ಜೇವರ್ಗಿ ಯಿಂದ ವಿಜಯಪುರ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ಪ್ರಾರಂಭವಾಗಿ ಸುಮಾರು ದಶಕಗಳೇ ಕಳೆದಿವೆ ಆದರೆ ಇಲ್ಲಿಯವರೆಗೂ ಕೂಡ ಬೀದಿ ಬದಿಯ ದೀಪಗಳು ಬೆಳಗಿಲ್ಲ ಬಸವಕಲ್ಯಾಣದಿಂದ ವಿಜಯಪುರ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 50ರ ಮೇಲೆ ಬರುವ ಬಹುತೇಕ ಬೀದಿ ಬದಿಯ ದೀಪಗಳು ಇನ್ನೂ ಕೂಡ ವಿದ್ಯುತ್ ಸಂಪರ್ಕ ಕಂಡಿಲ್ಲ ರಸ್ತೆ ನಿರ್ಮಾಣದ ಗುತ್ತಿಗೆ ಪಡೆದ ಗುತ್ತಿಗೆದಾರರ ಆದಿನದಲ್ಲಿ ಇರುವ ರಸ್ತೆ ಬದಿಯ ದೀಪಗಳು ಇಲ್ಲಿಯವರೆಗೆ ಒಮ್ಮೆ ಕೂಡ ಬೆಳಗಿಲ್ಲ ಸರ್ಕಾರ ಮತ್ತು ಗುತ್ತಿಗೆದಾರರ ನಿಯಮದಂತೆ ನಿಯಮಾವಳಿಯಲ್ಲಿರುವ ಸಂಪೂರ್ಣ ಕಾಮಗಾರಿಗಳು ಪೂರ್ಣಗೊಂಡ ನಂತರವೇ ಗುತ್ತಿಗೆದಾರನ ಬಿಲ್ ಪಾಸ್ ಮಾಡಬೇಕು ಆದರೆ 10 ವರ್ಷ ಕಳೆದರೂ ಕೂಡ ವಿದ್ಯುತ್ ಬೆಳಗದೆ ಇರುವುದು ಅಕ್ರಮಕ್ಕೆ ಕಾರಣವಾಗಿರಬಹುದು ಎಂದು ಮತ್ತು ಅದನ್ನು ಪೂರ್ಣವಾಗಿ ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡು ಶೀಘ್ರ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ರಾಜ್ಯ ಹೆದ್ದಾರಿ ಪ್ರಾಧಿಕಾರಕ್ಕೆ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆಯ ಕಲ್ಯಾಣ ಕರ್ನಾಟಕ ವಲಯ ಘಟಕದ ಅಧ್ಯಕ್ಷರಾದ ಶ್ರೀ ಚನ್ನಯ್ಯ ವಸ್ತ್ರದ ಪ್ರಾಧಿಕಾರಕ್ಕೆ ಆಗರಹಿಸಿದ್ದಾರೆ.
ವರದಿ ಜೆಟ್ಟಪ ಎಸ ಪೂಜಾರಿ.