ಗಂಗಾವತಿ: ಸ್ನೇಹಜೀವಿ ದಿ.ನಾಗರಾಜ್ ನಾಗಪ್ಪ ಶಿರವಾರ ನಗರ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಕಲಾ ಸಂಘ (ರಿ) ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಪ್ಪಳ ಇವರ ಸಂಯುಕ್ತಾಶ್ರಯದಲ್ಲಿ “ನರ-ನಾಗರು” ನಾಟಕ ಪ್ರದರ್ಶನ ನಡೆಯಲಿದೆ ಎಂದು ಕಲಾವಿದ ವಿರುಪಾಕ್ಷಪ್ಪ ಶಿರವಾರ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದಿನಾಂಕ,12.06.2022 ರಂದು ಭಾನುವಾರ ರಾತ್ರಿ9.30 ಕ್ಕೆ ಗಂಗಾವತಿಯ ನೀಲಕಂಠೇಶ್ವರ ವೃತ್ತದ ಬಳಿಉ ಪಬ್ಲಿಕ್ ಕ್ಲಬ್ ಆವರಣದಲ್ಲಿ ನರ-ನಾಗರು ನಾಟಕ ಪ್ರದರ್ಶನ ನಡೆಯಲಿದೆ. ಕಾರ್ಯಮದ ಸಾನಿಧ್ಯ ರೇವಣಸಿದ್ದ ತಾತ, ಅಧ್ಯಕ್ಷತೆ ಸಚಿವ ಹಾಲಪ್ಪ ಆಚಾರ್, ಸಂಸದ ಕರಡಿ ಸಂಗಣ್ಣ ವಹಿಸಲಿದ್ದಾರೆ. ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ ಅವರು ಕಾರ್ಯಕ್ರಮದ ಜ್ಯೋತಿ ಬೆಳಗಿಸುವವರು, ಅಲ್ಟೆಕ್ ಇಂಜಿನಿಯರಿಂಗ್ ಕನ್ಸಟ್ರೇಕ್ಷನ್ ಬೆಂಗಳೂರು ಇವರು ಕಾರ್ಯಕ್ರಮ ಉದ್ಘಾಟಿಸುವರು, ಮುಖ್ಯ ಅತಿಥಿಯಾಗಿ ಶಾಸಕ ಪರಣ್ಣ ಮುನವಳ್ಳಿ ಸೇರಿದಂತೆ ಇತರರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು. ಕೊಪ್ಪಳ, ಗಂಗಾವತಿ, ಕುಷ್ಟಗಿ ಸೇರಿದಂತೆ ನಾನಾ ಕಡೆಯಿಂದ ಸಾರ್ವಜನಿಕರು ಆಗಮಿಸಿ ಕಲಾವಿದರಿಗೆ ಪ್ರೋತ್ಸಾಹ ನೀಡಬೇಕು ಎಂದರು. ಈ ವೇಳೆ ಕಲಾವಿದರಾದ ಮಾರುತಿ ಐಲಿ, ಅಡವಯ್ಯಸ್ವಾಮಿ, ಬಸವರಾಜ್ ಗೋನಾಳ, ಎ.ಶಿವಕುಮಾರ್, ಮಂಜುನಾಥ ಸೇರಿದಂತೆ ಇತರರು ಇದ್ದರು.