60 total views
ಮಹಾಲಿಂಗಪುರ : ರಬಕವಿ ಬನಹಟ್ಟಿ ತಾಲೂಕಿನ ಮಹಾಲಿಂಗಪುರ ಕಲಾವಿದರ ತವರು ಇಲ್ಲಿನ ಅನೇಕ ಕಲಾವಿದರು ರಾಜ್ಯ ಅಂತಾರರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಕಲೆ ಪ್ರದರ್ಶಿಸಿ ವಿಶ್ವಕ್ಕೆ ಮಹಾಲಿಂಗಪುರವನ್ನು ಪರಿಚಯಿಸಿದ್ದಾರೆ, ಕರಡಿ ಮಜಲು, ಕಲೆ ವಿಶ್ವ ಪ್ರಸಿದ್ಧ,ಪಾರಿಜಾತ ಬೈಲಾಟ,ರಾಜ್ಯ ಅಂತರರಾಜ್ಯ ಮಟ್ಟದಲ್ಲಿ ಪ್ರದರ್ಶನಗೊಂಡಿದೆ, ಪಾರಿಜಾತ ಕಲಾವಿದೆ ಹೆಸರಿನಲ್ಲಿ ಕೌಜಲಗಿ ನಿಂಗಮ್ಮ ಭವನ ನಿರ್ಮಿಸಿದ್ದು ಅದಕ್ಕೆ ಸಾಕ್ಷಿ , ಹಲವಾರು ಭಜನಾ ಕಲಾವಿದರು, ಹಂತಿ ಹಾಡು, ಬಿಸುವ ಕಲ್ಲು ಹಾಡು, ಜೋಗುಳ ಹಾಡು, ಶೋಭಾನ ಹಾಡು,ಡೊಳ್ಳಿನ ಹಾಡು,ಭಾವ ಗೀತೆಗಳು,ಒಟ್ಟಾರೆಯಾಗಿ ಜನಪದ ಕಲೆ ವಿಶ್ವದ ಎಲ್ಲ ಕಲೆಗಳ ತಾಯಿ ಇದ್ದಂತೆ. ಮಹಾಲಿಂಗಪುರದ ಶ್ರೀ ಗಿರಿಮಲ್ಲೇಶ್ವರ ಆಶ್ರಮದಲ್ಲಿ ನಡೆದ ಕರ್ನಾಟಕ ಜಾನಪದ ಪರಿಷತ್ ತಾಲೂಕ ಹಾಗೂ ವಲಯ ಘಟಕಗಳ ಉದ್ಘಾಟನಾ ಪೂರ್ವ ಭಾವಿ ಸಭೆಯನ್ನು ಉದ್ದೇಶಿಸಿ ಮಹಾಲಿಂಗಪುರ ಕಾ, ನಿ,ಪ, ಸಂಘದ ಅಧ್ಯಕ್ಷರಾದ ಮಹೇಶ ಆರಿ ಮಾತನಾಡಿದರು. ಇದೇ ಸಂಧರ್ಭದಲ್ಲಿ ರಬಕವಿ ಬನಹಟ್ಟಿ ತಾಲೂಕಿನ ಕ ಜಾ ಪ ಅಧ್ಯಕ್ಷರಾಗಿ ಆಯ್ಕೆಯಾದ ಮಹಾಲಿಂಗಪುರದ ಡಾ ಮಹಾದೇವ ಕದ್ದಿಮನಿ, ಪತ್ರಿಕಾ ಪ್ರತಿನಿಧಿ ಲಕ್ಷ್ಮಣ ಕಿಶೋರ, ಮಹಾಲಿಂಗಪುರ ವಲಯ ಘಟಕದ ಅಧ್ಯಕ್ಷರಾದ ರಮೇಶ ಸಬಕಾಳೆ ಹಿರಿಯ ಪತ್ರಕರ್ತರಾದ ಎಂ ಐ ಡಂಗೆ ಮಾತನಾಡಿದರು, ಮೈಬುಬ ಸನದಿ, ಬಾಬು ಜೇಡರ, ಚನ್ನಪ್ಪ ಹುನ್ನೂರ, ಶಂಕರ್ ನೀಲಾರಿ,ಶಿವಾನಂದ ಬುರುಡ, ಸೇರಿದಂತೆ ಹಲವರು ಭಾಗವಹಿಸಿದರು.ಕಾರ್ಯಕ್ರಮವನ್ನು ಸಂಘಟನಾ ಕಾರ್ಯದರ್ಶಿ ಪ್ರೊಪೆಸರ್ ಭೀಮಶಿ ನೇಗಿನಾಳ ನಿರೂಪಿಸಿ ವಂದಿಸಿದರು.
ವರದಿ ಮಹೇಶ್ ತೇಲಿ