68 total views
ಕೊಟ್ಟೂರು: ದೇಶಾದ್ಯಂತ ಸ್ವಾತಂತ್ರ್ಯದ 75ರ ಸಂಭ್ರಮವನ್ನು ವೈವಿಧ್ಯಮಯವಾಗಿ ಮತ್ತು ವರ್ಣರಂಜಿತವಾಗಿ ಆಚರಿಸಲಾಗುತ್ತಿದೆ. ಈ ಸಂಭ್ರಮದ ಒಂದು ಭಾಗವಾಗಿ ಕೇಂದ್ರ ಸರ್ಕಾರದ “ಹರ್ ಘರ್ ತಿರಂಗಾ” ಎಂಬ ಘೋಷವಾಕ್ಯದೊಂದಿಗೆ 2022ರ ಆಗಷ್ಟ್ 13 ರಿಂದ 15 ರವರೆಗೆ ಕೊಟ್ಟೂರು ತಾಲೂಕಿನ ಸಾರ್ವಜನಿಕರು ತಮ್ಮ ಮನೆಯ ಅಂಗಳದಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿ ದೇಶಭಕ್ತಿ, ದೇಶಾಭಿಮಾನ ಬಿಂಬಿಸುವ ಮೂಲಕ ನಮ್ಮ ರಾಷ್ಟ್ರ ಪ್ರೇಮವನ್ನು ಅಭಿವೃಕ್ತಗೊಳಿಸಬೇಕೆಂದು ಹಾಗೂ ಕೊಟ್ಟೂರು ತಾಲೂಕಿನ ಪ್ರತಿ ಗ್ರಾಮದ ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿ ಕಛೇರಿಗಳನ್ನು ರಾಷ್ಟ್ರ ಧ್ವಜಗಳ ಮಾರಾಟ ಕೇಂದ್ರಗಳನ್ನಾಗಿ ಗುರುತಿಸಿ ಮಾರಾಟದ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಸರ್ಕಾರ ನಿಗಧಿಪಡಿಸಿರುವ ದರದಲ್ಲಿ ರಾಷ್ಟ್ರಧ್ವಜಗಳನ್ನು ಭಾರತ ಸರ್ಕಾರದ ಗೃಹ ವ್ಯವಹಾರಗಳ ಮಂತ್ರಾಲಯದ ದಿ-ಪ್ಲಾಗ್ ಕೋಡ್ ಆಫ್ ಇಂಡಿಯಾ-2022 (ತಿದ್ದುಪಡಿ-2021) ಅನುಸರಿಸಿ ತಮ್ಮ ತಮ್ಮ ಮನೆಯ ಅಂಗಳದಲ್ಲಿ ಧ್ವಜವನ್ನು ಹಾರಿಸಿ “ಹರ್ ಘರ್ ತಿರಂಗಾ” ಅಭಿಯಾನವನ್ನು ಯಶಸ್ವಿಗೊಳಿಸಬೇಕೆಂದು ವಿನಂತಿಸಿಕೊಳ್ಳುತ್ತಾ, ಈ ಅಭಿಯಾನದ ಮುಕ್ತಾಯದ ನಂತರ ರಾಷ್ಟ್ರಧ್ವಜವನ್ನು ತಮ್ಮ ಮನೆಯಲ್ಲಿ ಸುರಕ್ಷಿತವಾಗಿ ಕಾಯ್ದಿರಿಸುವಂತೆ ಕೊಟ್ಟೂರಿನ ತಹಶೀಲ್ದಾರರಾದ ಕುಮಾರಸ್ವಾಮಿ. ಎಂ ಇವರು ಸಾರ್ವಜನಿಕರಲ್ಲಿ ವಿನಂತಿಸಿಕೊಂಡಿರುತ್ತಾರೆ.
ವರದಿ: ಶಿವರಾಜ್ ಕನ್ನಡಿಗ