ಪಾವಗಡ ಗುಬ್ಬಿ ದಲಿತ ಮುಖಂಡ ನರಸಿಂಹಮೂರ್ತಿ ಹತ್ಯೆ ಖಂಡಿಸಿ ಪ್ರತಿಭಟಿಸಿದ ದಲಿತ ಪರ ಹಾಗೂ ಪ್ರಗತಿಪರ ಸಂಘಟನೆಗಳು ಗುಬ್ಬಿ ತಾಲೂಕಿನಲ್ಲಿ ನಡೆದ ಜೋಡಿ ಕೊಲೆ ಜೂನ್ 15ರಂದು ಹಾಡುಹಗಲೇ ಮಾರಕಾಸ್ತ್ರಗಳಿಂದ ತಾಲೂಕು ಡಿಎಸ್ಎಸ್ ಸಂಚಾಲಕ ನರಸಿಂಹಮೂರ್ತಿ ಹತ್ಯೆಯನ್ನು ಖಂಡಿಸಿರುವ ಇಲ್ಲಿನ ಪ್ರಗತಿಪರ ಹಾಗೂ ದಲಿತ ಪರ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ರಸ್ತೆತಡೆ ನಡೆಸಿ ಗೃಹಸಚಿವ ಅರಗ ಜ್ಞಾನೆಂದ್ರ ರಾಜೀನಾಮೆಗೆ ಒತ್ತಾಯಿಸಿದರು ಈ ವೇಳೆ ದಲಿತ ಮುಖಂಡ ಡಿಜೆಸ್ ನಾರಾಯಣಪ್ಪ ಮಾತನಾಡಿ ಜಿಲ್ಲೆಯಲ್ಲಿ ದಲಿತ ರಾಜ್ಯ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದು ಆತಂಕದ ಸಂಗತಿಯಾಗಿದೆ ಕೂಡಲೇ ಸರಕಾರ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರಿಗೆ ನೀಡಲು ಗಮನ ಹರಿಸಬೇಕೆಂದು ತಿಳಿಸಿದರು ದಲಿತ ಮುಖಂಡ ತಿಪ್ಪೇಸ್ವಾಮಿ ಮಾತನಾಡಿ ರಾಜ್ಯ ಬಿಜೆಪಿ ಸರ್ಕಾರ ದಲಿತರ ಮೇಲಿನ ದೌರ್ಜನ್ಯ ಮತ್ತು ಹತ್ಯೆಗಳನ್ನು ನಿಲ೯ಕ್ಷ್ಯತನದಿಂದ ನೋಡುತ್ತಿದ್ದು ತಳವರ್ಗದ ದಲಿತರಿಗೆ ನೆಲೆ ಇಲ್ಲದಂತಾಗುತ್ತದೆ ಇದು ತುಂಬಾ ಬೇಸರ ಸಂಗತಿಯಾಗಿದ್ದು ಸರಕಾರ ಎಚ್ಚೆತ್ತು ಅವರಿಗೆ ತಕ್ಕ ಶಿಕ್ಷೆಗೆ ಗುರಿಪಡಿಸಬೇಕು ಎಂದರು ಪ್ರಗತಿಪರ ಸಂಘಟನೆಯ ಮುಖಂಡ ಮಾತನಾಡಿ ಜಿಲ್ಲೆಯ ಗುಬ್ಬಿ ತಾಲ್ಲೂಕಿನಲ್ಲಿ ಪರಿಶಿಷ್ಟ ಜಾತಿ ಪಂಗಡ ಯುವಕರ ಕೊಲೆ ಪ್ರಕರಣ ಮಾಸುವ ಮುನ್ನವೇ ಗುಬ್ಬಿ ಪಟ್ಟಣದಲ್ಲಿ ಡಿಎಸ್ಎಸ್ ಸಂಚಾಲಕ ನರಸಿಂಹಮೂರ್ತಿ ಹತ್ಯೆ ಖಂಡನೀಯ ದಲಿತರಿಗೆ ರಕ್ಷಣೆ ನೀಡದ ಗೃಹ ಸಚಿವರು ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಉಪತಹಸೀಲ್ದಾರ್ ಸುಮತಿ ಅವರಿಗೆ ಮನವಿ ಪತ್ರ ಸಲ್ಲಿಸಿದರು ಮುಖಂಡರಾದ ಹನುಮಂತರಾಯ ಜಿಲ್ಲಾ ಸಂಚಾಲಕರ HRFDL, ಪೆದ್ದನ್ನ ಸೀ ಕೆ ತಿಪ್ಪೇಸ್ವಾಮಿ ನರಸಿಂಹಪ್ಪ ತಾಲೂಕು ಸಂಚಾಲಕರು HRFDL ಡಿಜೆ ಎಸ್ ನಾರಾಯಣಪ್ಪ ವೊಳ್ಳುರ್ ನಾಗೇಶ ಬಿಕೆ ನಾಗರಾಜು ಕಡಮಲಕುಂಟೆ ಹನುಮಂತರಾಯ ಮಾದಿಗ ದಂಡೋರ ತಾಲೂಕು ಅಧ್ಯಕ್ಷರು ಹನುಮಂತರಾಯ ಬಿಎಸ್ಪಿ ತಾಲೂಕು ಅಧ್ಯಕ್ಷರು ವೆಂಕಟರಮಣ ಬಿಎಸ್ಪಿ ಕಡಪಳಕೆರೆ ಪ್ರಕಾಶ್ ದಲಿತ ಮುಖಂಡರು ವೆಂಕಟೇಶ್ ಪನ್ನಸಮುದ್ರ ಟಮಟೆ ಸಂಸ್ಥೆ ನರಸಿಂಹಪ್ಪ ಮೀನುಗುಂಟನಹಳ್ಳಿಡಿಎಸ್ಎಸ್ ಗಂಗಾಧರ ಪಳವಳ್ಳಿ ಪಾಳೇಗಾರ ಲೋಕೇಶ್ ವಾಲ್ಮೀಕಿ ಸಂಘ ಚಂದ್ರಶೇಖರ್ ವಾಲ್ಮೀಕಿ ಸಂಘ ಕನ್ನಮೇಡಿ ಕೃಷ್ಣಮೂತಿ೯ ಮಹಾ ಆದಿಗ ಸಂಘಟನೆ ರಾಜ್ಯಾಧ್ಯಕ್ಷರು ಮುಂತಾದವರಿದ್ದರು.