ಯರಗಟ್ಟಿಕರ, ಸುನಿಲ್ ರಾಮೋಜಿ, ಅಕ್ಷಯ, ಮಹಾಲಿಂಗ ಬಡಿಗೇರ, ಶ್ರೀನಿಧಿ ಕುಲಕರ್ಣಿ, ನಾಗರಾಜ ಭಜಂತ್ರಿ, ಧರ್ಮರಾಜ ಪೂಜಾರಿ, ಸಿ.ಬಿ.ಭಜಂತ್ರಿ, ಎಸ್. ಎ.ಮಗದುಮ್, ಅಭಿಷೇಕ ಸೊನ್ನದ, ಜಗದೀಶ ಗಾಣಿಗೇರ ಯ, ವಿಕ್ರಂ ಮೇಟಿ, ಅನಿಲ ಖವಾಸಿ, ಆರ್ .ಎಂ .ಚಿಂಚಲಿ ಸೇರಿದಂತೆ ನೂರಾರು ಹಿಂದೂ ಕಾರ್ಯಕರ್ತರಿದ್ದರು.
ಬಾಕ್ಸ್: ಖಂಡಿತವಾಗಿಯೂ ಕೂಲಂಕುಶವಾಗಿ ಪರಿಶೀಲಿಸಿ ಶೀಘ್ರದಲ್ಲೇ ಸೂಕ್ತ ಕ್ರಮ ಜರುಗಿಸಿ ನ್ಯಾಯ ಒದಗಿಸುತ್ತೇವೆ : ಜಯಪ್ರಕಾಶ, ಬಾಗಲಕೋಟೆ ಎಸ್.ಪಿ.