ಕೆಂಗೇರಿ ಉಪನಗರದ ಜೆ.ಎಸ್,ಎಸ್ ಇಂಜಿನಿಯರಿಂಗ್ ಕಾಲೇಜಿನ ಹಾಸ್ಟೆಲ್ ನಲ್ಲಿ ವಿಧ್ಯಾರ್ಥಿನಿ ನೇಟು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ . ಭೀಧರ ಜಿಲ್ಲಾ ಮೂಲದ ನಿವಾಸಿ , ಶಿವಾನಿ (21) ಮೃತ ವಿಧ್ಯಾರ್ಥಿನಿ . ಕೆಂಗೇರಿ ಉಪ ನಗರದಲ್ಲಿನ ಜೆ.ಎಸ್ ಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬಿಇ ಓದುತ್ತಿದ್ದ ಕುಮಾರಿ ಶಿವಾನಿ, ಬೆಂಗಳೂರು ವಸತಿ ನಿಲಯದಲ್ಲಿ ಆತ್ಮಹತ್ಯೆಯ ಘಟನೆಯ ಸುದ್ದಿ ತಿಳಿದು ಕುಟುಂಬದವರ ರೋಧನ ಈ ಆತ್ಮಹತ್ಯೆಯ ಸುತ್ತ , ಅನುಮಾನದ ಹುತ್ತ ,ಅಡಗಿದ್ದ ಈ ಅನುಮಾನಸ್ಪದ ಸಾವಿಗೆ ಕಾರಣವೇನು. ಈ ವಿಧ್ಯಾರ್ಥಿನಿ ಶಿವಾನಿಯ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂದು, ಈ ವಿಧ್ಯಾರ್ಥಿನಿಯ ಸಾವಿನ ಸುದ್ದಿ ತಿಳಿದು. ರಾಜ್ಯ ಹಡಪದ ಅಪ್ಪಣ ಸಮುಧಾಯದ ಪದಾಧಿಕಾರಿಗಳು ಮತ್ತು ರಾಜ್ಯ ಹಡಪದ ನೌಕರಸ್ಥರ ಸಂಘದ ಪದಾಧಿಕಾರಿಗಳು ದೌಡು, ಜೆ.ಎಸ್.ಎಸ್ ಕಾಲೇಜ್ ಪ್ರೀನ್ಸಿಪಾಲ್ ಮತ್ತು ಸಿಬ್ಬಂದಿ ವರ್ಗ ಆಡಳಿತದವರ ಮೇಲೆ ಹಾಗೂ ವಸತಿ ನಿಲಯ ವಾರ್ಡನ್ ಗಳ ಸಿಬ್ಬಂದಿ ವರ್ಗದವರ ಮೇಲೆ ಕೆಂಗೇರಿ ಪೋಲಿಸ್ ಠಾಣೆಯಲ್ಲಿ ಎಫ್.ಐ.ಆರ್ ಕೇಸ್ ದಾಖಲು ಮಾಡಲಾಗಿದೆ ತಪ್ಪಿಸ್ಥರು ಯಾರೇ ಇರಲಿ ಅವರಿಗೆ ಕಾನೂನಿನ ಪ್ರಕಾರ ಶಿಕ್ಷೆ ಆಗಲಿ ಎಂದು ಕುಟುಂಬದವರ ಒತ್ತಾಯ,
ಈ ಸಂಧರ್ಭದಲ್ಲಿ:-ರಾಜ್ಯ ಹಡಪದ ಸಮಾಜದ ಪ್ರಧಾನ ಕಾರ್ಯದರ್ಶಿ:- ಚಿದಾನಂದ ಹಡಪದ ಬಸರಕೋಡ ಅವರು, ಮತ್ತು ಮೃತ ವಿಧ್ಯಾರ್ಥಿನಿಯ ತಂದೆ: ಕಾಶಿನಾಥ ಹಡಪದ , ರವೀಂದ್ರ ನಾಥ ಡಿಗ್ಗಿ,ಬೆಂಗಳೂರು ವೀಭಾಗದ ರಾಜ್ಯ ಹಡಪದ ಸಮಾಜದ ಸಂಘಟನಾ ಕಾರ್ಯದರ್ಶಿ ಅಂಬ್ರೇಶ ಮುದ್ದಗಲ್ಲ್, ಮತ್ತು ಬಸವರಾಜ ಹಡಪದ ಬೆಂಗಳೂರು ಮುಖಂಡರು, ಮತ್ತು ಶಾಂತಕುಮಾರ ಹಡಪದ ಬೆಂಗಳೂರು , ಹಾಗೂ ಭೀದರ ಜಿಲ್ಲಾ ಹಡಪದ ಸಮಾಜದ ಭಾಂಧವರು ,ಮತ್ತು ನೌಕರಸ್ಥರ ಹಡಪದ ಸಮಾಜದ ಭಾಂಧವರು ಉಪಸ್ಥಿತಿಯಲ್ಲಿದ್ದರು.
ವರದಿ:- ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್