60 total views
ಕಾಳಗಿ:ಪಟ್ಟಣದ ನಿವಾಸಿ ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತ ಮಲ್ಲಿನಾಥ ಪಾಟೀಲ ಕಾಳಗಿ ಅವರನ್ನು ರಾಜ್ಯ ಸರ್ಕಾರದ ನಿಗಮ ಮಂಡಳಿ ಅಧ್ಯಕ್ಷರನ್ನಾಗಿ ನೇಮಕ ಮಾಡಿಸುವಂತೆ ಚಿಂಚೋಳಿ ಮೀಸಲು ಮತಕ್ಷೇತ್ರದ ಶಾಸಕ ಡಾ.ಅವಿನಾಶ ಜಾಧವ ಹಾಗೂ ಬೀದರ್ ಸಂಸದ ಹಾಗೂ ಕೇಂದ್ರ ಮಂತ್ರಿಗಳೂ ಮತ್ತು ಕಲಬುರಗಿ ಸಂಸದ ಡಾ.ಉಮೇಶ ಜಾಧವ ಅವರನ್ನು ಕಾಳಗಿ ತಾಲೂಕಿನ ಬಿಜೆಪಿ ಮುಖಂಡರೂ ಹಾಗೂ ಕಾರ್ಯಕರ್ತರು ಒಕ್ಕೋರಲಿನಿಂದ ಒತ್ತಾಯಿಸಿದ್ದಾರೆ.
ಬಿಜೆಪಿ ನೇತೃತ್ವದ ಬಸವರಾಜ ಬೊಮ್ಮಾಯಿ ಸರ್ಕಾರ ಸುಮಾರು ೫೨ ನಿಗಮ ಮಂಡಳಿಗಳು ಹಾಗೂ ವಿವಿಧ ಪ್ರಾಧೀಕಾರಗಳ ಅಧ್ಯಕ್ಷರನ್ನು ಅವರ ಸ್ಥಾನದಿಂದ ಕೆಳಗಿಳಿಸಿದ್ದು, ಅದರಲ್ಲಿ ಕಾಳಗಿ ತಾಲೂಕಿನವರೇ ಆಗಿರುವ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶಶಿಕಲಾ ತೇಂಗಳಿ ಸೇರಿದ್ದಾರೆ. ಹೀಗಾಗಿ ಇರುವ ಒಂದು ಸ್ಥಾನವೂ ಕೂಡಾ ಕಾಳಗಿ ತಾಲೂಕು ಕಳೆದುಕೊಂಡಿದೆ.
ಕಾರಣ ನಿಗಮ ಮಂಡಳಿಗಳಿಗೆ ಹೊಸ ಅಧ್ಯಕ್ಷರನ್ನು ನೇಮಿಸುವಾಗ ದಕ್ಷಿಣ ಕಾಶಿ ಕಾಳಗಿ ತಾಲೂಕಿಗೆ ಆಧ್ಯತೆ ನೀಡಬೆಕೆಂದು ಆಗ್ರಹಿಸಿರುವ ಬಿಜೆಪಿ ಕಾರ್ಯಕರ್ತರು, ಇದಕ್ಕೆ ಹುಟ್ಟು ಹೋರಾಟಗಾರ ರೈತ ಬಂಧು ಕಾಳಗಿ ತಾಲೂಕು ವೀರಶೈವ ಲಿಂಗಾಯತ ಮುಖಂಡ ಮಲ್ಲಿನಾಥ ಪಾಟೀಲ ಕಾಳಗಿ ಅವರು ಸೂಕ್ತವ್ಯಕ್ತಿಯಾಗಿದ್ದಾರೆಂದು ತಿಳಿಸಿದ್ದಾರೆ.
ಹಲವಾರು ವರ್ಷಗಳ ಕಾಲ ಬಿಜೆಪಿ ಪಕ್ಷದ ಕಟ್ಟಾ ಅಭೀಮಾನಿಯಾಗಿ ಪಕ್ಷ ಸಂಘಟಿಸುವಲ್ಲಿ ಅವಿರತ ಸೇವೆಗೈದು, ಕಲಬುರಗಿ ಜಿಲ್ಲಾ ಬಿಜೆಪಿಯ ರೈತಮೋರ್ಛಾ ಕಾರ್ಯದರ್ಶಿಯಾಗಿ ಸತತ ಎರಡು ಅವಧಿಗಳ ಕಾಲ ಪಕ್ಷಕ್ಕಾಗಿ ಸೇವೆ ಸಲ್ಲಿಸುತ್ತಿರುವ ಪಾಟೀಲರು, ತಾಲೂಕಿನ ಬಿಜೆಪಿ ಕಾರ್ಯಕರ್ತರ ನೆಚ್ಚಿನ ನಾಯಕರಾಗಿ ಬೆಳೆಯುತ್ತಿದ್ದಾರೆ.
