ಅರಸೀಕೆರೆ ತಾಲ್ಲೋಕ್ ನ ಅಮರಗಿರಿ ಮಾಲೇಕಲ್ ತಿರುಪತಿಯಲ್ಲಿ ದಿನಾಂಕ -10-07-2022ನೇ ಭಾನುವಾರದಂದು ತಹಶೀಲ್ದಾರ್ ಶ್ರೀ ವಿಭಾ ವಿದ್ಯಾರಾಥೋಡ್ ರವರು ಹಾಗೂ ತಾಲ್ಲೋಕ್ ಆಡಳಿತದ ನೇತೃತ್ವದಲ್ಲಿ ಹಾಗೂ ಅರಸೀಕೆರೆಯ ಪೊಲೀಸ್ ಬಂದುಬಸ್ತ್ ನೊಟ್ಟಿಗೆ ಬಹಳ ಅದ್ದೂರಿಯಾಗಿ ನಾಡಿನ ಭಾಗಗಳಿಂದ ಸಾವಿರಾರುಭಕ್ತರ ಸಮ್ಮುಖದಲ್ಲಿ ನೆರವೇರಲ್ಪಟ್ಟಿತ್ತು. ನಂತರ, ಅಲ್ಲಿನ ಪೂಜಾ ವಿಧಿವಿಧಾನಗಳು ಹಾಗೂ ರಥೋತ್ಸವಗಳ ಆಚರಣೆಗಳನ್ನು ನೆರವೇರಿಸಿ, ದಿನಾಂಕ -21-07-2022ರಂದು ಶ್ರೀ ಲಕ್ಷೀ ವೆಂಕಟರಮಣ ಸ್ವಾಮಿಯ ಒಡವೆಗಳನ್ನು ಪೋಲೀಸ್ ರಕ್ಷಣೆಯಲ್ಲಿ ಉತ್ಸವದ ಮೂಲಕ ಅಲ್ಲಿನ ಕಮಿಟಿಯವರು ಅರಸೀಕೆರೆಯ ತಾಲ್ಲೋಕ್ ಕಚೇರಿಗೆ ಆಗಮಿಸಿ ಮಾನ್ಯ ತಹಶೀಲ್ದಾರರಾದ ಶ್ರೀ ವಿಭಾ ವಿದ್ಯಾ ರಾಥೋಡ್ ರವರ ಸುಪರ್ದಿಗೆ ನೀಡಲಾಯಿತು.ಈ ಸಂದರ್ಭದಲ್ಲಿ ಸದ್ಭಕ್ತರು, ಕಮಿಟಿಯವರು ಸೇರಿದ್ದರು.
ವರದಿ : ಮಾಡಾಳ್ ರವಿ