54 total views
ಶಿಡ್ಲಘಟ್ಟ:ಸಮಾಜದಲ್ಲಿ ದಲಿತ ಸಮುದಾಯ ಹೆಚ್ಚಿನ ಸಂಖ್ಯಾಬಲ ಹೊಂದಿದ್ದರೂ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಮುಂದುವರಿದಿಲ್ಲ. ಜಾತಿಯಲ್ಲಿ ಗುರುತಿಸಿಕೊಳ್ಳಲು ಹಿಂಜರಿಕೆ ಏಕೆ ಎಂದು ರಾಜ್ಯ ಸಂಸ್ಥಾಪಕ ಅಧ್ಯಕ್ಷರಾದ ಡಾ.ಎಸ್ ಎಂ ರಮೇಶ್ ಚಕ್ರವರ್ತಿ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಪದಾಧಿಕಾರಿಗಳ ಆಯ್ಕೆ ಮಾಡಿ ಮಾತನಾಡಿದರು.
ಪ್ರತಿಯೊಂದು ಸಂಘ ಸಂಘಟನೆಗೆ ತನ್ನದೇ ಆದ ನೀತಿ ನಿಯಮಗಳಿರುತ್ತವೆ ಅವುಗಳನ್ನು ಅನುಸರಿಸಿದಾಗ ಸಂಘಟನೆ ಬಲಪಡಿಸಲು ಸಾಧ್ಯ ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ತಮ್ಮ ತಮ್ಮ ಜವಾಬ್ದಾರಿ ಅರಿತು ಜನರಿಗೆ ಸಂಘಟನೆ ಸಂಘದ ಬಗ್ಗೆ ಅರಿವು ಮೂಡಿಸಬೇಕು ಎಂದು ಹೇಳಿದರು.ಎಲ್ಲಿ ಅನ್ಯಾಯ ನಡೆಯುತ್ತಿರುತ್ತೋ ಅಲ್ಲಿ ನಮ್ಮ ಸಘಟನೆಯವರು ಯಾರೇ ಇದ್ದರೂ ಕಾನೂನಿನ ಚೌಕಟ್ಟಿನಲ್ಲಿ ನ್ಯಾಯವನ್ನು ಕೊಡಿಸುವಂತಹ ಕೆಲಸ ಮಾಡಬೇಕು ಎಂದರು.
ತಾಲ್ಲೂಕು ಘಟಕದ ಪದಾಧಿಕಾರಿಗಳಾಗಿ ಅಧ್ಯಕ್ಷರಾಗಿ ಶ್ರೀನಿವಾಸ್ ಜಿ.ಆರ್,ಉಪಾಧ್ಯಕ್ಷರಾಗಿ ಪ್ರತೀಪ್ ಕುಮಾರ್ ಎನ್,ಪ್ರಧಾನ ಕಾರ್ಯದರ್ಶಿ ಅಂಬರೀಶ್ ಜಿವಿ,ಕಾರ್ಯದರ್ಶಿಗಳಾಗಿ ದೇವರಾಜ್ ಎಂ,ಮಧು ಎಂ,ಸಂಘಟನಾ ಕಾರ್ಯದರ್ಶಿಯಾಗಿ ಸುಖೇಶ್,ಖಜಾಂಚಿಯಾಗಿ ಶ್ರೀಧರ್,ಆನಂದ್ ಜಿ.ವಿ,ಮುನಿರಾಜು ಹಾಗೂ ಜಿಲ್ಲಾಧ್ಯಕ್ಷ ಮಂಜುನಾಥ್,ಕಿಶೋರ್,ರವಿಕುಮಾರ್, ಕಂಬದಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ದೇವರಾಜ್,ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
ವರದಿ ವೆಂಕಟೇಶ್ ಸಿ