ಮಾನವಿಯತೆಯ ಅಪಾರ ಮೌಲ್ಯಗಳಿಂದ ಕೂಡಿರುವ ಅವರು, ಶಿಕ್ಷಣ ಸಂಸ್ಥೆಗಳಿಗೆ, ವಿವಿಧ ಸಂಘಟನೆಗಳಿಗೆ, ಮಹಿಳಾ ಸ್ವ-ಸಹಾಯ ಗುಂಪುಗಳಿಗೆ, ಅನಾಥ ಮಕ್ಕಳಿಗೆ, ಬಡ ಕುಟುಂಬಗಳಲ್ಲಿ ಬಳಲುತ್ತಿರುವ ವಿಧ್ಯಾಸಕ್ತಿಯನ್ನು ಹೊಂದಿರುವ ಮಕ್ಕಳಿಗೆ, ವೃದ್ಧರಿಗೆ, ಅನಾಥಾಶ್ರಮಗಳಿಗೆ ದೀನ-ದಲಿತ ಮಕ್ಕಳಿಗೆ, ಅಲ್ಪಸಖ್ಯಾತರ ಏಳಿಗೆಯನ್ನು ಬಯಸಿ ತಮ್ಮ ಸ್ವಂತ ದುಡಿಮೆಯ ಸಂಪಾದನೆಯಲ್ಲಿ ತನು, ಮನ, ಧನವನ್ನು ಧಾರೆ ಎರೆಯುತ್ತಿದ್ದಾರೆ. ಅಲ್ಲದೆ ಅನ್ನದಾನವನ್ನು ಮಾಡುವ ಮೂಲಕ ಸಮಾಜ ಸೇವಕರಿಗೂ ಬೆನ್ನೆಲುಬಾಗಿ ನಿಂತಿರುವಂತಹ ವ್ಯಕ್ತಿತ್ವವನ್ನು ಹೊಂದಿರುವವರಾಗಿದ್ದಾರೆ ಎಂದ ಬಿಜೆಪಿ ಕಾರ್ಯಕರ್ತರು ಇಂತಹ ನಿಷ್ಠಾವಂತ ಬಿಜೆಪಿ ಕಾರ್ಯಕರ್ತರಿಗೆ ಸೂಕ್ತಸ್ಥಾನಮಾನವನ್ನು ನೀಡಿದ್ದೆಯಾದರೆ ಅದು ಪಕ್ಷಕ್ಕೂ, ಪಕ್ಷದ ಮುಖಡರಿಗೂ ಅಲ್ಲದೆ ಅಭಿವೃದ್ಧಿಗೂ ಪೂರಕವಾಗಲಿದೆ ಎಂದರು.
ಮಲ್ಲಿನಾಥ ಕೋಲಕುಂದಿ ಕೋಡ್ಲಿ, ಸಂತೋಷ ಪಾಟೀಲ ಮಂಗಲಗಿ, ಕಾಳಗಿ ವೀರಶೈವ ಸಮಾಜ ಅಧ್ಯಕ್ಷ ಜಗದೀಶ ಪಾಟೀಲ, ರಾಜಕುಮಾರ ರಾಜಾಪುರ, ಶರಣು ಚಂದಾ, ಶಿವರಾಜ ಪಾಟೀಲ, ಅರಣಕಲ್, ವಿಜಯಕುಮಾರ ತುಪ್ಪದ, ರೇವಣಸಿದ್ದ ಬಡಾ, ಬಾಬು ಹೀರಾಪೂರಕರ್, ಕೃಷ್ಣಾ ಸಿಂಗಶೇಟ್ಟಿ, ಬಲರಾಮ ವಲ್ಲಾಪೂರೆ ನಾಗರಾಜ ಹಾವಗುಂಡಿ, ವಿಶ್ವನಾಥ ಅಂಕಲಗಿ, ನಾಗುಸ್ವಾಮಿ ಚಿಕ್ಕಮಠ, ಬಸವರಾಜ ಖದ್ದರಗಿ, ಸುನೀಲ ರಾಜಾಪೂರ, ಹುಡದಳ್ಳಿ ಪಾಟೀಲ ಸೇರಿದಂತೆ ಇದ್ದರು.