98 total views
ಹಾವೇರಿ ತಾಲೂಕಿನ ಹೌವಂಶಿ ಮತ್ತು ಶಾಕಾರ ಕೂಲಿ ಕಾರ್ಮಿಕರು ಸೇರಿ ಹೌವಂಶಿ ಗ್ರಾಮ ಪಂಚಾಯಿತಿಗೆ ಬೀಗ ಹಾಕಿದ್ದಾರೆ.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ 2022-23 ರ ಸಾಲಿನಲ್ಲಿ ಸರಿಯಾಗಿ ಕೆಲಸ ಕೊಡದೆ ಇದ್ದ ಪರಿಣಾಮ ಹೌವಂಶಿ ಮತ್ತು ಶಾಕರ ಗ್ರಾಮಸ್ಥರು ಸೇರಿ ಗ್ರಾಮ ಪಂಚಾಯಿತಿಗೆ ಇಂದು ಬೀಗ ಹಾಕಲಾಯಿತು.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಕೆಲಸಕ್ಕೆ ಪಿ ಡಿ ಓ ಹಾಗೂ ಇಂಜಿನಿಯರಗಳು ಸರಿಯಾಗಿ ಕೂಲಿ ಕಾರ್ಮಿಕರಿಗೆ ಸರಿಯಾಗಿ ಕೆಲಸ ಕೊಡದೆ ಸತಾಯಿಸುತ್ತಿದ್ದಾರೆ. ಹಾಗೂ ದಿನಾಂಕ 25/8/2022 ರಿಂದ 4/9/2022 ರ ತನಕ ಹೌವಂಶಿ ಗ್ರಾಮ ಪಂಚಾಯಿತಿಗೆ ಪಿಡಿಯೋ ಬಂದಿರುವುದಿಲ್ಲ ಫೋನ್ ಮಾಡಿದರೆ ನಾಳೆ ಬರುತ್ತೇನೆ ನಾಡಿದ್ದು ಬರುತ್ತೇನೆ ಅಂತ ಸುಮ್ಮನೆ ಹೇಳುತ್ತಾರೆ ವಿನಹ ಯಾರು ಕೂಡ ಕೂಲಿ ಕಾರ್ಮಿಕರಿಗೆ ಸ್ಪಂದಿಸುತ್ತಿಲ್ಲ ಕೂಲಿ ಕಾರ್ಮಿಕರು ಎರಡು ವಾರ ಕೆಲಸ ಮಾಡಿ ಕೂಲಿ ಹಣ ಬರುತ್ತಿಲ್ಲ ಎಂದು ಕೇಳುವುದಕ್ಕೂ ಕೂಡ ಪಿ ಡಿ ಓ ಇರುವುದಿಲ್ಲ ಸರಿಯಾಗಿ ಕೆಲಸದ ಅಳತೆ ಕೂಡ ಇರುವುದಿಲ್ಲ ಮತ್ತು ಕೂಲಿ ಕಾರ್ಮಿಕರಿಗೆ ಇಲ್ಲಿಯವರೆಗೂ ಸರಿಯಾದ ಕೂಲಿ ಹಣವು ಸಹಾ ಬಂದಿಲ್ಲ ಇಷ್ಟಾದರೂ ಪಿಡಿಓ ಆಗಲಿ ಇಂಜಿನಿಯರಗಳು ಯಾವುದೇ ಸಿಬ್ಬಂದಿಯವರು ಬಂದಿಲ್ಲವೆಂದು ಹೌವಂಶಿ ಗ್ರಾಮ ಪಂಚಾಯಿತಿಗೆ ಬೀಗ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ವರದಿ :ಪ್ರವೀಣ ಪೂಜಾರ