ಅಣ್ಣಿಗೇರಿ : ಭಾರತ ಸರ್ಕಾರ ಕರ್ನಾಟಕ ಸರ್ಕಾರ, ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ ಧಾರವಾಡ, ಜಿಲ್ಲಾ ಆಯುಷ ಇಲಾಖೆ ಧಾರವಾಡ, ಭಾರತೀಯ ಪುರಾತತ್ವ ಸರ್ವೇಕ್ಷಣಾ ಧಾರವಾಡ ವಲಯ ಇವರೇಲ್ಲರ ಸಹಯೋಗದೊಂದಿಗೆ ಎಂಟನೆಯ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಅಣ್ಣಿಗೇರಿಯ ಶ್ರೀ ಅಮೃತೇಶ್ವರ ದೇವಸ್ಥಾನದಲ್ಲಿ ಆಚರಣೆ ಮಾಡಲಾಯಿತು* ಕಾರ್ಯಕ್ರಮದ ಸಾನಿಧ್ಯವನ್ನು ಅಣ್ಣಿಗೇರಿ ದಾಸೋಹ ಮಠದ ಶ್ರೀ ಶ್ರೋ ಬ್ರ ಶಿವಕುಮಾರ ಮಹಾಸ್ವಾಮಿಗಳು ಹಾಗೂ ಸದ್ಗುರು ಸಮರ್ಥ ಶ್ರೀ ಡಾ: ಎ ಸಿ ವಾಲಿ ಮಹಾರಾಜರು ವಹಿಸಿದ್ದರು ಅಧ್ಯಕ್ಷತೆಯನ್ನು ಸಚಿವರಾದ ಶಂಕರ ಪಾಟೀಲ ಮುನೇನಕೊಪ್ಪ ಅವರು ವಹಿಸಿದ್ದರು ಉದ್ಘಾಟನೆಯನ್ನು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಹಾಲಪ್ಪ ಆಚಾರ್ಯ ಅವರು ನೆರವೇರಿಸಿದರು ಧಾರವಾಡ ಜಿಲ್ಲಾ ಅಧಿಕಾರಿಗಳು, ಜಿಲ್ಲಾ ಪಂಚಾಯತ ಸಿ ಇ ಒ ಅವರು, ಮತ್ತು ಅಣ್ಣಿಗೇರಿ ತಾಲ್ಲೂಕಿನ ಸರಕಾರಿ ಎಲ್ಲ ಇಲಾಖೆಯ ಅಧಿಕಾರಿಗಳು, ಹಾಗೂ ನಗರದ ಸಾವಿರಾರು ಮಹಾಜನತೆ ವಿದ್ಯಾರ್ಥಿಗಳು ಮತ್ತು ಯೋಗಾಸಕ್ತರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಯೋಗ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿಸಿದರು.
ವರದಿ : ಲಕ್ಷ್ಮಣ ಭಜoತ್ರಿ (ಅಣ್ಣಿಗೇರಿ )