ಚಿತ್ತಾಪುರ: ಬಿಜೆಪಿಯ ಯುವ ಮುಖಂಡರಾದ ಮಣಿಕಂಠ ರಾಠೋಡ್ ರವರು, ಚಿತ್ತಾಪುರ ಮತಕ್ಷೇತ್ರದಲ್ಲಿ ಆಗುವ ಕುಂದ ಕೊರತೆಗಳು ಪರಿಶೀಲನೆ ಮಾಡುತ್ತಾ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ, ಎಮ್. ರಾಠೋಡ್ ರವರು ಮಾಡುವ ಸಮಾಜಕಾರ್ಯಗಳನ್ನು ಕಂಡು. ಖರ್ಗೆ ಸೋಲಿನ ಭೀತಿಯನ್ನು ಕಾಣುತ್ತಿದ್ದಾರೆ. ಪ್ರಿಯಂಕಾ ಖರ್ಗೆ ವಿನಾಕಾರಣ ರಾಜಕೀಯ ದರ್ಪ ವಿದೆಯೆಂದು ಪೊಲೀಸ್ ಇಲಾಖೆಯ ಸಹಾಯದಿಂದ ರಾಠೋಡ್ ಹಾಗೂ ಅವರ ಬೆಂಬಲಿಗರನ್ನು ಇಲ್ಲಸಲ್ಲದೆ ಅಪರಾಧಗಳನ್ನು ಹೇಳುತ್ತಾ ಬಂಧನಕ್ಕೊಳಗಾಗುವಂತೆ ಪ್ರಯತ್ನಿಸುತ್ತಿದ್ದಾರೆ. ಖರ್ಗೆ ಯವರಿಗೆ ಇದು ಶೋಭೆ ತರುವಂತ ಕೆಲಸವಲ್ಲ ಎಂದು ಭಾರತೀಯ ಬಂಜಾರ ಕ್ರಾಂತಿ ದಳದ ಕಲ್ಯಾಣ ಕರ್ನಾಟಕ ಅಧ್ಯಕ್ಷರಾದ ರವಿ ರಾಠೋಡ ಗುಡುಗಿದರು.