ಕಾಳಗಿ ಪಟ್ಟಣದ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನ ಪರಿಸ್ಥಿತಿ ಕೆಸರು ಗದ್ದೆಯಂತಾಗಿದೆ ಇಲ್ಲಿ ನೂರಾರು ವಿದ್ಯಾರ್ಥಿಗಳ ಓಡಾಟ ಇದ್ದು ಇಲ್ಲಿ ಶಾಸಕರು ಮತ್ತು ಸಂಬಂಧ ಪಟ್ಟ ಅಧಿಕಾರಿಗಳಿಗೆ ಕಾಲೇಜಿನ ರಸ್ತೆ ಪರಿಸ್ಥಿತಿ ಗೊತ್ತಿದ್ದರೂ ಕಣ್ಣಮುಚ್ಚಿ ಕುಳಿತ ಆರೊಪ ಕೇಳಿ ಬರುತ್ತಿದೆ. ಎರಡು ಮೂರು ದಿನಗಳಿಂದ ಬಿಡದೆ ಸುರಿಯುತ್ತಿರುವ ಜಿಡಿ ಜಿಡಿ ಮಳೆಗೆ ರಸ್ತೆಗಳು ಗದ್ದೆಗಳಾಗಿವೆ ವಿದ್ಯಾರ್ಥಿಗಳ ಸಂಚಾರಕ್ಕೆ ಸಂಕಟ ಪಡುತ್ತಿರುವ ದೃಶ್ಯ….. ತಮ್ಮ ಅಸಹಾಯಕತೆಯಿಂದ ರಸ್ತೆಯ ಮುಖಾಂತರ ಕೆಸರಿನಲ್ಲಿ ಬಿದ್ದು ಕೆಲ ಘಟನೆಗಳು ನಡೆದಿವೆ ಆದ್ರೂ ಇತ್ತ ಗಮನಿಸದ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕುತ್ತಿರುವ ವಿದ್ಯಾರ್ಥಿಗಳು ದಿನ ವಿಡಿ ಮುಂಜಾನೆಯ ತಮ್ಮ ಪಠ್ಯ ಪುಸ್ತಕ ಜೊತೆ ಬಿದ್ದು ಕೆಸರಿನ ಬಣ್ಣದ ಬಟ್ಟೆಗಳಾಗುತ್ತವೆ ಎಂಬ ಭಯದಲ್ಲಿ ಕಾಲೇಜೀಗೆ ಬರುತ್ತಿರುವ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿನಿಯರು ಅಧಿಕಾರಿಗಳ ವಿರುದ್ಧ ಮತ್ತು ಶಾಸಕರಿಗೆ ಹೀಡಿ ಶಾಪ ಹಾಕುತ್ತಿದ್ದಾರೆ. ಇಂತಹ ಸುಸಜ್ಜಿತ ಕಾಲೇಜಿನ ಕಟ್ಟಡ ವಿದೆ ಆದ್ರೆ ರಸ್ತೆ ಇಲ್ಲದೆ ಪರದಾಡಿ ಕಾಲೇಜ್ ಸೇರುವ ಪರಿಸ್ಥಿತಿ ನಿರ್ಮಾಣವಾಗಿದೆ ಕಾಲೇಜಿನ ವಿದ್ಯಾರ್ಥಿಗಳಿಗೆ ಅಪಾಯ ವಾಗುವ ಮುನ್ನ ಉಪಾಯ ಮಾಡಬೇಕು ಇಲ್ಲವಾದರೆ ಕಾಲೇಜಗೆ ಬೀಗ ಜಡಿದು ಶಾಸಕರ ವಿರುದ್ಧ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ದಲಿತ ಸೇನೆ ವಿದ್ಯಾರ್ಥಿ ಜಿಲ್ಲಾ ಒಕ್ಕೂಟ ಅಧ್ಯಕ್ಷ ಮೋಹನ ಚಿನ್ನ ಆಕ್ರೋಶ ವ್ಯಕ್ತಪಡಿಸಿದರು
ವರದಿ ಶ್ರೀಮಂತ ಆರ್ ಮೇಳಕುಂದಿ