ಯಳಂದೂರು ಪಟ್ಟಣದ ವಿವಿಧ ಶಾಲೆ ಕಾಲೇಜುಗಳಲ್ಲಿ 8ನೇ ಯೋಗ ದಿನಾಚರಣೆಯನ್ನು ಆಚರಿಸಲಾಯಿತು ಪಟ್ಟಣದ ಸರ್ಕಾರಿ ಪಬ್ಲಿಕ್ ಶಾಲೆಯ ಆವರಣದಲ್ಲಿ ಎಲ್ಲಾ ವಿದ್ಯಾರ್ಥಿಗಳು ಯೋಗಾಭ್ಯಾಸ ಮಾಡಿದರು ತಾಲೂಕಿನ ವಿವಿಧ ಶಾಲೆಗಳಾದ ಲಯನ್ಸ್ ಶಾಲೆ ಎಸ್ ಡಿ ವಿ ಎಸ್ ಶಾಲೆ ಹಾಗೂ ಸರ್ಕಾರಿ ಶಾಲೆಗಳಲ್ಲಿ ಯೋಗಾಭ್ಯಾಸ ಮಾಡಿದರು ನಂತರ ಮಾತನಾಡಿದ ಯರಿಯೂರು ಸರ್ಕಾರಿ ಶಾಲೆಯ ದೈಹಿಕ ಶಿಕ್ಷಕರಾದ ಮಹದೇವ್ ರವರು ಯೋಗವು ಮನಸ್ಸು ಹಾಗೂ ದೇಹವನ್ನು ಸದ್ರುಡವಾಗಿ ಇಡಲು ದೇಹವನ್ನು ದಂಡಿಸಬೇಕು ಈ ಯೋಗಾಭ್ಯಾಸವು ಪ್ರಾಚೀನ ಕಾಲದಿಂದಲೂ ನಡೆದು ಬಂದಿದೆ ಎಂದು ತಿಳಿಸಿದರು .
ವರದಿ ಆರ್ ಉಮೇಶ್