ಕರ್ನಾಟಕ ಪಬ್ಲಿಕ್ ಶಾಲೆಯ ಶ್ರೀ ಶಂಕರ ಕಾಶಿ ಜಾಧವ ಸರಕಾರಿ ಪ್ರೌಢಶಾಲೆ ಮುಗಳಿಹಾಳ ತಾಲೂಕ ಖಾನಾಪುರ. ದಿನಾಂಕ 21-6- 2022 ರಂದು ಶಾಲೆಯಲ್ಲಿ ಎಂಟನೆಯ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಅತ್ಯಂತ ಅದ್ದೂರಿಯಿಂದ ಆಚರಿಸಲಾಯಿತು ಸದರಿ ಕಾರ್ಯಕ್ರಮವನ್ನು ಉದ್ದೇಶಿಸಿ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಸಿ ಆರ್ ಕಂದಗಲ್ ಇವರು ಯೋಗ ಅದರ ಅರ್ಥ ಮತ್ತು ಮಹತ್ವವನ್ನು ಹೇಳುತ್ತ ಯೋಗದಿಂದ ಆರೋಗ್ಯಕ್ಕೆ ಆಗುವ ಹಲವಾರು ಲಾಭಗಳನ್ನು ಮನ ಮುಟ್ಟುವಂತೆ ಹೇಳಿ ಯೋಗವು ದೈನಂದಿನ ಜೀವನದ ಭಾಗವಾಗಬೇಕು ಎಂದು ಹೇಳಿದರು. ತದನಂತರ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ಎಸ್ ಬಿ ಅಂಬಡಗಟ್ಟಿ ಇವರು ಯೋಗ ಪ್ರಾರ್ಥನೆಯೊಂದಿಗೆ ಯೋಗಾಸನ ಕಾರ್ಯಕ್ರಮವನ್ನು ಆರಂಭಿಸಿ ಪ್ರೌಢ ಹಂತದ ವಿದ್ಯಾರ್ಥಿಗಳು ಮಾಡಬಹುದಾದ ಯೋಗಾಸನಗಳನ್ನು ಮಾಡಲು ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಮಾರ್ಗದರ್ಶಿಸಿದರು ಈ ಯೋಗ ದಿನಾಚರಣೆಯ ಕಾರ್ಯಕ್ರಮದಲ್ಲಿ ಶಾಲೆಯ ಮಕ್ಕಳು ಮತ್ತು ಸಿಬ್ಬಂದಿ ವರ್ಗದವರು ಅತ್ಯಂತ ಶಿಸ್ತು ಮತ್ತು ಆಸಕ್ತಿಯಿಂದ ಭಾಗವಹಿಸಿದರು.
ವರದಿ- ಮುತ್ತು ದೇವನಪ್ಪಗೊಳ