ದಿನಾಂಕ 26/07/2022 ರಂದು ದೂರು ನೀಡಿದ್ದ . ಎಂಎಸ್ ಮಂಜುನಾಥ್ ಬಿನ್ ಶ್ರೀಕಂಠಸ್ವಾಮಿ ಬಂಡಿ ಬೀದಿ ಮೂಗೂರು ಅವರು ಠಾಣೆಗೆ ಹಾಜರಾಗಿ ನೀಡಿದ ದೂರು ಏನಂದರೆ ನಾನು ಅಂಗಡಿ ವ್ಯಾಪಾರದಲ್ಲಿ ಇದ್ದಾಗ ಬೇರೆ ಕೆಲಸದ ನಿಮಿತ ಅಂಗಡಿಯ ಬಾಗಿಲನ್ನು ಬೀಗ ಹಾಕದೆ ರೋಲಿಂಗ್ ಶೆಟ್ಟರನ್ನು ಎಳೆದುಕೊಂಡು ಹೊರಗಡೆ ಹೋಗಿ ಬರುವಷ್ಟರಲ್ಲಿ ಅಂಗಡಿಯ ಒಳಗಡೆ ನುಗ್ಗಿ ಎಲ್ಲ ಪೆಟ್ಟಿಗೆಯಲ್ಲಿದ್ದ 16 ಸಾವಿರ ರೂ ಹಣವನ್ನು ಕಳ್ಳತನ ವಾಗಿರುತ್ತದೆ ಎಂದು ದೂರು ನೀಡಿದರು. ದೂರಿನ ಮೇರೆಗೆ ಟಿ ನರಸೀಪುರ ಪೊಲೀಸ್ ಠಾಣಾ ಮೊ. ನಂ 262/2022ಕಲಾಂ 380 ಐಪಿಸಿ ರೀತ್ಯಾ ಪ್ರಕರಣ ದಾಖಲಾಗಿದ್ದು ನಂತರ ಪ್ರಕರಣದ ಪತ್ತೆಗಾಗಿ ಮೈಸೂರಿನ ಜಿಲ್ಲಾ ಎಸ್ಪಿ ಆರ್ ಚೇತನ್ ಅಡಿಷನಲ್ ಎಸ್ಪಿ ಶ್ರೀಮತಿ ಡಾ. ನಂದಿನಿ BN ನಂಜನಗೂಡು ಡಿವೈಎಸ್ಪಿ ಗೋವಿಂದರಾಜು ಟಿ ನರಸೀಪುರ PI ಶ್ರೀಕೃಷ್ಣ ಪರವರು ಮಾರ್ಗದರ್ಶನದಲ್ಲಿ ಟಿ ನರಸೀಪುರ ಪಿಎಸ್ಐ ಮಹೇಶ್ ಕುಮಾರ್ ಬಿಕೆ. ನೇತೃತ್ವದಲ್ಲಿಸಿಬ್ಬಂದಿಗಳ ತಂಡವನ್ನುರಚಿಸಲಾಗಿತ್ತು ನಂತರ ಪಿಎಸ್ಐ ಮಹೇಶ್ ಕುಮಾರ್ ಬಿಕೆ ನೇತೃತ್ವದ ತಂಡವು ತಕ್ಷಣ ಕಾರ್ಯ ಪ್ರಮುಖರಾಗಿ ಮಾಹಿತಿ ಸಂಗ್ರಹಿಸಿ ಆರೋಪಿಯನ್ನು ಪತ್ತೆ ಹಚ್ಚಿ ವಿಚಾರಣೆ ಮಾಡಲಾಗಿದೆ ಆರೋಪಿಯು ಮೇಲ್ಕಂಡ ಕೃತ್ಯದ ಜೊತೆಗೆ ಹಿಂದೆಯೂ ತನ್ನ ಇಬ್ಬರು ಸ್ನೇಹಿತರು ಜೊತೆ ಸೇರಿ ಮೂಗೂರು ನಲ್ಲಿ ಒಂದು ಸರಗಳ್ಳತನ ಮಾಡಿರುವುದಾಗಿ ಒಪ್ಪಿಕೊಂಡರು ತನಿಖೆ ನಡೆಸಿದಾಗ ದಿನಾಂಕ.13/011/2020 ರಂದು ಮಂಜುಳಾ ಕೋಂ ಬಸವರಾಜು ಮೂಗೂರು ಗ್ರಾಮ ಅವರು ನೀಡಿದ ದೂರ್ ಏನಂದರೆ ನಾನು ಮತ್ತು ನನ್ನ ಮಕ್ಕಳು ಆದಿಬೆಟ್ಟಹಳ್ಳಿ ರಸ್ತೆಯಲ್ಲಿ ವಾಯು ವಿಹಾರಕ್ಕೆ ಹೋಗುತ್ತಿದ್ದಾಗ ಬೆಳಿಗ್ಗೆ 05:45 ರಾ ಸಮಯದಲ್ಲಿ ಒಬ್ಬ ವ್ಯಕ್ತಿ ನಮ್ಮನ್ನು ಹಿಂಬಾಲಿಸಿ ನಮ್ಮ ಹಿಂಭಾಗದಿಂದ ಬಂದು ನನ್ನ ಕತ್ತಿನಲ್ಲಿದ್ದ 55 ಗ್ರಾಂ ತೂಕದ 2 ಎಳೆ ಚಿನ್ನದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಹೋದನು ಎಂದು ನೀಡಿದ ದೂರಿನ ಮೇರೆಗೆ ಟಿ ನರಸೀಪುರ ಪೊಲೀಸ್ ಠಾಣಾ. ಮೊ. ನಂ.313/2020 ಕಲಾಂ 392 ರಲ್ಲಿ ಪ್ರಕರಣ ದಾಖಲಾಗಿದ್ದು ಈ ಆರೋಪಿತರು ದಸ್ತಗಿರಿಯಗಿದ್ದು ಸದರಿ ಆರೋಪದಿಂದ 40 ಗ್ರಾಂ ಚಿನ್ನ ಹಾಗೂ 13500 ನಗದು ಹಣವನ್ನು ಅಮಾನತ್ತು ಪಡಿಸಿಕೊಂಡು ಆರೋಪಿಯನ್ನು ನ್ಯಾಯ ಬಂಧನಕ್ಕೆ ನೀಡಲಾಗಿದೆ ಈ ಪತ್ತೆ ಕಾರ್ಯದಲ್ಲಿ ಭಾಗಿಯಾಗಿದ್ದ ಪಿಎಸ್ಐ ಬಿಕೆ ಕುಮಾರ್ ಹಾಗೂ ಸಿಬ್ಬಂದಿಗಳಾದ. ತಂಡ ರಚನ ಭಾಗಿಯಾಗಿದ್ದು ಕಳ್ಳರನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