70 total views
ದಿನಾಂಕ ೦೫.೦೭.೨೦೨೨ ರಂದು ಹುಮನಾಬಾದ ನಗರದಲ್ಲಿರುವ ಆರ್ಬಿಟ್ ಸಂಸ್ಥೆಯ ಸಭಾಂಗಣದಲ್ಲಿ ಒಂದು ತಿಂಗಳ “ವಾಹನ ಚಲಾವಣೆ ತರಭೇತಿ ಉದ್ಘಾಟನೆ” ಕಾರ್ಯಕ್ರಮವು ಹಮ್ಮಿಕೊಳ್ಳಲಾಯಿತ್ತು. ಈ ಕಾರ್ಯಕ್ರಮದಲ್ಲಿ ಆರ್ಬಿಟ್ ಸಂಸ್ಥೆಯ ನಿರ್ದೇಶಕರಾದ ವಂದನೆಯ ಫಾ. ವಿಕ್ಟರ್ ವಾಸ್‌ರವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ, ಈ ಒಂದು ತಿಂಗಳ ತರಬೇತಿಯು ಮುಖ್ಯವಾಗಿ ಬಡ ಮಕ್ಕಳಿಗೆ ಮುಂದಿನ ಜೀವನಕ್ಕೆ ಸಹಾಯವಾಗಲಿ ಮತ್ತು ಈ ತರಭೇತಿಯಿಂದ ನಿಮ್ಮ ಮುಂದಿನ ಜೀವನಕ್ಕೆ ಅವಶ್ಯಕತೆಗೆ ಅನುಗುಣವಾಗಿ ನೀವು ನಿಮ್ಮ ಸ್ವಂತ ಉದ್ಯೋಗವನ್ನಾಗಿ ಕಲ್ಪಿಸಿಕೊಳ್ಳಲು ಸಹಾಯ ಮಾಡಿಕೊಳ್ಳಬಹುದು ಮತ್ತು ಈ ಒಂದು ತಿಂಗಳ ತರಭೇತಿಗೆ ನೀವು ದಿನಾಲು ಬಂದು ಕಲಿತು ಈ ತರಭೇತಿ ನಿಮ್ಮ ಮುಂದಿನ ಜೀವನಕ್ಕೆ ಆಧಾರವಾಗಲಿ ಎಂದು ಹೇಳಿ ತರಭೇತಿದಾರರಿಗೆ ಶುಭಕೋರಿದ್ದರು. ತದ ನಂತರ ಎಕ್ಸಲೇನ್ಟ್ ಡ್ರೈವಿಂಗ್ ತರಭೇತಿ ಶಾಲೆಯ ಸಿಬ್ಬಂದಿಯಾದ ಶ್ರೀಯುತ ರಾಹುಲ್ ರವರು ಮಾತನಾಡುತ್ತಾ ಅವರ ತರಭೇತಿ ನೀಡುವ ಕುರಿತು ಮಾತನಾಡಿದ್ದರು. ಈ ಕಾರ್ಯಕ್ರಮದಲ್ಲಿ ಆರ್ಬಿಟ್ ಸಂಸ್ಥೆಯ ಕಾರ್ಯಕ್ರಮದ ವ್ಯವಸ್ಥಾಪಕಾದ ಸಿ. ವಿಲ್ಮಾ, ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮದ ಸಂಯೋಜಕಿಯಾದ ಶ್ರೀಮತಿ ನಿರ್ಮಲಾ ಮತ್ತು ಆರ್ಬಿಟ್ ಸಂಸ್ಥೆಯ ಸಿಬ್ಬಂದಿ ವರ್ಗದವರು ಹಾಗೂ ತರಭೇತಿದಾರರು ಉಪಸ್ಥಿತರಿದ್ದರು. .
ನಿರೂಪಣೆ: ಶ್ರೀಮತಿ ನಿರ್ಮಲಾ
ಸ್ವಾಗತ : ಶ್ರೀ ಅರುಣಕುಮಾರ
ಧನ್ಯವಾದ : ಕುಮಾರ. ವಿದ್ಯಾಸಾಗರ