106 total views
ಹಬ್ಬದ ನೆಪದಲ್ಲಿ ಪುನಃ ಮಕ್ಕಳಿಂದ ಬಿಕ್ಷಾಟನೆ. ಆತಂಕಕಾರಿ ಬೆಳವಣಿಗೆ.
ಕೊಪ್ಪಳ ಜಿಲ್ಲೆಯ ಗಂಗಾವತಿ : ಭಾರತದ ಅನೇಕ ಸಮಸ್ಯೆಗಳಲ್ಲಿ ಒಂದಾಗ ಬಿಕ್ಷಾಟನೆ ಒಂದು ಸಾಮಾಜಿಕ ಅಪರಾಧವಾದದ್ದು ಅದರಲ್ಲಿ ವಿಶೇಷವಾಗಿ ಬಾಲ ಮಕ್ಕಳನ್ನು ಬಿಕ್ಷಾಟನೆಗೆ ಒಳಪಡಿಸುವುದು ಶಿಕ್ಷಾಹಾರ ಅಪರಾಧ ವಾಗಿದೆ. ಇತ್ತೀಚಿಗೆ ಸರ್ಕಾರ ಬಾಲ ಭಿಕ್ಷುಕರ ಸಮಸ್ಯೆಯನ್ನು ನಿವಾರಣೆಗೊಳಿಸಲು ಶಿಶು ಮತ್ತು ಅಭಿವೃದ್ಧಿ ಇಲಾಖೆ ಸಮಾಜ ಇಲಾಖೆ ಸೇರಿದಂತೆ ಪೊಲೀಸ್ ಇಲಾಖೆಯಿಂದ ಕಾರ್ಯಾಚರಣೆ ನಡೆಸಿ ಬಿಕ್ಷಾಟನಿಗೆ ಅಲ್ಪ ಸ್ವಲ್ಪ ತಡೆಗಟ್ಟುವಲ್ಲಿ ಯಶಸ್ವಿಯಾಗಿದ್ದು ನಿಜ, ಆದರೆ ಮೊಹರಂ ಹಬ್ಬದ ನೆಪದಲ್ಲಿ ಬಹುತೇಕ 14 ವರ್ಷದ ಒಳಗಿನ ಮಕ್ಕಳು ಅಚ್ಚಳ್ಳಿ, ಪಚ್ಚಳ್ಳಿ ಎಂದು ಮುಖಕ್ಕೆ , ಮೈ ಕೈ ಗಳಿಗೆ ಕಪ್ಪು ಮಸಿ ಬಳಿದುಕೊಂಡು ಮನೆ ಮನೆಗೆ ರಸ್ತೆಯ ಉದ್ದಕ್ಕೂ ಇರುವ ಸಾಲು ಅಂಗಡಿಗಳಿಗೆ ಬಸ್ ನಿಲ್ದಾಣ ಸೇರಿದಂತೆ ಜನನಿ ಬೀಡ ಪ್ರದೇಶಗಳಲ್ಲಿ ಪುನಃ ಭಿಕ್ಷಾಟನೆಗೆ ಮುಂದಾಗಿದ್ದು ಗಮನಿಸಿದರೆ ಸರ್ಕಾರ ಚಾಪೆ ಕೆಳಗೆ ನುಗ್ಗಿದರೆ ಭಿಕ್ಷೆ ಬೇಡುವ ಹಾಗೂ ಬೇಡಿಸುವ ಪಾಲಕರುಗಳು ರಂಗೋಲಿ ಕೆಳಗೆ ನುಸುಳುವರು ಎಂಬುದಕ್ಕೆ ಪ್ರಸ್ತುತ ಹಬ್ಬದಲ್ಲಿ ಕಂಡುಬಂದ ಸಾಮಾನ್ಯ ದೃಶ್ಯವಾಗಿದೆ, ಕೆಲವು ವರ್ಷಗಳ ಹಿಂದೆ ಸಾಂಪ್ರದಾಯದ ಹೆಸರಿನಲ್ಲಿ ಕೆಲವೇ ಕೆಲವು ವ್ಯಕ್ತಿಗಳಿಗೆ ಸೀಮಿತವಾಗಿತ್ತು ಅಚ್ಚಳ್ಳಿ, ಪಚ್ಚಳ್ಳಿ ಎಂಬ ಹೆಸರಿನ ಬಾಲ ಮಕ್ಕಳ ಭಿಕ್ಷಾಟನೆ ಪ್ರಸ್ತುತ ಮೊಹರಂ ಹಬ್ಬದಲ್ಲಿ ಹಲವು ಪಾಲಕರು ಆಚರಣೆಯ ದುರುಪಯೋಗವನ್ನು ಪಡೆಸಿಕೊಳ್ಳುತ್ತಿದ್ದಾರೆ ಎಂದು ಅಭಿಪ್ರಾಯವಾಗಿದೆ, ಶಿಕ್ಷಣದ ಹಕ್ಕು ಪ್ರಕಾರ ಯಾವುದೇ ಮಗು 6 ರಿಂದ 14 ವರ್ಷದೊಳಗಿನ ಮಗು ಶಿಕ್ಷಣ ಸೌಲಭ್ಯದಿಂದ ವಂಚಿತವಾಗಬಾರದು ಎಂಬ ಉದ್ದೇಶದಿಂದ ಸರ್ಕಾರ ಶಾಲೆಗಳಲ್ಲಿ ಬಿಸಿಊಟ ಯೋಜನೆ ಉಚಿತ ಪಠ್ಯ ವಿತರಣೆ ಮತ್ತಿತರ ಸೌಲಭ್ಯಗಳನ್ನು ಕಲ್ಪಿಸಿದ್ದರು ಸಹ ಸಂಬಂಧಪಟ್ಟ ಅಧಿಕಾರಿಗಳು ಕಣ್ಣಿದ್ದರು ಜಾಣ ಕುರುಡುತನ ಅನುಸರಿಸಬೇಕಾದ ಅನಿವಾರ್ಯತೆ ಕಾಣಬಹುದಾಗಿದೆ.
ವರದಿ :ಶರಣಪ್ಪ ಗಂಗಾವತಿ