ಸಿರುಗುಪ್ಪ ತಾಲೂಕಿನ ಕೆಂಚನಗುಡ್ಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಕೆ. ತಾಂಡದಲ್ಲಿ ಒಂದನೇ ಮತ್ತು ಎರಡನೇ ಅಂಗನವಾಡಿ ಕೇಂದ್ರಗಳ ಮುಂಭಾಗದಲ್ಲಿ ದುರ್ವಾಸನೆಯಿಂದ ಗಬ್ಬುನಾರುತ್ತಿರುವ ಕೊಳಚೆ ನಿಂತ ನೀರು,
ತಾಂಡಾ ಗ್ರಾಮದ ಅಂಗನವಾಡಿ ಶಾಲೆಗೆ ಬರುವ ಮಕ್ಕಳು ಮೂಗು ಬಾಯಿ ಮುಚ್ಚಿಕೊಂಡು ಪಾಠ, ಆಟ ಕಲಿಯಬೇಕಾಗಿದೆ. ಶಾಲೆಯೊಳಗೆ ಹೋಗಲು ಕೊಳಚೆ ನಿಂತ ನೀರಿನ ಮೇಲೆ ನಡೆದುಕೊಂಡು ಹೋಗುವ ಪರಿಸ್ಥಿತಿ ಉಂಟಾಗಿದೆ.
ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಇದಾರೆ ಇಲ್ಲ ಗೊತ್ತಿಲ್ಲ ಎಂಬ ಪ್ರಶ್ನೆ ಗ್ರಾಮಸ್ಥರಲ್ಲಿ ಆತಂಕ ಉಂಟಾಗಿದೆ. ಅಧಿಕಾರಿಗಳು ಇತ್ತಕಡೆ ಮುಖ ಪ್ರದರ್ಶನ ತೋರಿಸಬೇಕೆಂದು ಗ್ರಾಮಸ್ಥರ ಆಕ್ರೋಶ.
ವರದಿ. ಶೇಖರ್ ನಾಯಕ. ಹೆಚ್