ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದ 27ನೇ ವಾರ್ಡಿನ ಸಮ್ಮರ‍್ ಸಾಬ್ ಲೇಔಟ್ ನಲ್ಲಿ ಇತ್ತೀಚಿಗಷ್ಟೇ ಸುರಿದ ಧಾರಾಕಾರ ಮಳೆಯಿಂದಾಗಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಪಾರ ಪ್ರಮಾಣದ ನೀರು ರಸ್ತೆಗಳಲ್ಲಿ ನಿಂತಿರುವುದು ಮತ್ತು ಸ್ವಚ್ಛತೆ ಇಲ್ಲದ ಪ್ರಯುಕ್ತ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಗ್ರಾಮೀಣ ಘಟಕದ ಅಧ್ಯಕ್ಷ ಬಸವರಾಜ ಮ್ಯಾಗಳಮನಿ ನೇತೃತ್ವದಲ್ಲಿ ಬುಧವಾರದಂದು ಸ್ವಚ್ಛತಾ ಅಭಿಯಾನ ಹಾಗೂ ಸಸಿ ನೆಡುವ ಕಾರ್ಯಕ್ರಮವನ್ನು ಬುಧವಾರ ಹಮ್ಮಿಕೊಳ್ಳೋವುದ್ಣರ ಜೊತೆಗೆ ನಗರ ಸಭೆಯ ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಗ್ರಾಮೀಣ ಘಟಕದ ಅಧ್ಯಕ್ಷ ಬಸವರಾಜ ಮ್ಯಾಗಳಮನಿ ಮಾತನಾಡಿ ನಗರಸಭೆ ಅಧಿಕಾರಿಗಳ ಹಾಗೂ ಬೇಜವಾಬ್ದಾರಿ ತನದಿನದಿಂದ ಇಡಿ ನಗರ ಪ್ರದೇಶಗಳಲ್ಲಿ ಮಳೆ ನೀರು ಹಾಗೂ ಚರಂಡಿ ನೀರುಗಳು ಲೇಔಟ್ ಸೇರಿದಂತೆ ವಾರ್ಡಿನ ಜನರು ಸಂಕಷ್ಟದಲ್ಲಿದ್ದಾರೆ ಜೊತೆಗೆ ವಾರ್ಡ್ಗಳಲ್ಲಿ ಚರಂಡಿ ನೀರು ರಸ್ತೆ ಮೇಲೆಲ್ಲಾ ಹರಡಿ ಗಬ್ಬು ನಾರುತಿದೆ, ಅಮೃತ ನಗರ ಯೋಜನೆ ಅಡಿಯಲ್ಲಿ ರಸ್ತೆಯ ಅಗಲೀಕರಣ ಚರಂಡಿ ದುರಸ್ತಿಯ ನೆನಪದಲ್ಲಿ ಸಾಕಷ್ಟು ಹಣ ಕೊಳ್ಳೆ ಹೊಡೆದಿರುವ ಅಧಿಕಾರಿ ವರ್ಗದವರು ಕಾಟ ಆಚಾರ ಎಂಬಂತೆ ಕಾಮಗಾರಿ ನಡೆಸಿ ಸರ್ಕಾರದ ಹಣವನ್ನು ಲೂಟಿ ಮಾಡುತ್ತಿದ್ದಾರೆಂದು ಗಂಭೀರವಾಗಿ ಆರೋಪಿಸಿ., ಈ ಹಿನ್ನೆಲೆಯಲ್ಲಿ ಸಮರ್ಪಕವಾಗಿ ನೀರು ಹರಿದು ಹೋಗುವಂತೆ ವ್ಯವಸ್ಥೆ ಮಾಡಿ. ಸಿಸಿ ರಸ್ತೆ ನಿರ್ಮಾಣ ಸೇರಿದಂತೆ 15 ದಿನದೊಳಗೆ ವ್ಯವಸ್ಥೆಗೆ ಮುಂದಾಗದೆ ಹೋದಲ್ಲಿ ಶಾಸಕರ ಮನೆ ಮುಂದೆ ಹಾಗೂ ನಗರಸಭೆಯ ಆವರಣದ ಮುಂದೆ ವಾರ್ಡಿನ ಜನತೆಯೊಂದಿಗೆ ಪ್ರತಿಭಟನೆ ಮಾಡುವುದರ ಜೊತೆಗೆ ಮುತ್ತಿಗೆ ಕಾರ್ಯಕ್ರಮವನ್ನು ಆಯೋಜಿಸಲಾಗುವುದೆಂದು ಎಚ್ಚರಿಸಿದರು, ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಹುಸೇನ್ ಸಾಬ್ ಗಂಗನಾಳ ಚಂದ್ರಶೇಖರ್ ನಿಸರ್ಗ ..ರಾಕೇಶ್ . ರಾಘವೇಂದ್ರ ಸಿದ್ದಿಕೇರಿ.ಆಟೋ ಚಂದ್ರು.ಭೋಗೆಶ ಆನೆಗೂಂದಿ. ಸೇರಿದಂತೆ ಅನೇಕ ಕಾರ್ಯಕರ್ತರು ಸ್ವಚ್ಛತಾ ಅಭಿಯಾನ ಹಾಗೂ ರಸ್ತೆಯ ಮೇಲೆ ಭತ್ತದ ಸಸಿ ನಾಟಿ ಮಾಡಲು ಪಾಲ್ಗೊಂಡಿದ್ದರು.
ವರದಿ : ಶರಣಪ್ಪ ಗಂಗಾವತಿ