..ಶಿಡ್ಲಘಟ್ಟ ತಾಲೂಕಿನ ಹಂಡಿಗನಾಳ ಬಾಲಾಜಿ ಕನ್ವೆನ್ಷನ್ ಹಾಲ್ ನಲ್ಲಿ ಎಸ್ ಎನ್ ಕ್ರಿಯಾ ಟ್ರಸ್ಟ್ ವತಿಯಿಂದ ಸಾಧಕರಿಗೆ ಸನ್ಮಾನ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು..
ನಂತರ ಎಸ್ ಎನ್ ಕ್ರಿಯಾ ಟ್ರಸ್ಟ್ ಅಧ್ಯಕ್ಷರು ಸಮಾಜ ಸೇವಕರು ಹಾಗೂ ಕಾಂಗ್ರೆಸ್ ಮುಖಂಡರಾದ ಅಂಜನಪ್ಪ (ಪುಟ್ಟು) ರವರು ಮಾತನಾಡಿ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಅನೇಕ ಬಾರಿ ಗ್ರಾಮ ಪಂಚಾಯತಿ ಮತ್ತು ಹೋಬಳಿಮಟ್ಟದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ನಡೆಸಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಕ್ಯಾನ್ಸರ್ ಕಾಯಿಲೆಗಳು, ಗರ್ಭಕೋಶ ಚಿಕಿತ್ಸೆ, ಕಣ್ಣಿನ ಚಿಕಿತ್ಸೆ, ಇನ್ನು ಹಲವಾರು ಶಸ್ತ್ರ ಚಿಕಿತ್ಸೆಗೆ ಉಚಿತವಾಗಿ ಮಾಡಿಸಿದ್ದೇವೆ. ಮತ್ತು ಕೊರೊನ ಲಾಕ್ ಡೌನ್ ಸಂದರ್ಭದಲ್ಲಿ ಈ ಕ್ಷೇತ್ರದಲ್ಲಿ ಪ್ರತಿ ಕುಟುಂಬಗಳಿಗೆ ಮಾಸ್ಕ್ ಸ್ಯಾನಿಟೈಜರ್ ಮತ್ತು ದಿನಸಿ ಕಿಟ್ಟ್ ಗಳು ಮನೆ ಮನೆಗೆ ವಿತರಣೆ ಮಾಡಿದ್ದೇವೆ. ಹಾಗೂ ಕಾರ್ಯಕ್ರಮದಲ್ಲಿ ಎಸೆಸೆಲ್ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಉತ್ತಮ ಅಂಕಗಳು ಗಳಿಸಿದ್ದಕ್ಕಾಗಿ ಧನ್ಯವಾದಗಳು ವಿದ್ಯಾಭ್ಯಾಸವನ್ನು ಮುಂದುವರಿಸಿ ಉನ್ನತ ಸ್ಥಾನಗಳನ್ನು ಪಡೆದುಕೊಳ್ಳಲು ತಿಳಿಸಿದರು.. ಎಸ್ ಎನ್ ಕ್ರಿಯಾ ಟ್ರಸ್ಟ್ ಅಧ್ಯಕ್ಷರು ಅಂಜಿನಪ್ಪ (ಪುಟ್ಟು) ರವರು ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಅಂಕಗಳು ಪಡೆದವರಿಗೆ 50 ಜನ ವಿದ್ಯಾರ್ಥಿಗಳಿಗೆ ಎಲ್ಇಡಿ ಟಿವಿ, ಲೆನೋವ ಟ್ಯಾಬ್ ಹಾಗೂ ಶಾಲಾ ಹೊದಿಸಿ ಪ್ರಶಂಸೆ ಪತ್ರಗಳನ್ನು ನೀಡಿ ಸನ್ಮಾನಿಸಿದರು. ಮತ್ತು 150 ಜನ ವಿದ್ಯಾರ್ಥಿಗಳಿಗೆ ಟ್ಯಾಬ್ ಮತ್ತು ಬ್ಯಾಗ್ ಹಾಗೂ ಶಾಲು ಹೊದಿಸಿ ಪ್ರಶಂಸೆ ಪತ್ರಗಳು ನೀಡಿ ಸನ್ಮಾನಿಸಿದರು. ಉಳಿದ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸ್ಪೋಕನ್ ಇಂಗ್ಲೀಷ್ ಪುಸ್ತಕ ಬ್ಯಾಗ್ ಹಾಗೂ ಶಾಲು ಹೊದಿಸಿ ಪ್ರಶಂಸೆ ಪತ್ರಗಳನ್ನು ನೀಡಿ ಸನ್ಮಾನಿಸಿದರು…
ಈ ಸಂದರ್ಭದಲ್ಲಿ ಆನೂರು ದೇವರಾಜ್, ವಿಶ್ವನಾಥ್, ಗೌಡನಹಳ್ಳಿ ಮಂಜುನಾಥ್, ನಟರಾಜ್, ತಲಕಾಯಲಬೆಟ್ಟ ಉಪಾಧ್ಯಕ್ಷ ಅಶ್ವತ್ ರೆಡ್ಡಿ, ಕೋಟಹಳ್ಳಿಶ್ರೀನಿವಾಸ್, ಕರಿಯಪ್ಪನ ಹಳ್ಳಿ ಮಂಜುನಾಥ್, ಕೃಷ್ಣಪ್ಪ, ಮುನಿರಾಜು, ಅಶ್ವತಪ್ಪ ಇನ್ನು ಹಲವಾರು ಮುಖಂಡರುಗಳು ಹಾಜರಿದ್ದರು…
ವರದಿ. ವೆಂಕಟೇಶ್. ಸಿ