ರೋಗಮುಕ್ತ ಬದುಕಿಗೆ ಯೋಗ ಮದ್ದು: ಓಂಪ್ರಕಾಶ್ ಮನುಷ್ಯ ಬದುಕಿನಲ್ಲಿ ಹಣ, ಆಸ್ತಿ-ಅಂತಸ್ತು, ಅಧಿಕಾರ ಸಂಪಾದಿಸಲು ಎಷ್ಟು ಹಂಬಲಿಸುತ್ತಾರೋ, ಅದಕ್ಕಿಂತ ಹೆಚ್ಚಾಗಿ ನಮ್ಮ ಆರೋಗ್ಯ ಉತ್ತಮ ಪಡಿಸಿಕೊಳ್ಳುವುದು ಬಹು ಮುಖ್ಯವಾಗಿದೆ. ಎಂದು ಯೋಗ ಶಿಕ್ಷಕ ಓಂಪ್ರಕಾಶ್ ಹೆಬ್ಬಾಳ ತಿಳಿಸಿದರು. ಭಾರತೀಯ ಜನತಾ ಪಕ್ಷ ಚಿಂಚೋಳಿ ಮಂಡಲ ವ್ಯಾಪ್ತಿಯ ಕಾಳಗಿ ತಾಲೂಕಿನಲ್ಲಿ ಮಂಗಳವಾರ ಶ್ರೀ ನೀಲಕಂಠ ಕಾಳೇಶ್ವರ ದೇವಸ್ಥಾನದ ಆವರಣದಲ್ಲಿ ಬೆಳಿಗ್ಗೆ ಏರ್ಪಡಿಸಲಾಗಿದ್ದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಶಿಬಿರಾರ್ಥಿಗಳು ನನ್ನು ದ್ದೇಶಿಸಿ, ಅವರು ಮಾತನಾಡಿದರು.ಮನುಷ್ಯ ರೋಗ ಮುಕ್ತ ಬದುಕು ಸಾಗಿಸಬೇಕಾದರೆ ಯೋಗ ಒಂದೇ ಮದ್ದು ಎಂದ ಅವರು, ಯೋಗಿಗಳಿಗೆ ಮಾತ್ರ ಯೋಗ ಎಂಬುವುದಲ್ಲ. ತಮ್ಮ ತಮ್ಮ ಆರೋಗ್ಯವನ್ನು ಉತ್ತಮ ಪಡಿಸಿಕೊಂಡು ಸಮಾಜದಲ್ಲಿ ಯೊಗ್ಯರಾಗಿಬಾಳಲು ಕೂಡಾ ಯೋಗತಿಳಿಸಿಕೊಡುತ್ತದೆ ಎಂದರು.ಜಿಲ್ಲಾ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಕೋಶಾಧ್ಯಕ್ಷ ರಾಜಕುಮಾರ ರಾಜಾಪುರ ಕಾಳಗಿ ಅವರು, ಮಾತನಾಡಿ, ದೇಶದ ಪ್ರಧಾನಿ ನರೇಂದ್ರ ಮೋದಿಜೀ. ಅವರು, ಜನಸಾಮಾನ್ಯರ ಆರೋಗ್ಯದ ಹಿತದೃಷ್ಟಿಯಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಚರಿಸಲಾಗುವ ಯೋಗ ಶಿಬಿರಗಳಿಗೆ ಯೊಗ್ಯವಾದ ರೀತಿಯಲ್ಲಿ ಮನ್ನಣೆ ನೀಡಿ, ಹೆಚ್ಚಿನ ಮಟ್ಟದಲ್ಲಿ ಆಚರಣೆಗೆ ತರುವ ಪ್ರಯತ್ನ ದಲ್ಲಿದ್ದಾರೆಂದರು. ಯೋಗದ ದಿನವನ್ನು ದೊಡ್ಡ ಹಬ್ಬದಂತೆ ಆಚರಣೆಗೆ ತರುವ ಉದ್ದೇಶವೆಂದರೆ ತಮ್ಮ ಆರೋಗ್ಯ ಸರಿಯಿದ್ದರೆ ಮಾತ್ರ ಎಲ್ಲಾ ಹಬ್ಬಗಳು ಸಂತೋಷದಿಂದಾಚರಣೆ ಮಾಡಲು ಸಾಧ್ಯ. ಇಲ್ಲವಾದರೆ ಎಲ್ಲವೂ ಶೂನ್ಯ ಕಾರಣ ಆರೋಗ್ಯದ ಹಬ್ಬದ ಉತ್ತಮ ಪಡಿಸಬೆಕೆಂಬುವುದೆ ಮೋದಿಜೀ…ಅವರ ಮೂಲಮಂತ್ರ ಸಾಗಿದೆ ಎಂದರು. ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆಗಳಿಂದ ಹಿರಿಯರು, ಗಣ್ಯನಾಗರಿಕರು, ಯುವಕರು, ಶಾಲಾ ಮಕ್ಕಳು ಉಪಸ್ಥಿತರಿದ್ದರು. ಯೋಗ ಶಿಕ್ಷಕರಾದ ಓಂಪ್ರಕಾಶ್ ಹೆಬ್ಬಾಳ ಹಾಗೂ ಯಲ್ಲಾಲಿಂಗ ಪಾಟೀಲ ಕಾಳಗಿ ಯೋಗ ಶಿಬಿರವನ್ನು ಅಚ್ಚುಕಟ್ಟಾಗಿ ನಡೆಸಿಕೊಟ್ಟರು. ಶಿಬಿರದ ಕೊನೆಯಲ್ಲಿ ಯೋಗಾಭ್ಯಾಸ ಮಾಡಿದವರೆಲ್ಲರಿಗೂ ವಿವಿಧ ಧಾನ್ಯಗಳಿಂದ ತಯ್ಯಾರಿಸಲ್ಪಟ್ಟಿರುವ ಮೋಳಕೆ ಕಾಳುಗಳು, ಸೇಬು ಹಣ್ಣುಗಳು, ಖಜೂರು, ಬಾದಾಮು ಸೇರಿ ಅಲ್ಪ ಉಪಹಾರ ಮಾಡಿಸಲಾಯಿತು. ಜಿಲ್ಲಾ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಕೋಶಾಧ್ಯಕ್ಷ ರಾಜಕುಮಾರ ರಾಜಾಪುರ ಕಾಳಗಿ, ಪಕ್ಷದ ಹಿರಿಯ ಮುಖಂಡ ಅಣ್ಣರಾವ ಪೆದ್ದಿ ಕೋಡ್ಲಿ, ಸಿದ್ದು ಕೇಶ್ವಾರ ಸುಗೂರ(ಕೆ), ಮಂಜುನಾಥ, ಜಗದೀಶ ಪಾಟೀಲ ಕಾಳಗಿ, ಹೆಬ್ಬಾಳ, ಬಲರಾಮ ವಲ್ಲ್ಯಾಪುರ, ರಮೇಶ ಕಿಟ್ಟದ, ವಿಷ್ಣುಕಾಂತ ಪರುತೆ, ಗಣೇಶ ಸಿಂಗಶೆಟ್ಟಿ, ಕೃಷ್ಣಾ ಸಿಂಗಶೆಟ್ಟಿ, ಶ್ರೀ ಶೈಲ ಭೈರಪ್ಪ, ಸಿದ್ದು ಹಿರೇಮಠ, ಭೀಮರಾಯ ಕುಡ್ಡಳ್ಳಿ, ಶಿವಾನಂದ ಮಲಘಾಣ, ಸುನೀಲ ರಾಜಾಪೂರ, ಶಿವುಕುಮಾರ ಕದಂ, ಭೀಮರಾಯ ಮಲಘಾಣ, ಪ್ರಕಾಶ ಕದಂ, ಹಣಮಂತ ರಾಜಾಪೂರ ಸೇರದಂತೆ ಅನೇಕರಿದ್ದರು. ಭಾರತೀಯ ಜನತಾ ಪಕ್ಷ ಚಿಂಚೋಳಿ ಮಂಡಲ ವ್ಯಾಪ್ತಿಯ ಕಾಳಗಿ ತಾಲೂಕಿನಲ್ಲಿ ಮಂಗಳವಾರ ಶ್ರೀ ನೀಲಕಂಠ ಕಾಳೇಶ್ವರ ದೇವಸ್ಥಾನದ ಆವರಣದಲ್ಲಿ ಬೆಳಿಗ್ಗೆ ಏರ್ಪಡಿಸಲಾಗಿದ್ದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಶಿಬಿರಾರ್ಥಿಗಳು ವಿವಿಧ ಆಸನಗಳಲ್ಲಿ ತೊಡಗಿರುವುದು. ಬಿಜೆಪಿ ಯುವ ಮುಖಂಡ ರಾಜಕುಮಾರ ರಾಜಾಪುರ ಕಾಳಗಿ, ನಾಗರಾಜ ಹಾವಗುಂಡಿ, ಉದಯಕುಮಾರ ಸುಂಠಾಣ, ಜಗದೀಶ ಪಾಟೀಲ, ವಿರಣ್ಣಗೌಡ ತೆಂಗಳಿ, ನಾಗು ಪಾಟೀಲ ಹೊಸ್ಸಳ್ಳಿ ಇದ್ದರು.
ವರದಿ ಶ್ರೀಮಂತ ಆರ್ ಮೇಳಕುಂದಿ